ಸ್ಯಾಂಡಲ್ವುಡ್ ಕೃಷ್ಣ ಖ್ಯಾತಿಯ ನಟ ಅಜಯ್ ರಾವ್ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ..

Cinema Uncategorized

ಕನ್ನಡದ ಸೂಪರ್ ಹಿಟ್ ಮೂವಿ ‘ಎಕ್ಸ್‌ಕ್ಯೂಸ್‌ ಮೀ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟ ಅಜಯ್ ರಾವ್. ಕೃಷ್ಣನ ಲವ್ ಸ್ಟೋರಿ ಸಿನಿಮಾದ ಬಳಿಕ ಕೃಷ್ಣ ಹೆಸರಿನ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ಅಜಯ್ ರಾವ್ ಗೆ ಸ್ಯಾಂಡಲ್ವುಡ್ ನ ಕೃಷ್ಣ ಎಂದೇ ಕರೆಯಲಾಗುತ್ತದೆ. ಇನ್ನು ತನ್ನದೇ ಆದ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಜಯ್ ರಾವ್ ಲವ್ ಸ್ಟೋರಿ ಆಧಾರಿತ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿ ಅಭಿಮಾನಿಗಳ ಮನಸನ್ನಗೆದ್ದವರು.

ಇನ್ನು ಅಜರ್ ರಾವ್ ಅವರ ವೈಯುಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ಸ್ವಪ್ನ ಎಂಬುವವರ ಜೊತೆ ಮದುವೆ ಮಾಡಿಕೊಂಡಿರುವ ಅಜಯ್ ರಾವ್ ಅವರದ್ದು ಮುದ್ದಾದ, ಸುಂದರವಾದ ಕುಟುಂಬ. ಇನ್ನು ಈ ಸುಂದರ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಇದೆ. ಚರೀಶ್ಮಾ ಎಂಬುದು ಅಜಯ್ ರಾವ್ ದಂಪತಿಗಳ ಹೆಣ್ಣು ಮಗುವಿನ ಹೆಸರು. ಇನ್ನು ತಮ್ಮ ಮುದ್ದು ಮಗಳ ಹುಟ್ಟು ಹಬ್ಬವನ್ನ ಇತ್ತೀಚೆಗಷ್ಟೇ ತುಂಬಾ ಸರಳವಾಗಿ ಆಚರಣೆ ಮಾಡಿಕೊಂಡಿದ್ದ ನಟ ಅಜಯ್ ರಾವ್

ತಮ್ಮ ಮಗಳ ಜನ್ಮ ದಿನಾಚರಣೆಯ ಫೋಟೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅಜಯ್ ರಾವ್ ಮುದ್ದು ಮಗಳು ಚರೀಶ್ಮಾ ಅವರ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ನಟ ನಟಿಯರಿಂದ ಶುಭಾಶಯಗಳು ಹಾಗೂ ಆಶೀರ್ವಾದದ ಮಹಾಪೂರವೇ ಹರಿದು ಬಂದಿತ್ತು. ಇನ್ನು ವಿಜಯ್ ಆನಂದ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ನಟ ಅಜಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಚಿತ್ರ 09 ಏಪ್ರಿಲ್ 2021 ರಂದು ಬಿಡುಗಡೆ ಆಗಲಿದೆ..ಇನ್ನು ಈ ಸಿನಿಮಾದ ಮೂಲಕ ಕೃಷ್ಣ ಅಜಯ್ ರಾವ್ ಅವರಿಗೆ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಬ್ರೇಕ್ ಸಿಗುತ್ತಾ ಎಂದು ಕಾಡು ನೋಡಬೇಕಾಗಿದೆ.