ಸ್ನೇಹಿತರೇ, ಕನ್ನಡ ಚಿತ್ರರಂಗದ 80 ಹಾಗೂ 90ರ ದಶಕದ ಖ್ಯಾತ ನಟಿಯರಲ್ಲಿ ನಟಿ ಗೀತಾ ಕೂಡ ಒಬ್ಬಬ್ಬರು. ತಮ್ಮ ಅದ್ಭುತ ಅಭಿನಯದಿಂದ ಕನ್ನಡಿಗರ ಮನಸೆಳೆದವರು. ಕನ್ನಡ ಸೇರಿದಂತೆ ತೆಲುಗು,ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ನಟಿಸಿ ಖ್ಯಾತರಾದವರು. ಕನ್ನಡದ ಮೇರು ನಟರಾದ ಡಾ. ರಾಜ್ ಕುಮಾರ್ ಸೇರಿದಂತೆ, ರೆಬೆಲ್ ಸ್ಟಾರ್ ಅಂಬರೀಷ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಹಲವು ನಟರಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಗೀತಾ ಅವರು. ಜುಲೈ ೧೪, ೧೯೬೨ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಟಿ ಗೀತಾ ಅವರು, ತಮಿಳಿನ ಭೈರವಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಇದುವರೆಗೂ ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
[widget id=”custom_html-4″]

ಇನ್ನು ಘರ್ಜನೆ ಎನ್ನೋ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟಿ ಗೀತಾ ಅವರು ಅಣ್ಣಾವ್ರ ಅಭಿನಯದ ಆಕಸ್ಮಿಕ, ಧ್ರುವತಾರೆ, ದೇವತಾ ಮನುಷ್ಯ, ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಾಜ್ ಕುಮಾರ್ ಮತ್ತು ಗೀತಾ ಜೋಡಿ ಆಗಿನ ಕಾಲಕ್ಕೆ ತುಂಬಾ ಫೇಮಸ್ ಆಗಿತ್ತು ಕೂಡ. ಸಿನಿಮಾ ಬಳಿಕ ದಕ್ಷಿಣ ಭಾರತದ ಧಾರಾವಾಹಿಗಳಲ್ಲೂ ಕೂಡ ಪೋಷಕ ಪಾತ್ರಗಳಲ್ಲಿಯೂ ಕೂಡ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟಿ ಗೀತಾ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ೧೯೯೭ರಲ್ಲಿ ವಾಸನ್ ತಥಾನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ನಟಿ ಗೀತಾ.
[widget id=”custom_html-4″]

ಇನ್ನು ಗೀತಾ ಅವರ ಪತಿ ವಾಸನ್ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಗೀತಾ ವಾಸನ್ ದಂಪತಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾರೆ. ಇನ್ನು ನಟಿ ಗೀತಾ ಅವರಿಗೆ ೧೯೯೯ರಲ್ಲಿ ಒಬ್ಬ ಮಗ ಜನಿಸುತ್ತಾನೆ. ಮದ್ವೆಯಾದ ಬಳಿಕ 2002ರವರೆಗೆ ಸಿನಿಮಾದ ಕಡೆ ತಲೆ ಹಾಕದೆ ಇದ್ದ ನಟಿ ಗೀತಾ 2003ರಲ್ಲಿ ಮತ್ತೆ ಸಿನಿಮಾರಂಗದ ಕಡೆ ಹಿಂದಿರುಗಿದ್ದು, ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುತ್ತಾರೆ. ಇನ್ನು ಇತ್ತೀಚೆಗಷ್ಟೇ ತೆರೆಗೆ ಬಂದಿರುವ ಕನ್ನಡದ ಹಳ್ಳಿ ಪಂಚಾಯತಿ ಎನ್ನುವ ಸಿನಿಮಾದಲ್ಲಿಯೂ ಕೂಡ ನಟಿ ಗೀತಾ ನಟಿಸಿದ್ದಾರೆ. ಇನ್ನು ಸ್ಯಾಂಡಲ್ವುಡ್ ನಲ್ಲಿ ಒಳ್ಳೆಯ ಸಿನಿಮಾಗಳು ಸಿಕ್ಕಲ್ಲಿ ನಟಿಸುವೆ ಎಂದು ನಟಿ ಗೀತಾ ಹೇಳಿದ್ದಾರೆ.