ದೃಶ್ಯದಲ್ಲಿ ರವಿಚಂದ್ರನ್ ಮಗಳಾಗಿ ನಟಿಸಿದ್ದ ನಟಿ ಈಗ ಹೇಗಾಗಿದ್ದಾರೆ ಗೊತ್ತಾ.?ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ನೋಡಿ..

Cinema

ಕನ್ನಡ ಸಿನಿಮಾರಂಗದ ಖ್ಯಾತ ಚಿತ್ರ ದೃಶ್ಯ ಈಗಾಗಲೇ ಎಲ್ಲರಿಗೂ ಚಿರಪರಿಚಿತ ಇದೆ. ಇದೇ ದೃಶ್ಯ ಸಿನಿಮಾದಲ್ಲಿ ನಟ ರವಿಚಂದ್ರನ್ ಅವರು ಒಂದು ಕುಟುಂಬ ಕಟ್ಟಿಕೊಂಡು ಅವರಿಗರಿವಿಲ್ಲದೆ ಆದಂತಹ ಒಂದು ದು’ರ್ಘಟನೆ ಬಗ್ಗೆ ಕೊನೆಯವರೆಗೂ ತನ್ನ ಕುಟುಂಬವನ್ನು ಉಳಿಸಿಕೊಳ್ಳುವ ಕಥೆಯನ್ನಾದರಿತ ಚಿತ್ರ ಈ ದೃಶ್ಯ. ಹೌದು ದೃಶ್ಯ ಸಿನಿಮಾ ತುಂಬಾನೇ ಸದ್ದು ಮಾಡಿತ್ತು. ಬಾಕ್ಸಾಫೀಸಿನಲ್ಲಿ ಒಳ್ಳೇ ಕಲೆಕ್ಷನ್ ಕೂಡ ಮಾಡಿತ್ತು. ನಟ ರವಿಚಂದ್ರನ್ ದೃಶ್ಯ ಸಿನಿಮಾದಲ್ಲಿ ತುಂಬಾ ಅದ್ಭುತ ನಟನೆ ಮಾಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಹಾಗೆ ಅದರಂತೆ ರವಿಚಂದ್ರನ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಆರೋಹಿ ನಾರಾಯಣ್, ಹಾಗೆ ರವಿಚಂದ್ರನ್ ಅವರ ಹೆಂಡತಿ ಪಾತ್ರದಾರಿ ನಟಿ ನವ್ಯ ಅವರು ಸಹ ತುಂಬಾನೇ ಸದ್ದು ಮಾಡಿದರು.

ಹೌದು ಸ್ನೇಹಿತರೆ ಇದೀಗ ದೃಶ್ಯ 2 ಸಿನಿಮಾ ಬರುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಹಾಗೆ ದೃಶ್ಯ 2 ಸಿನಿಮಾದಲ್ಲಿ ರವಿಚಂದ್ರನ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಆರೋಹಿ ನಾರಾಯಣ್ ಅವರು ತೆರೆಯ ಮೇಲೆ ಮತ್ತೆ ಸದ್ದು ಮಾಡಲು ಬರುತ್ತಿದ್ದಾರೆ. ನಟಿ ಆರೋಹಿ ನಾರಾಯಣ್ ಅವರು ಸ್ಯಾಂಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿಯಾಗಿದ್ದಾರೆ. ಹಾಗೆ ಮುಂಬರುವ ದಿನಗಳಲ್ಲಿ ಸ್ಯಾಂಡಲ್ವುಡ್ ಸಿನಿರಂಗದಲ್ಲಿ ಯಶಸ್ವಿ ನಾಯಕಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ನಟಿ ಆರೋಹಿ ನಾರಾಯಣ್ ಹುಟ್ಟಿದ್ದು 1992ರಲ್ಲಿ, ಇದೀಗ ಇವರಿಗೆ 28 ವರ್ಷ ವಯಸ್ಸು.

ನಟಿ ಆರೋಹಿ ಈಗಾಗಲೇ ಕನ್ನಡದ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಮೊನ್ನೆ ಹೈದರಾಬಾದ್ ನಲ್ಲಿ ಸೈಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆರೋಹಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅವರ ಕೆಲವೊಂದು ಫೋಟೋಗಳನ್ನು ಮಾಡಿಸಿ, ಅಪ್ಲೋಡ್ ಮಾಡಿ ತುಂಬಾನೇ ವೈರಲ್ ಆಗುತ್ತಾರೆ. ಅಷ್ಟಕ್ಕೂ ಇದೀಗ ಆರೋಹಿ ಹೇಗಿದ್ದಾರೆ ಗೊತ್ತಾ.? ಈ ಕಲರ್ಫುಲ್ ಫೋಟೋಗಳನ್ನು ನೋಡಿ..