ಮುದ್ದಾದ ಮಗುವಿಗೆ ಜನ್ಮ ನೀಡಿದ ಸಂಭ್ರಮದಲ್ಲಿ ನಟಿ ಮಯೂರಿ..ಮಗು ಹೇಗಿದೆ ಗೊತ್ತಾ ?

Entertainment

ಅಶ್ವಿನ ನಕ್ಷತ್ರ ಧಾರವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟಿದ್ದ ನಟಿ ಮಯೂರಿ, ಸೀರಿಯಲ್ ಮೂಲಕ ಫೇಮಸ್ ಆದ ಬಳಿಕ ಸ್ಯಾಂಡಲ್ವುಡ್ ಗೂ ಎಂಟ್ರಿ ಕೊಟ್ಟು ಕೆಲ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಮಿಂಚಿದ್ರು. ತಾನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಅರುಣ್ ಎಂಬುವವರ ಜೊತೆ ಕಳೆದ ವರ್ಷ ಜೂನ್ ೧೨ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಮಯೂರಿ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನ ಮಕ್ಕಳ ದಿನಾಚರಣೆಯೆಂದು ರಿವೀಲ್ ಮಾಡಿದ್ದರು.

ತಮ್ಮ ಪ್ರೆಗ್ನೆನ್ಸಿಯ ಫೋಟೋ ಶೂಟ್ ಮಾಡಿಸಿದ್ದ ನಟಿ ಮಯೂರಿ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಮಯೂರಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಸಂತೋಷದ ಸುದ್ದಿಯನ್ನ ಹಂಚಿಕೊಂಡಿದ್ದಾರೆ.

ತಮ್ಮ ಮುದ್ದು ಮಗುವಿನ ಕೈ ಫೋಟೋವನ್ನ ಹಂಚಿಕೊಂಡಿರುವ ನಟಿ ಮಯೂರಿ ವಿ ಮೆಡ್ ಇಟ್, ನೆನ್ನೆ ಮಾರ್ಚ್ ೧೫ರಂದು ಮುದ್ದಾದ ಗಂಡುಮಗುವಿನ ಜನನವಾಗಿದೆ. ಹೊಸದೊಂದು ಜೀವನ ಶುರುವಾಗಲಿದ್ದು ನಮಗೆ ಪ್ರೀತಿ ತೋರಿ ಆಶೀರ್ವಾದ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.