ಒಂದು ವರ್ಷದ ಹಿಂದೆಯೇ ಕೊರೋನಾ ಭವಿಷ್ಯ ನುಡಿದಿದ್ದ ಪುಟ್ಟ ಬಾಲಕ..ಅಂತ್ಯವಾಗುವ ದಿನ ಕೂಡ ಹೇಳಿದ್ದಾನೆ

Advertisements

ಚೀನಾದಲ್ಲಿ ಹುಟ್ಟಿದ ಕೊರೋನಾ ಮಹಾಮಾರಿ ಇಡೀ ಜಗತ್ತಿನಾದ್ಯಂತ ಹರಡುತ್ತಿದ್ದು ಹೆಮ್ಮಾರಿಯಂತೆ ಸಾವಿರಾರು ಪ್ರಾಣಗಳನ್ನ ಬಳಿ ಪಡೆಯುತ್ತಿದೆ. ಇನ್ನು ಈ ಕೊರೋನಾ ರಣಕೇಕೆಗೆ ದೊಡ್ಡ ದೊಡ್ಡ ದೇಶಗಳೇ ತರಗುಟ್ಟಿ ಹೋಗಿವೆ. ಹಲವಾರು ದೇಶಗಳಲ್ಲಿ ಈ ಸೋಂಕಿಗೆ ಲಸಿಕೆ ಕಂಡಿಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಜಗತ್ತಿನ ದೊಡ್ಡಣ್ಣ ಅಮೆರಿಕಾವನ್ನೇ ನಡುಗುಸುತ್ತಿರುವ ಈ ಕೊರೋನಾ ಸೋಂಕಿನ ಬಗ್ಗೆ ಮೈಸೂರಿನ ಪುಟ್ಟ ಬಾಲಕನೊಬ್ಬ ಭವಿಷ್ಯ ನುಡಿದ್ದಿದ್ದ ಎಂಬುದನ್ನ ನೀವು ನಂಬಲೇಬೇಕು. ಆ ಬಾಲಕ ಹೆಸರು ಅಭಿಗ್ಯ ಆನಂದ್ ಎಂದು. ಇನ್ನು ಚಿಕ್ಕ ವಯಸ್ಸಿಗೆ ಸಂಸ್ಕೃತ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಾನೆ. ಇನ್ನು ಮೈಕ್ರೋಬಯಾಲಜಿ ಜೊತೆಗೆ ವಸ್ತು ಶಾಸ್ತ್ರವನಂ ಕಲಿತಿರುವ ಈ ಪುಟ್ಟ ಪೋರ ಅದರ ಆಧಾರದ ಮೇಲೆ ಜೋತಿಷ್ಯ ಹೇಳುತ್ತಾನೆ.

ಇನ್ನು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿರುವ ಅಭಿಗ್ಯ ಆನಂದ್ ವಿಡಿಯೊಗಳನ್ನ ಅಪ್ಲೋಡ್ ಮಾಡುತ್ತಾರೆ. ಇನ್ನು ೨೦೧೯ರಲ್ಲೇ ಈ ಜಗತ್ತು ಸಂಕಷ್ಟಕ್ಕೆ ಈಡಾಗಲಿದ್ದು 2019 ನವೆಂಬರ್ ನಿಂದ 2020 ಏಪ್ರಿಲ್ ವರೆಗೆ ಈಡೀ ಪ್ರಪಂಚ ತೊಂದರೆಗೆ ಒಳಗಾಗಲಿದೆ ಎಂದುಹೇಳಿದ್ದು ಸಾವಿರಾರು ಜನ ಸಾವಿಗೆ ಒಳಗಾಗುತ್ತಾರೆ ಎಂದು ಹೇಳಿದ್ದಾನೆ. ಇನ್ನು ಕಾಕತಾಳಿಯವೋ ಏನೋ ಕೊರೋನಾ ಇಡೀ ಜಗತ್ತನ್ನ ಪೀಡಿಸುತ್ತಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಇನ್ನು ಮೇ ತಿಂಗಳು ಕಳೆದ ಬಳಿಕ ಇದು ಕಡಿಮೆಯಾಗಲಿದ್ದು, ಮಾರ್ಚ್ ನಿಂದ ಏಪ್ರಿಲ್ ವರೆಗೆ ಜನ ಎಚ್ಚರದಿಂದಿರಬೇಕು ಎಂದು ಹೇಳಿದ್ದಾನೆ.

ಇನ್ನು ಜ್ಯೋತಿಷ್ಯ ಗ್ರಹಗಳ ವಿಶ್ಲೇಷಣೆ ಜೊತೆಗೆ ವೈಜ್ನ್ಯಾನಿಕ ಕಾರಣ ಕೂಡ ಕೊಟ್ಟಿರುವ ಅಭಿಗ್ಯ ಮಾರ್ಚ್ ತಿಂಗಳು ಮುಗಿದ ಬಳಿಕ ವಾತಾವರಣದಲ್ಲಿ ಬದಲಾವಣೆಯಾಗಲಿದ್ದು ತೇವಾಂಶ ಹೆಚ್ಚಾಗುವ ಕಾರಣ ನೆಗಡಿ, ಶೀತ, ಕೆಮ್ಮು ಜಾಸ್ತಿಯಾಗಿ ಕಾಯಿಲೆ ಗಂಭೀರ ಹಂತಕ್ಕೆ ಹೋಗುತ್ತದೆ ಎಂದು ಭವಿಷ್ಯವನ್ನ ನುಡಿದಿದ್ದ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ (ಕೊರೋನಾ ತಂಪಾದ ವಾತಾವರಣದಲ್ಲಿ ಬಹುಬೇಗ ಹರಡುತ್ತದೆ ಎಂದು ವಿಜ್ನ್ಯಾನಿಗಳು ಹೇಳಿದ್ದಾರೆ) ಇನ್ನು ಕಾಕತಾಳೀಯವೆಂಬಂತೆ ಬಾಲಕನ ಭವಿಷ್ಯವಾಣಿ ನಿಜವಾಗಿದೆ. ಇನ್ನು ಜನರು ಆದಷ್ಟು ಮನೆಯಲ್ಲೇ ಇದ್ದು ಕೊರೋನಾದಿಂದ ತಪ್ಪಿಸಿಕೊಳ್ಳಿ. ತೀರಾ ಅಗತ್ಯವಿದ್ದಾಗ ಒಬ್ಬರು ಮಾತ್ರ ಮನೆಯಿಂದ ಹೊರಬನ್ನಿ. ಮಾಸ್ಕ್, ಸ್ಯಾನಿಟೈಸರ್ ತಪ್ಪದೆ ಯೂಸ್ ಮಾಡಿ. ಸೋಷಿಯಲ್ ಡಿಸ್ಟೆನ್ಸ್ ನ್ನ ಮೆಂಟೈನ್ ಮಾಡಿ. ನಿಮ್ಮನ್ನ, ನಿಮ್ಮ ಕುಟುಂಬದವರನ್ನ, ದೇಶವನ್ನ ರಕ್ಷಿಸಿಕೊಳ್ಳಿ.