ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ಗೆ ಹೃದಯಾಘಾ’ತ..ವೈದ್ಯರು ಹೇಳಿದ್ದೇನು ಗೊತ್ತಾ.?

Kannada News

ಸ್ನೇಹಿತರೇ, ತಮ್ಮ ಖಡಕ್ ನುಡಿ, ನೇರವಾದ ಮಾತುಗಳಿಂದ ಮಾಧ್ಯಮ ಲೋಕದಲ್ಲಿ ಫೇಮಸ್ ಆಗಿರುವ ಪತ್ರಕರ್ತರಲ್ಲಿ ಅಜಿತ್ ಹನುಮಕ್ಕನವರ್ ಕೂಡ ಒಬ್ಬರು. ಕನ್ನಡದ ಖಾಸಗಿ ಮಾಧ್ಯಮ ವಾಹಿನಿ ಏಶಿಯಾನೆಟ್ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಸೀನಿಯರ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಅಜಿತ್ ಅಜಿತ್ ಹನುಮಕ್ಕನವರ್ ಲಘುವಾದ ಹೃ’ದಯಾಘ’ತವಾಗಿದೆಯೆಂದು ಹೇಳಲಾಗಿದೆ. ಇನ್ನು ಈ ಘಟನೆ ನಡೆದಿರುವುದು ಅಜಿತ್ ಅವರು ತಮ್ಮ ಕಾರನ್ನ ಡ್ರೈವ್ ಮಾಡಿಕೊಂಡು ಹೋಗುವ ಸಮಯದಲ್ಲಿ ಎದೆ ಕಾಣಿಸಿಕೊಂಡಿದ್ದು, ಹೃದಯದಲ್ಲಿ ಏನೋ ತೊಂದರೆಯಾಗಿದೆ ಎಂದು ತಿಳಿದ ಅಜಿತ್ ಅವರು ತಮ್ಮ ಸಮಯ ಪ್ರಜ್ಞೆಯಿಂದ ಜೀವ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹೌದು, ಅಜಿತ್ ಹನುಮಕ್ಕನವರು ತಮ್ಮ ಕಾರ್ ಡ್ರೈವ್ ಮಾಡಿಕೊಂಡು ತಮ್ಮ ಕಚೇರಿಗೆ ಹೋಗುವ ಸಮಯದಲ್ಲಿ ಸ್ವಲ್ಪ ಎದೆ ನೋ’ವು ಕಾಣಿಸಿಕೊಂಡು, ಅದು ಹೆಚ್ಚಾಗುತ್ತಾ ಹೋಗಿದ್ದು, ಲಘು ಹೃ’ದಯಾಘಾ’ತವಾಗಿದೆ. ತಕ್ಷಣವೇ ಸಮಯ ಪ್ರಜ್ಞೆ ತೋರಿದ ಅಜಿತ್ ಹನುಮಕ್ಕನವರ್ ಕಾರ್ ಡ್ರೈವ್ ಮಾಡಿಕೊಂಡೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೀದಾ ಹೋಗಿದ್ದು, ತಮಗಾಗಿರುವ ತೊಂದರೆ ಬಗ್ಗೆ ವೈದ್ಯರಲ್ಲಿ ಹೇಳಿದ್ದಾರೆ. ತಕ್ಷಣವೇ ವೈದ್ಯರು ಅಜಿತ್ ಹನುಮಕ್ಕನವರ್ ಅವರನ್ನ

ತಪಾಸಣೆ ಮಾಡಿ ಲಘು ಹೃ’ದಯಾಘಾ’ತವಾಗಿದೆ ಎಂದು ತಿಳಿಸಿದ್ದು, ಬೇಕಾದ ಚಿಕಿತ್ಸೆಯನ್ನ ವೈದ್ಯರು ನೀಡಿದ್ದಾರೆ. ಒಂದು ವೇಳೆ ಅಜಿತ್ ಹನುಮಕ್ಕನವರ್ ತಮಗಾದ ತೊಂದರೆ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯೆ ಮಾಡಿದ್ದರೆ ಅ’ಪಾಯವಾಗುವ ಸಂಭವಿತ್ತು ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಅಜಿತ್ ಹನುಮಕ್ಕನವರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಮೂರೂ ಸ್ಟಂಟ್ ಗಳನ್ನ ಅಳವಡಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮೊದಲಿಗೆ ಐಸಿಯು ನಲ್ಲಿ ಅಡ್ಮಿಟ್ ಮಾಡಿದ್ದ ಅಜಿತ್ ಹನುಮಕ್ಕನವರ್ ಅವರನ್ನ ಈಗ ನಾರ್ಮಲ್ ವಾರ್ಡ್ ಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಕೆಲಸದ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗಿದ್ದು, ಸ್ವಲ್ಪ ದಿನಗಳ ಕಾಲ ತಮ್ಮ ಕೆಲಸಕ್ಕೆ ಬಿಡುವು ಕೊಟ್ಟು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ತಮ್ಮ ಸಮಯ ಪ್ರಜ್ಞೆಯ ಕಾರಣದಿಂದಾಗಿ ಅಜಿತ್ ಹನುಮಕ್ಕನವರ್ ಅವರು ತಮ್ಮ ಜೀವ ಉಳಿಸಿಕೊಂಡಿದ್ದಾರೆ.