ಕೇವಲ ಒಂದು ಗ್ಲಾಸ್ ಹಾಲಿನಿಂದ ಅವಳ ಇಡೀ ಜೀವನವೇ ಬದಲಾಯಿತು-ನಿಜವಾಗಲೂ ನಡೆದ ಘಟನೆಯಿದು

Kannada News
Advertisements

ಒಂದು ದಿನ ಬಡ ಹುಡುಗನೊಬ್ಬನು ತನ್ನ ಶಾಲೆಗೆ ಡೊನೇಷನ್ ಕಟ್ಟುವ ಸಲುವಾಗಿ ಮನೆಯಿಂದ ಮನೆಗೆ ಹೂಗಳನ್ನ ಮಾರುತ್ತಿರುತ್ತಾನೆ. ಕೊನೆಗೆ ಅವನ ಕೈನಲ್ಲಿ ಉಳಿದಿದ್ದು ಕೇವಲ ಬಿಡಿಗಾಸು ಅಷ್ಟೇ. ಆದರೆ ಆ ಹುಡುಗ ಊಟ ಇಲ್ಲದೆ ತುಂಬಾ ಹಸಿದಿರುತ್ತಾನೆ. ಆಗ ಆ ಬಾಲಕ ಮುಂದಿನ ಮನೆಯ ಬಳಿ ಊಟ ಕೇಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದಾಗ್ಯೂ, ಸುಂದರವಾದ ಮಹಿಳೆ ಮನೆಯ ಬಾಗಿಲು ತೆರೆಯುವ ಹೊತ್ತಿಗೆ ಆ ಹುಡುಗ ತುಂಬಾ ಸುಸ್ತಾಗಿರುತ್ತಾನೆ. ಆ ಮಹಿಳೆ ಬಳಿ ಊಟದ ಬದಲು ಒಂದು ಗ್ಲಾಸ್ ನೀರನ್ನ ಕೇಳುತ್ತಾನೆ. ಆದರೆ ಆ ಹುಡುಗ ತುಂಬಾ ಹಸಿದಿರುವುದನ್ನ ಗಮನಿಸಿದ ಆ ಮಹಿಳೆ ಒಂದು ದೊಡ್ಡ ಗ್ಲಾಸ್ ನಲ್ಲಿ ಹಾಲನ್ನ ತೆಗೆದುಕೊಂಡು ಬಂದು ಕೊಡುತ್ತಾಳೆ.

Advertisements

ಹುಡುಗ ನಿಧಾನವಾಗಿ ಹಾಲನ್ನ ಕುಡಿಯುತ್ತಾನೆ. ಬಳಿಕ ಆ ಮಹಿಳೆಗೆ ಎಷ್ಟು ಹಣ ಕೊಡಬೇಕೆಂದು ಕೇಳುತ್ತಾನೆ. ಆದರೆ ಆ ಮಹಿಳೆ ಹೇಳ್ತಾಳೆ, ನೀನು ಏನು ಕೊಡಬೇಕಾಗಿಲ್ಲ. ಕರುಣೆಗಾಗಿ ಯಾವತ್ತೂ ಹಣ ತೆಗೆದುಕೊಳ್ಳಬಾರದು ಎಂಬುದನ್ನ ನನ್ನ ತಾಯಿ ನಮಗೆ ಕಲಿಸಿದ್ದಾಳೆ ಎಂದು ಆ ಮಹಿಳೆ ಹೇಳುತ್ತಾಳೆ.

ಆಗ ಆ ಹುಡುಗ ತನ್ನ ಹೃದಯದಿಂದ ಆಕೆಗೆ ಧನ್ಯವಾದ ತಿಳಿಸುತ್ತಾನೆ. ಬಳಿಕ ಆ ಮನೆಯಿಂದ ಹೊರಟ ಆ ಹುಡುಗ ದೈಹಿಕವಾಗಿ ಬಲಶಾಲಿಯಾಗಿದ್ದ ಅಲ್ಲದೆ, ದೇವರು ಮತ್ತು ಮನುಷ್ಯನ ಮೇಲಿನ ನಂಬಿಕೆ ಕೂಡ ಮತ್ತಷ್ಟು ಭಲವಾಯ್ತು. ಆ ಹುಡುಗ ಏನನ್ನಾದರೂ ಬಿಟ್ಟುಕೊಡಲು, ತೊರೆಯಲು ರೆಡಿಯಾಗಿದ್ದ. ಕೆಲವು ವರ್ಷಗಳು ಕಳೆದ ಬಳಿಕ ಹುಡುಗನಿಗೆ ಹಾಲು ಕೊಟ್ಟಿದ್ದ ಆ ಮಹಿಳೆ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಆದರೆ ಅವರ ಊರಿನ ವೈದ್ಯರು ಆಕೆಯನ್ನ ದೊಡ್ಡ ನಗರದ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಾರೆ.

ಇನ್ನು ಆ ಆಸ್ಪತ್ರೆಯ ಸ್ಪೆಷಲಿಸ್ಟ್ ವೈದ್ಯರಾಗಿದ್ದ ಡಾ. ಕೆಲ್ಲಿ ಅವರನ್ನ ಆ ಮಹಿಳೆಗಿದ್ದ ಕಾಯಿಲೆ ಬಗ್ಗೆ ಸ್ಟಡಿ ಮಾಡಲು ಕರೆಯಲಾಗುತ್ತೆ. ಆ ಮಹಿಳೆ ಬಂದಿರುವ ಊರಿನ ಹೆಸರು ಡಾ. ಕೆಲ್ಲಿಗೆ ಗೊತ್ತಾದಾಗ, ತಕ್ಷಣವೇ ಅವರು ಆ ಮಹಿಳೆ ಅಡ್ಮಿಟ್ ಆಗಿದ್ದ ರೂಮಿನ ಕಡೆ ಆಕೆಯನ್ನ ನೋಡಲು ಹೋಗುತ್ತಾರೆ. ಆ ಮಹಿಳೆಯನ್ನ ನೋಡಿದ ತಕ್ಷಣ ಆ ಮಹಿಳೆ ಯಾರೆಂದು ಡಾ.ಕೆಲ್ಲಿಗೆ ಗೊತ್ತಾಗುತ್ತದೆ. ಮತ್ತೆ ತನ್ನ ರೂಮಿಗೆ ಬಂದ ಕೆಲ್ಲಿ ಆ ಮಹಿಳೆಯ ಜೀವವನ್ನೆ ಉಳಿಸಬೇಕೆಂದು ಪಣ ತೊಡುತ್ತಾನೆ. ಆ ದಿನದಿಂದ ಆಕೆಯ ಮೇಲೆ ವಿಶೇಷವಾದ ಗಮನ ಕೊಡುತ್ತಾನೆ. ಕೆಲವು ದಿನಗಳ ಬಳಿಕ ಆ ಮಹಿಳೆಯ ಕಾಯಿಲೆ ವಾಸಿಯಾಗುತ್ತದೆ.

ಆ ಮಹಿಳೆಯ ಆಸ್ಪತ್ರೆ ಬಿಲ್ಲನ್ನ ತನ್ನ ಬಳಿ ಕಳಿಸುವಂತೆ ಕ್ಯಾಶ್ ಕೌಂಟರ್ ನಲ್ಲಿ ಡಾ.ಕೆಲ್ಲಿ ಕೇಳುತ್ತಾರೆ. ಇನ್ನು ಬಿಲ್ಲನ್ನ ನೋಡಿದ ಬಳಿಕ, ಆ ಬಿಲ್ಲಿನ ಒಂದು ಭಾಗದಲ್ಲಿ ಏನೋ ಬರೆಯುತ್ತಾರೆ. ಬಳಿಕ ಬಿಲ್ಲನ್ನ ಆ ಮಹಿಳೆ ಇದ್ದ ರೂಮಿಗೆ ಕಳುಹಿಸುತ್ತಾರೆ. ಆದರೆ ಆ ಮಹಿಳೆ ಆಸ್ಪತ್ರೆಯ ಬಿಲ್ಲನ್ನ ನೋಡುವುದಕ್ಕೆ ಭಯಪಡುತ್ತಾಳೆ. ಆಕೆಗೆ ಗೊತ್ತಿರುತ್ತದೆ ನನ್ನ ಇಡೀ ಜೀವನವಲ್ಲ ದುಡಿದ್ರು ಇಷ್ಟು ಹಣ ಕೊಡಕ್ಕೆ ಆಗಲ್ಲ ಅಂತ. ಆದರೂ ಬಿಲ್ಲನ್ನ ನೋಡುತ್ತಾಳೆ. ಹೀಗೆ ನೋಡುತ್ತಿರುವಾಗ ಬಿಲ್ಲಿನ ಅಂಚಿನಲ್ಲಿ ಏನೋ ಬರೆದಿರುವುದು ಆಕೆಯ ಕಣ್ಣಿಗೆ ಬೀಳುತ್ತದೆ. “ಒಂದು ಗ್ಲಾಸಿನ ಹಾಲಿಗೆ ಇಡೀ ಬಿಲ್ಲನ್ನ ಕಟ್ಟಿದೆ” (Pad in full with one glass of Milk) ಎಂದು ಅಲ್ಲಿ ಬರೆದು ಡಾ.ಕೆಲ್ಲಿ ಎಂದು ಸಹಿ ಮಾಡಿರುತ್ತಾರೆ.

ಹೇಳಬೇಕಂದರೆ ಆಕೆಯ ಆಸ್ಪತ್ರೆಯ ಬಿಲ್ಲು 20 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಆಗ ಆಕೆಯ ಕಣ್ಣಿನಲ್ಲಿ ತನ್ನಷ್ಟಕ್ಕೆ ತಾನೇ ಕಣ್ಣೀರು ಬರುತ್ತದೆ. ಇಂತಹ ಪ್ರೀತಿಯ ಮನುಷ್ಯರನ್ನ ಸೃಷ್ಟಿಸಿದ ದೇವರೇ ನಿನ್ಗೆ ಧನ್ಯವಾದಗಳು ಎಂದು ಮನಸ್ಸಿನಲ್ಲಿ ಹೇಳುತ್ತಾಳೆ. ತನಗೆ ಊಟ ಇಲ್ಲದ ಸಮಯದಲ್ಲಿ ಆಕೆ ಕೊಟ್ಟಿದ್ದ ಒಂದು ಗ್ಲಾಸ್ ಹಾಲು ಮತ್ತು ಆಕೆಯ ಕರುಣೆಯನ್ನ ಡಾ. ಕೆಲ್ಲಿ ಮರೆತಿರಲಿಲ್ಲ. ಅದಕ್ಕೆ ಹೊಳೋದು ಯಾವಾಗಲು ಒಳ್ಳೆಯ ಕೆಲಸಗಳನ್ನ ಮಾಡಬೇಕು ಎಂದು. ನೀವು ಇನ್ನೊಬ್ಬರಿಗೆ ತೋರುವ ಕರುಣೆ ನಿಮಗೆ ದೊಡ್ಡ ರೂಪದಲ್ಲಿ ಸಹಾಯ ಮಾಡುತ್ತದೆ.