ಮೂಲತಃ ಮೈಸೂರಿನವರಾದ ನಟಿ ಸಾಂಘವಿ 90ರ ದಶಕದಲ್ಲಿ ಟಾಪ್ ಹೀರೋಯಿನ್ ಮರೆದ ನಟಿ. ಇವರ ಬಾಲ್ಯದ ಹೆಸರು ಕಾವ್ಯ ರಮೇಶ ಎಂದು. ಕನ್ನಡ ಸೇರಿದಂತೆ ತೆಲಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಹ ನಟಿಸಿದ್ದಾರೆ. ಆಕ್ಟೊಬರ್ 4, 1977ರಲ್ಲಿ ಹುಟ್ಟಿದ ನಟಿ ಸಂಘವಿ ಜಗ್ಗೇಶ್ ಅಭಿನಯದ ರಾಯರ ಮಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.

ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಕಡಿಮೆ ಆದರೂ, ಅಂಬರೀಷ್, ವಿಷ್ಣುವರ್ಧನ್ ಅವರ ಕಾಂಬಿನೇಷನ್ ನಲ್ಲಿ ಬಂದ ದಿಗ್ಗಜರು, 2001ರಲ್ಲಿ ತೆರೆಕಂಡ ದಿಗ್ಗಜರು ಚಿತ್ರ ತುಂಬಾ ಸೂಪರ್ ಹಿಟ್ ಆಗಿತ್ತು. ದರ್ಶನ್, ಉಪೇಂದ್ರ ಕಾಂಬಿನೇಷನ್ ನಲ್ಲಿ ಬಂದ ಅನಾಥರು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು 90ರ ದಶಕದಲ್ಲಿ 15ಕ್ಕೂ ಹೆಚ್ಚು ಚಿತ್ರಗಳನ್ನ ನೀಡಿದ ಖ್ಯಾತಿ ಸಾಂಘವಿ ಹೆಸರಲ್ಲಿದೆ.ಇನ್ನು 2008ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ್ದ ಇಂದ್ರ ಚಿತ್ರದ ಬಳಿಕ ಚಿತ್ರರಂಗದಿಂದಲೇ ದೂರ ಉಳಿದ್ರು.

2016 ಫೆಬ್ರುವರಿ ಮೂರರಂದು ಸಾಫ್ಟ್ವೇರ್ ಇಂಜಿನಿಯರ್ ವೆಂಕಟೇಶ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಾಂಘವಿ ಸಿನಿಮಾ ರಂಗದಿಂದಲೇ ದೂರ ಉಳಿದುಬಿಟ್ಟರು. ಬಳಿಕ 2019ರಲ್ಲಿ ತಮಿಳಿನ ಕೋಲಂಜಿ ಅನ್ನೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ್ದ ಸಾಂಘವಿ ಈಗ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ. ಹೌದು, 42 ವರ್ಷದ ಸಾಂಘವಿ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.