ನಟ ಕಿಚ್ಚ ಸುದೀಪ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೊಂದು ಇನ್ಟ್ರೆಸ್ಟಿಂಗ್ ವಿಷಯಗಳು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸುಮಾರು ಎಂಟು ವರ್ಷಗಳಿಂದ ಸತತವಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ನಿಜ ಜೀವನದ ಬಗ್ಗೆ ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟ ಕಿಚ್ಚ ಸುದೀಪ್ ಅವರ ನಿಜವಾದ ಹೆಸರು ಸುದೀಪ್ ಸಂಜೀವ್ ಅಂತ ಇವರ ನಿಕ್ ನೇಮ್ ಬಂದು ಕಿಚ್ಚ, ಅಭಿನಯ ಚಕ್ರವರ್ತಿ, ಕನ್ನಡ ಸೂಪರ್ ಸ್ಟಾರ್,ಕರುನಾಡ ಕಿಂಗ್, ಬಿಗ್ ಬಾಸ್ ಇನ್ನೂ ಹಲವಾರು ರೀತಿಯ ಹೆಸರು ಅಭಿಮಾನಿಗಳ ಕಡೆಯಿಂದ ಸಿಕ್ಕಿದೆ.. ಇವರ ವೃತ್ತಿ ಜೀವನ ನಟ ನಿರ್ದೇಶಕ, ನಿರೂಪಕ ಕ್ರಿಕೆಟ್ ಆಟಗಾರ, ಇವರು ಕನ್ನಡದಲ್ಲಿ ಮೊದಲಿಗೆ ತಾಯವ್ವ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು..

ಇದ್ದಾದ ಮೇಲೆ ಸುದೀಪ್‌‌ ಅವರು ಕನ್ನಡ ಭಾಷೆಯಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಅದರಲ್ಲಿ, ಮೈಆಟೋಗ್ರಾಫ್, ವೀರಮದಕರಿ, ಹುಚ್ಚಾ, ಮುಸ್ಸಂಜೆ ಮಾತು,‌ ಮಾಣಿಕ್ಯ ರನ್ನ ಇನ್ನೂ‌ ಅನೇಕ ರೀತಿಯ ಚಿತ್ರರಂಗದಲ್ಲಿ ನಟ ಸುದೀಪ್ ಅವರು ನಟಿಸಿದ್ದಾರೆ.. ಇನ್ನೂ ಕಿಚ್ಚ ಸುದೀಪ್ ಅವರು ತಂದೆ ಸಂಜೀವ್ ‌ಸರೋವರ್ ತಾಯಿ ಸರೋಜ ಸಂಜೀವ್ ಸೆಪ್ಟೆಂಬರ್ 2/1973 ಶಿವಮೊಗ್ಗದಲ್ಲಿ ಜನಿಸಿದರು ಇವರಿಗೆ ಈಗ 47 ವರ್ಷ ವಯಸ್ಸು ಸುದೀಪ್ ಅವರು 2003 ರಲ್ಲಿ ಪ್ರೀಯಾ ರಾಮಕೃಷ್ಣ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸುದೀಪ್ ಅವರಿಗೆ ಒಬ್ಬಳು ಮಗಳು ಕೂಡ ಇದ್ದಾರೆ ಇನ್ನೂ ಮಗಳ ಹೆಸರು ಸಾನ್ಚಿ ಎಂದು..

ಬೆಂಗಳೂರಿನಲ್ಲಿ ದಯಾನಂದ ಸಾಗರ ವಿಶ್ವವಿದ್ಯಾನಿಲಯದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನ ಸಾನ್ವಿ ಸುದೀಪ್ ಅವರು ಪಡೆಯುತ್ತಿದ್ದಾರೆ.. ನೀವು ಈ ಪೋಟೋದಲ್ಲಿ ನೋಡಬಹುದು ಸುದೀಪ್ ಅವರ ಮನೆ ಹೇಗಿದೆ ಎಂದು. ಸುದೀಪ್ ಅವರು ಕೆಲವು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಅದ್ಭುತವಾದ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಇವರು ಕನ್ನಡದಲ್ಲಿ 49‌ ಸಿನಿಮಾ ಹಿಂದಿಯಲ್ಲಿ 7 ಸಿನಿಮಾ ಇನ್ನೂ‌ ಇತರೆ ಭಾಷೆಯಲ್ಲಿ ಅಂದರೆ ತೆಲುಗಿನಲ್ಲಿ ಹಾಗು ತಮಿಳಿನಲ್ಲಿ ಪುಲಿ,‌ ಮತ್ತು ಸೈರಾ ನರಸಿಂಹ ರೆಡ್ಡಿ ಈಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡಿ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.

ಇನ್ನೂ ಬಿಗ್ ಬಾಸ್ ಶೋ ಎಂದರೆ ಸಾಕು ಅದು ಕಿಚ್ಚ‌ ಸುದೀಪ್ ಎನ್ನುವ ಮಟ್ಟಕ್ಕೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.. ಇಡೀ ಭಾರತದಲ್ಲಿ ಮಾತ್ರವೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರಾರಂಭವಾದ ದಿನದಂದಲೂ ಇಲ್ಲಿಯವರೆಗೂ ಸುದೀಪ್ ಅವರೆ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ ಇದು ನಿಜಕ್ಕೂ ನಮ್ಮ ಕನ್ನಡಿಗರಿಗೆ ಹೆಮ್ಮೆ ಪಡುವಂತಹ ವಿಷಯ ಅಂತ ಹೇಳಬಹುದು.. ಇನ್ನೂ ಸ್ವತಃ ಬಾಲಿವುಡ್‌ ಸ್ಟಾರ್ ನಟ ಸಲ್ಮಾನ್ ಖಾನ್ ಅವರೆ ಸುದೀಪ್ ಅವರು ಮಾಡುವ ನಿರೂಪಣೆಯನ್ನು ನೋಡಿ ನಿಜವಾದ ನಂಬರ್‌ ಒನ್‌ ನಿರೂಪಕ ಎಂದು ಹೊಗಳಿದ್ದಾರೆ.. ಸ್ನೇಹಿತರೆ ನಟ ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..
.