ಗೊತ್ತಿಲ್ಲದೇ 2ನೇ ಮದ್ವೆಯಾಗಿದ್ದ ನಟಿ ರಂಭಾ ಗಂಡ ಯಾರು ಗೊತ್ತಾ? ಈಗ ಮಕ್ಕಳು ಹೇಗಿದ್ದಾರೆ ಎಲ್ಲಿದ್ದಾರೆ ನೋಡಿ..

Cinema

ಸ್ನೇಹಿತರೇ, ಒಂದು ಕಾಲಕ್ಕೆ ಪಡ್ಡೆ ಹುಡುಗರ ನೆಚ್ಚಿನ ನಟಿ ಎನಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ 16ನೇ ವಯಸ್ಸಿಗೇನೇ ಮಲಯಾಳಂ ಸಿನಿಮಾವೊಂದರ ಮೂಲಕ 1992ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ನಟಿ ರಂಭಾ. ಬಳಿಕ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕಿನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ನಟಿ ರಂಭಾ ಅವರ ಮೂಲ ಹೆಸರು ವಿಜಯಲಕ್ಷ್ಮಿ ಎಂದು. ಆಂಧ್ರದ ವಿಜಯವಾದದಲ್ಲಿ ಜೂನ್ ೫, ೧೯೭೬ರಲ್ಲಿ ನಟಿ ರಂಭಾ ಅವರ ಜನನವಾಗುತ್ತದೆ. ಬಾಲಿವುಡ್ ಸೇರಿದಂತೆ, ದಕ್ಷಿಣ ಭಾರತದ ಸಿನಿಮಾ ರಂಗದ ಒಟ್ಟು ೧೧೭ಕ್ಕಿಂದ ಹೆಚ್ಚು ಸಿನಿಮಾಗಳ್ಲಲಿ ನಾಯಕಿಯಾಗಿ ಮಿಂಚಿದ್ದಾರೆ.

ಇನ್ನು ನಟಿ ರಂಭಾ ಅವರು ಜಗ್ಗೇಶ್ ಅವರ ಅಭಿನಯದ ಸರ್ವರ್ ಸೋಮಣ್ಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು, ಶಶಿಕುಮಾರ್, ಶಿವರಾಜ್ ಕುಮಾರ್, ರವಿಚಂದ್ರನ್, ಸೇರಿದಂತೆ ಹಲವು ಕನ್ನಡದ ಸ್ಟಾರ್ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಹನ್ನೊಂದು ವರ್ಷಗಳ ಹಿಂದಲೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ ರಂಭಾ ಕೊನೆಯದಾಗಿ ನಟಿಸಿದ್ದು ೨೦೧೦ರಲ್ಲಿ ಬಿಡುಗಡೆಗೊಂಡಿದ್ದ ತಮಿಳಿನ ಪೆನ್ ಸಿಂಗಂ ಎಂಬ ಚಿತ್ರದಲ್ಲಿ. ಇನ್ನು ರಂಭಾ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳಬೇಕಾದ್ರೆ ಸಿನಿಮಾದಿಂದ ದೂರವಾದ ಬಳಿಕ ರಂಭಾ ಕೆನಡಾ ಮೂಲದ ಉದ್ಯಮಿಯಾಗಿದ್ದ ಇಂದ್ರನ್ ಪದ್ಮನಾಥನ್ ಎಂಬುವವರ ಜೊತೆ 8 ಏಪ್ರಿಲ್ 2010ರಂದು ತಿರುಮಲದ ಕರ್ನಾಟಕ ಕಲ್ಯಾಣ ಮಂಟಪಂ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಮದ್ವೆಯಾದ ಬಳಿಕ ಕೆನಡಾದ ಟೊರೆಂಟೋದಲ್ಲಿ ರಂಭಾ ತನ್ನ ಪತಿಯ ಜೊತೆ ಸೆಟ್ಲ್ ಆಗುತ್ತಾರೆ. ಇನ್ನು ರಂಭಾ ಇಂದ್ರನ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಂದು. ಹಿರಿಯಾ ಮಗಳು ಲನ್ಯಾ, ಎರಡನೆಯ ಮಗಳು ಸಶಾ ಹಾಗೂ ಮಗ ಸೇರಿದಂತೆ ಮೂರು ಜನ ಮಕ್ಕಳಿದ್ದಾರೆ. ಇನ್ನು ಕೆಲ ವರ್ಷಗಳ ಹಿಂದಷ್ಟೇ ನಟಿ ರಂಭಾ ಅವರ ಸಂಸಾರಿಕಾ ಜೀವನದಲ್ಲಿ ಬಿರುಕು ಮೂಡಿತ್ತು ಎಂದು ಹೇಳಲಾಗಿದ್ದು, ಪತಿ ಇಂದ್ರನ್ ರಂಭಾ ಅವರನ್ನ ಮದ್ವೆಯಾಗುವುದಕ್ಕೆ ಮುಂಚೆಯೇ ಮದ್ವೆಯಾಗಿದ್ದರು ಎಂಬುದು ಕರಣ ಎಂದು ಹೇಳಲಾಗಿತ್ತು. ತನಗೆ ಮೊದಲೇ ಮದ್ವೆಯಾಗಿರುವ ವಿಷಯ ಹೇಳದೆ ಮಚ್ಚಿಟ್ಟು ತನ್ನನ್ನ ಎರಡನೇ ಮದ್ವೆಯಾಗಿದಕ್ಕೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು ಇವರಿಬ್ಬರು ಬೇರೆಯಾಗಿದ್ದರೂ ಎಂದು ಹೇಳಲಾಗಿದೆ.

ಜೊತೆಗೆ ಮಕ್ಕಳನ್ನ ನೋಡಲು ಅವಕಾಶ ಕಲ್ಪಿಸುತ್ತಿರಲಿಲ್ಲ ಎಂದು ಹೇಳಲಾಗಿದ್ದು, ೨೦೧೮ರಲ್ಲಿ ನಟಿ ರಂಭಾ ಜೀವ ಕ’ಳೆದುಕೊಳ್ಳುವ ಪ್ರಯತ್ನ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ಇನ್ನು ಈ ಗಾಸಿಪ್ ಗಳಿಗೆಲ್ಲಾ ಸ್ಪಷ್ಟಿಕರಣ ನೀಡಿದ್ದ ನಟಿ ರಂಭಾ ನಾನು ಯಾವುದೇ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ. ಮನೆಯಲ್ಲಿ ಪೂಜೆ ಇದ್ದು, ದಿನ ಪೂರ್ತಿ ಉಪವಾಸ ಮಾಡಿದ್ದೆ. ಬಳಿಕ ಮಾರನೇ ದಿನ ಚಿತ್ರೀಕರಣಕ್ಕೆಂದು ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಆಗ ರಂಭಾ ಹೇಳಿದ್ದರು. ಇನ್ನು ರಂಭಾ ಅವರ ತಮ್ಮ ಕುಟುಂಬದ ಜೊತೆ ಕೆನಡಾದ ಟೊರೆಂಟೋದಲ್ಲಿ ಪತಿ ಮಕ್ಕಳ ಜೊತೆ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.