ಈ ಖ್ಯಾತ ಹಾಸ್ಯ ನಟನ ಬಳಿ ಇರುವ ದುಬಾರಿ ಕಾರ್ ಗಳ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ !

Cinema

ಸ್ನೇಹಿತರೇ, ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಡಿವೇಲು. ಸಿನಿಮಾಗಳಲ್ಲಿ ಅವರ ಮುಖ ನೋಡಿದ್ರೆ ಸಾಕು ನೋಡುಗರಿಗೆ ಥಟ್ಟನೆ ನಗು ಬರುತ್ತೆ. ಇನ್ನು ನಟ ವಡಿವೇಲು ಅವರು ಅವರ ಚಿತ್ರಗಳಲ್ಲಿ ನಾಯಕ ನಟರಿಂದ ಗೂ’ಸಾ ತಿನ್ನುವುದನ್ನ ನೋಡಿದ್ರೂ ನಗು ಬರುತ್ತೆ. ಅದೇ ರೀತಿ ಅವರು ತಮ್ಮ ಚಿತ್ರಗಳಲ್ಲಿ ಬೈಕ್, ಸ್ಕೂಟರ್, ಎತ್ತಿನ ಗಾಡು ಓಡಿಸುವುದನ್ನ ನೋಡಿ ನಕ್ಕಿರುತ್ತೀರಿ..ಆದರೆ ವಡಿವೇಲು ಅವರ ರಿಯಲ್ ಲೈಫ್ ಬಗ್ಗೆ ಹೇಳುವುದಾದರೆ ಅವರ ಬಳಿ ಇರುವ ದುಬಾರಿ ಕಾರ್ ಗಳ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ..

ಹೌದು, ಹಾಸ್ಯ ನಟನು ಮಾತ್ರವಲ್ಲದೆ ಗಾಯಕನೂ ಕೂಡ ಆಗಿರುವ ವಡಿವೇಲು ಅವರು ನೋಡೋಕೆ ಸಿಂಪಲ್ ಆಗಿ ಕಂಡರೂ ಅವರು ಬಳಸುವ ಕಾರ್ ಗಳು ಮಾತ್ರ ತುಂಬಾ ದುಬಾರಿ. ವಡಿವೇಲು ಅವರು ಇಷ್ಟೊಂದು ಕಾಸ್ಟ್ಲಿ ಕಾರ್ ಗಾಲ ಮಾಲೀಕ ಎಂದರೆ ನಿಮಗೆ ಅಚ್ಚರಿಯಾಗದೆ ಇರೋದಿಲ್ಲ..ಹಾಗಾದ್ರೆ ಹಾಸ್ಯನಟ ವಡಿವೇಲು ಅವರ ಬಳಿ ಯಾವೆಲ್ಲಾ ಕಾರ್ ಗಳಿವೆ ಎಂಬುದನ್ನ ನೋಡೋಣ ಬನ್ನಿ..

ಸುಮಾರು ೮೫ ಲಕ್ಷದಿಂದ ಒಂದು ಕೋಟಿಯವರೆಗೆ ಬೆಲೆ ಬಾಳುವ ೨೦೧೦-೧೫ರ ಮಾಡೆಲ್ ಕಾರ್ ಆಗಿರುವ Audi Q7 ಕಾರ್ ನ ಮಾಲೀಕ. ಒಂದು ಕೋಟಿಯಿಂದ 2.40ಕೋಟಿ ಬೆಲೆ ಬಾಳುವ BMW 7ಸಿರೀಸ್ ಕಾರ್. ಇನ್ನು ಈ ಕಾರ್ ಹಳೆಯದಾದರೂ 1.30 ಕೋಟಿ ಬೆಲೆ ಬಾಳುತ್ತೆ ಎಂದು ಹೇಳಲಾಗಿದೆ. ಇನ್ನು Jaguar Xj ಎನ್ನುವ ಈ ಕಾರ್ ಮೂರು ಇಂಜಿನ್ ಗಳನ್ನ ಹೊಂದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ತುಂಬಾ ಫೇಮಸ್ ಆಗಿರುವ ‘ಬೆಂಟ್ಲಿ ಕಾಂಟಿನೆಂಟಲ್ ಜಿಟಿ’ ಕಾರ್ ಒಡೆಯ ನಟ ವಡಿವೇಲು. ಇದು ಎರಡು ಇಂಜಿನ್ ಗಳನ್ನ ಹೊಂದಿದ್ದು ಸುಮಾರು 3.20 ಕೋಟಿಯಿಂದ 4.42ಕೋಟಿಯ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.

ಇನ್ನು ವಡಿವೇಲು ಅವರು ಸಭೆ ಸಮಾರಂಭಗಳಿಗೆ ಹೋಗಲು ತಮ್ಮಲ್ಲಿರುವ ‘ರೋಲ್ಸ್ ರಾಯ್ಸ್ ಘೋಸ್ಟ್’ ಕಾರ್ ನ್ನ ಹೆಚ್ಚು ಬಳಸುತ್ತಾರೆ. ಇನ್ನು ಈ ಕಾರು ಭಾರತದಲ್ಲಿ 6.20 ಕೋಟಿಯಿಂದ ೭ ಕೋಟಿಯವರೆಗೆ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ. ಸೆಲೆಬ್ರೆಟಿಗಳು ಮತ್ತು ಶ್ರೀಮಂತರ ಮನೆಯಲ್ಲಿ ಮಾತ್ರ ಇರುವ ೨ ಕೋಟಿಯವರೆಗೆ ಬೆಲೆ ಬಾಳುವ Porsche 911 coupe ಕಾರ್ ವಡಿವೇಲು ಅವರ ಗ್ಯಾರೇಜ್ ನಲ್ಲಿದೆ. ಇನ್ನು ನಟ ವಡಿವೇಲು ಅವರು ತಮ್ಮ ಸಿನಿಮಾ ಶೂಟಿಂಗ್ ಗೆ ಹೋಗಲು ಹೆಚ್ಚಾಗಿ ಬಳಸುವ ಕಾರ್ ‘ಲ್ಯಾಂಡ್ ರೋವರ್ ರೇಂಜರ್ ರೋವರ್ ಎವೊಕ್ಯು’. ಇದು ೫೯ ಲಕ್ಷದವರೆಗೆ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿರುವ ವಡಿವೇಲು ಅವರ ಬಳಿ ದುಬಾರಿ ಕಾರ್ ಗಳೇ ಇಷ್ಟೊಂದು ಇವೆ ಎಂದರೆ ಇನ್ನು ಅವರ ಮನೆ, ಲೈಫ್ ಸ್ಟೈಲ್ ಹೇಗಿರಬಹುದೆಂದು ನೀವೇ ಯೋಚಿಸಿ..