ಇತ್ತೀಚಿನ ದಿನಗಳಲ್ಲಿ ತುಂಬಾ ಕೇಳಿಬರುತ್ತಿರುವ ಹೆಸರು ಅಭಿಗ್ಯ ಆನಂದ್. ಯಾವುದೇ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನೋಡಿದ್ರೂ ಕೂಡ ಈ ಬಾಲಕನದ್ದೇ ಮಾತು. ಕೊರೋನಾ ಕುರಿತಂತೆ ಈ ಬಾಲಕ ನುಡಿರುವ ಭವಿಷ್ಯದಿಂದ ಎಲ್ಲಾ ಕಡೆ ಆತನ ಹೆಸರು ಧಿಡೀರನೆ ಸದ್ದು ಮಾಡುತ್ತಿದೆ. ನಿರಾಯಾಸವಾಗಿ ಸಂಸ್ಕೃತ ಮಾತನಾಡುವ ಈ ಬಾಲಕ ಚಿಕ್ಕ ವಯಸ್ಸಿಗೆ ಜ್ಯೋತಿಷ್ಯ ಶಾಸ್ತ್ರ, ವಸ್ತು ಶಾಸ್ತ್ರವನ್ನು ಓದಿದ್ದಾನೆ. ಈಗ ಹರಡುತ್ತಿರುವ ಸೋಂಕಿನ ಬಗ್ಗೆ ಕುರಿತಂತೆ ಒಂದು ವರ್ಷದ ಹಿಂದೆಯೇ ಭವಿಷ್ಯ ಹೇಳಿದ್ದಾನೆಂದು ಈ ಬಾಲಕ ಈಗ ಸಖತ್ ಸುದ್ದಿಯಲ್ಲಿದ್ದಾನೆ.
ಇನ್ನು ಯೂಟ್ಯೂಬ್ ನಲ್ಲಿ ವಿಡಿಯೊಗಳನ್ನ ಪೋಸ್ಟ್ ಮಾಡುವ ಈ ಬಾಲಕ ಕಳೆದ ವರ್ಷ ಆಗಸ್ಟ್ ನಲ್ಲಿಯೇ ಭವಿಷ್ಯ ಹೇಳಿದ್ದು, ೨೦೧೯ರ ನವೆಂಬರ್ ನಿಂದ ೨೦೨೦ರವರೆಗೆ ಜಗತ್ತಿಗೆ ಕಂಟಕ ಎದುರಾಗಲಿದೆ ಎಂದು ಹೇಳಿದ್ದು ಕಾಕತಾಳೀಯ ಎಂಬಂತೆ ಅದು ಈಗ ನಡೆಯುತ್ತಿದೆ. ಹಾಗಾದ್ರೆ ಬಾಲಕ ಅಭಿಗ್ಯ ಆನಂದ್ ಹೇಳಿರುವುದು ನಿಜವಾಗಿದೆಯಾ.?ಇದಕ್ಕೂ ಏನೆಲ್ಲಾ ಭವಿಷ್ಯ ಹೇಳಿದ್ದರು?ಎಲ್ಲವೂ ನಿಜ ಆಯಿತೇ? ತಿಳಿಯಲು ಮೇಲೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ನೋಡಿ..2019ರಲ್ಲಿ ಅಭಿಗ್ಯ ಆನಂದ್ ಹೇಳಿದ್ದ ಭವಿಷ್ಯವಾಣಿ ಕೆಳಗಡೆ ಇರುವ ಈ ವಿಡಿಯೋದಲ್ಲಿದೆ ನೋಡಿ..