ತನ್ನ ನೆಚ್ಚಿನ ಸ್ಟಾರ್ ನಟಿಯನ್ನೇ ಕಿ’ಡ್ನಾಪ್ ಮಾಡಿದ ಅಭಿಮಾನಿ ! ಮಾಡಿದ ಐಡಿಯಾ ಕೇಳಿದ್ರೆ ಶಾಕ್ ಆಗ್ತೀರಾ..

Cinema

ಸ್ನೇಹಿತರೇ, ನಮ್ಮ ದೇಶದಲ್ಲಿ ನಟ ನಟಿಯರಿಗೆ ತೋರುವ ಪ್ರೀತಿ, ಅಭಿಮಾನವನ್ನ ಹೆತ್ತ ತಂದೆ ತಾಯಿಗಳಿಗೂ ತೋರುವುದಿಲ್ಲ. ನಟ ನಟಿಯರ ಅಭಿಮಾನ ಇರಬೇಕು ಆದರೆ ಅತಿರೇಕ ಅನಿಸುವ ಹುಚ್ಚು ಅಭಿಮಾನ ಇರಲೇಬಾರದು. ಇದರಿಂದ ನಟ ನಟಿಯರು ಕೂಡ ಪಜೀತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹೌದು, ಅಭಿಮಾನ ಹೆಚ್ಚಾಗಿ ತಮ್ಮ ನೆಚ್ಚಿನ ನಟಿಯರ ಜೊತೆ ಹುಚ್ಚರ ರೀತಿ ನಡೆದುಕೊಂಡಿರುವ ಎಷ್ಟೋ ಘಟನೆಗಳನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಅಂತದ್ದೇ ಒಂದು ಘಟನೆ ಖ್ಯಾತ ನಟಿಯ ಜೀವನದಲ್ಲೂ ನಡೆದಿದೆ. ಇಂತಹ ಘಟನೆ ನಡೆದಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲೇ ಅಂತ ಹೇಳಬಹುದು. ಹಾಗಾದ್ರೆ ಅಭಿಮಾನಿಯ ಹುಚ್ಚು ಅಭಿಮಾನಕ್ಕೆ ಒಳಗಾದ ಆ ಖ್ಯಾತ ನಟಿಯಾರು ? ಆಗಿದ್ದೇನು ಎಂಬುದನ್ನ ತಿಳಿಯೋಣ ಬನ್ನಿ..

ಅಭಿಮಾನಿಯೇ ಹುಚ್ಚು ಅಭಿಮಾನಕ್ಕೆ ಒಳಗಾದ ಆ ನಟಿ ಕನ್ನಡದ ಇಂದ್ರ, ನೀಲಕಂಠ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ನಮಿತಾ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳಿಯಲ್ಲೂ ಕೂಡ ನಮಿತಾ ನಟಿಸಿದ್ದು ಈಕೆಗೆ ಸಖತ್ ಫ್ಯಾನ್ ಫಾಲೋಯಿಂಗ್ ಕೂಡ ಇದೆ. ಹೀಗೊಂದು ದಿನ ನಟಿ ನಮಿತಾ ಅವರು ತಮಿಳುನಾಡಿನ ಕರೂರಿನ ಕಾರ್ಯಕ್ರಮಹೊಂದಕ್ಕೆ ಹೋಗುವ ಸಲುವಾಗಿ ತಿರುಚಿನಾಪಳ್ಳಿ ಏರ್ಪೋರ್ಟ್ ಗೆ ಬಂದಿದ್ದರು. ಇದೆ ಇವರಿದ್ದಲ್ಲಿಗೆ ಬಂದ ಯುವಕನೊಬ್ಬ, ನಮ್ಮ ಇವೆಂಟ್ ಮ್ಯಾನೇಜರ್ ನಿಮ್ಮನ್ನ ಕರೆದುಕೊಂಡು ಬರುವಂತೆ ಹೇಳಿದ್ದಾರೆ ಮೇಡಂ, ಬನ್ನಿ ಕಾರ್ ರೆಡಿ ಇದೆ ಹೋಗೋಣ ಎಂದು ಹೇಳಿದ್ದಾನೆ. ಇನ್ನು ಆತನ ಮಾತನ್ನ ಸತ್ಯವೆಂದು ನಂಬಿದ ನಟಿ ನಮಿತಾ ಆತನ ಕಾರ್ ಹತ್ತಿದ್ದಾರೆ.

ಇನ್ನು ನಮಿತಾ ಅವರಿದ್ದ ಕಾರ್ ದಾಟುತ್ತಿದ್ದಂತೆ, ಅವರನ್ನ ಕರೆದುಕೊಂಡು ಹೋಗಲು ಬಂದಿದ್ದ ಅಸಲಿ ಕಾರ್ ಡ್ರೈವರ್ ನಮಿತಾ ಅವರು ಮತ್ತೊಂದು ಕಾರ್ ನಲ್ಲಿ ಹೋಗುತ್ತಿರುವುದನ್ನ ಗಮನಿಸಿ ತಮ್ಮ ಇವೆಂಟ್ ಮ್ಯಾನೇಜರ್ ಗೆ ಕಾಲ್ ಮಾಡಿ ನಮಿತಾ ಅವರು ಬೇರೆಯದೇ ಕಾರ್ ನಲ್ಲಿ ಹೋಗುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಾನೆ. ಆಗ ಆ ಮ್ಯಾನೇಜರ್ ಗೆ ಏನೋ ಮಿಸ್ಟೇಕ್ ಆಗಿದೆ ಎಂದು ತಿಳಿದು ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾನೆ. ತಕ್ಷಣವೇ ಪೊಲೀಸರು ನಮಿತಾ ಅವರು ಹೋಗುತ್ತಿದ್ದ ಕಾರ್ ನ್ನ ಚೇಸ್ ಮಾಡಿ ನಿಲ್ಲಿಸುತ್ತಾರೆ. ಹಾಗಲೇ, ನಟಿ ನಮಿತಾಗೆ ಅಸಲಿ ವಿಷಯ ಗೊತ್ತಾಗಿದ್ದು ನಾನು ಕಿ’ಡ್ನಾಪ್ ಆಗಿದ್ದೇನೆ ಎಂದು. ಒಂದು ಕ್ಷಣ ಶಾಕ್ ಆಗುತ್ತಾರೆ ನಮಿತಾ.

ಇನ್ನು ಆ ಕಾರ್ ಡ್ರೈವ್ ಮಾಡುತ್ತಿದ್ದ ಯುವಕನಿಗೆ ಎರಡು ಚ’ಚ್ಚಿದ ಪೊಲೀಸರು ಯಾಕೀಗೆ ಮಾಡಿದೆಯೆಂದು ಅಲ್ಲಿಯೇ ವಿಚಾರಣೆ ಮಾಡುತ್ತಾರೆ. ಆಗ ಆ ಯುವಕ ಹೇಳಿದ್ದನ್ನ ಕೇಳಿ ಪೊಲೀಸರೇ ಶಾಕ್ ಆಗಿದ್ದಂತೂನಿಜ. ಹೌದು, ನಾನು ನಮಿತಾ ಮೇಡಂ ಅವರ ಬಹಳ ದೊಡ್ಡ ಅಭಿಮಾನಿ. ಅವರೆಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ ಕೂಡ. ಅವರನ್ನ ಹೇಗಾದರೂ ಮಾಡಿ ಡೈರೆಕ್ಟ್ ಆಗಿ ಮಾತನಾಡಿಸಬೇಕೆಂದು ಹೀಗೆ ಮಾಡಿದೆ ಎಂದು ಆ ಯುವಕ ಹೇಳುತ್ತಾನೆ. ಒಟ್ಟಿನಲ್ಲಿ ತನ್ನ ಅಭಿಮಾನಿಯೇ ಅತಿರೇಕದ ಅಭಿಮಾನದಿಂದ ಪಜೀತಿಗೆ ಸಿಲುಕಿದ್ದು ಮಾತ್ರ ನಟಿ ನಮಿತಾ..ಸ್ನೇಹಿತರೆ, ನಿಮ ನೆಚ್ಚಿನ ನಟ ನಟಿಯರ ಮೇಲೆ ಅಭಿಮಾನ ಇರಲಿ, ಆದರೆ ಹುಚ್ಚು ಅಭಿಮಾನ ಒಳ್ಳೆಯದಲ್ಲ..