ತಮ್ಮ ಅಭಿಮಾನಿಗಳ ಖಾತೆಗೆ ತಲಾ 5ಸಾವಿರ ಹಣ ಹಾಕುವ ಮೂಲಕ ಮಾನವೀಯತೆ ಮೆರೆದ ಸಿಂಗಂ ಖ್ಯಾತಿಯ ಸ್ಟಾರ್ ನಟ !

Advertisements

ಸ್ನೇಹಿತರೇ, ಕೊರೋನಾದಂತಹ ಸಂಕಷ್ಟದ ಈ ಸಮಯದಲ್ಲಿ ಸಿನಿಮಾ ರಂಗದ ಸ್ಟಾರ್ ನಟರು ಜನರಿಗಾಗಿ ಫುಡ್ ಕಿಟ್ ಗಳಾಗಿರಬಹುದು, ಸೋಂಕಿತರಿಗಾಗಿ ಬೆಡ್, ಆಕ್ಸಿಜೆನ್ ಜೊತೆಗೆ ಚಿಕಿತ್ಸೆ ಕೊಡಿಸುವದಾಗಿರಬಹುದು, ಕೋವಿಡ್ ಹೋರಾಟದ ಪರಿಹಾರ ನಿಧಿಗಳಿಗೆ ಡೊನೇಷನ್ ಕೊಡುವುದಾಗಿರಬಹುದು, ಹೀಗೆ ಹಲವು ರೀತಿಯಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಾ ಮೆರೆಯುತ್ತಿದ್ದಾರೆ. ಇನ್ನು ನಮ್ಮ ಸ್ಯಾಂಡಲ್ವುಡ್ ನಟರಂತೆ ತಮಿಳಿನ ಸ್ಟಾರ್ ನಟರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅದರಲ್ಲಿ ಸಿಂಗಂ ಖ್ಯಾತಿಯ ನಟ ಸೂರ್ಯ ಕೂಡ ಒಬ್ಬರು.

[widget id=”custom_html-4″]

Advertisements

ಹೌದು, ಸಾಮಾಜಿಕ ಕಾರ್ಯಗಳಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದೇನೆ ಇರುವ ನಟ ಸೂರ್ಯ ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲಿರುವ ತಮ್ಮ ಅಭಿಮಾನಿಗಳಿಗಾಗಿ ಮುಂದೆ ಬಂದಿದ್ದಾರೆ. ಹೌದು, ಯಾವುದೇ ಒಬ್ಬ ನಟ ಸ್ಟಾರ್ ನಟನಾಗಿ ಬೆಳೆಯಬೇಕಾದರೆ ಅವರ ಅಭಿಮಾನಿಗಳು ತುಂಬಾ ಪ್ರಾಮುಖ್ಯತೆ ವಹಿಸುತ್ತಾರೆ. ತಮ್ಮ ನೆಚ್ಚಿನ ನಟನನ್ನ ಬೆಂಬಲಿಸುವ ಸಲುವಾಗಿ ಫ್ಯಾನ್ಸ್ ಕ್ಲಬ್ ಗಳನ್ನ ಮಾಡುವ ಅಭಿಮಾನಿಗಳು ಅವರ ಪ್ರತಿಯೊಂದು ಸಿನಿಮಾಗಳನ್ನ ಪ್ರಮೋಟ್ ಮಾಡುವುದರ ಮೂಲಕ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈಗ ಇದೆ ಕಾರಣದಿಂದಲೇ ನಟ ಸೂರ್ಯ ಅವರು ತಮ್ಮ ಅಭಿಯಾಮಾನಿಗಳಿಗಾಗಿ ಬರೋಬ್ಬರಿ 12.5ಲಕ್ಷ ಹಣ ನೀಡುವ ಮೂಲಕ ಅಭಿನಯಿಗಳ ಹೃದಯ ಗೆದ್ದಿದ್ದು, ನಟ ಸೂರ್ಯ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

[widget id=”custom_html-4″]

ತಮ್ಮ ಫ್ಯಾನ್ಸ್ ಕ್ಲಬ್ ಗಳಲ್ಲಿ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿರುವ ೨೫೦ ಅಭಿಮಾನಿಗಳಿಗೆ ಹಣದ ನೆರವು ನೀಡಿರುವ ನಟ ಸೂರ್ಯ ಅವರು ತಲಾ 5 ಸಾವಿರ ರೂಪಾಯಿ ಹಣ ನೀಡಿದ್ದು, ಈ ಹಣವನ್ನ ನೇರವಾಗಿ ತಮ್ಮ ಅಭಿಮಾನಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಇನ್ನು ಸೂರ್ಯ ಅವರ ಜೊತೆ ಅವರ ಸಹೋದರ ನಟ ಕಾರ್ತಿಕ್ ಕೂಡ ಅಭಿಮಾನಿಗಳಿಗೆ ನೆರವಾಗುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಒಟ್ಟಿನಲ್ಲಿ ನಟ ಸೂರ್ಯ ಅವರು ತಮ್ಮ ಅಭಿಮಾನಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದು, ಇದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅಭಿಮಾನಿಗಳು ನಟ ಸೂರ್ಯ ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.