ಇತ್ತೀಚೆಗಷ್ಟೇ 1 ಕೋಟಿ ದೇಣಿಗೆ ನೀಡಿದ್ದ ಈ ಸ್ಟಾರ್ ನಟ ಮತ್ತೆ ಆಕ್ಸಿಜೆನ್ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ..

Cinema

ಸ್ನೇಹಿತರೇ, ಕೊರೋನಾ ಸೋಂಕಿನ ಎರಡನೇ ಅಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿಗೀಡಾಗುವವರ ಸಂಖ್ಯೆ ಕೂಡ ದ್ವಿಗುಣವಾಗುತ್ತಲೇ ಇದೆ. ಕೇಂದ್ರ ಸರ್ಕಾರ ಸೇರಿದಂತೆ ಆಯಾ ರಾಜ್ಯಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರೂ ಸಾವು ನೋವುಗಳ ಸಂಖ್ಯೆಯನ್ನ ತಡೆಯಲು ಆಗುತ್ತಿಲ್ಲ, ಸೋಂಕನ್ನ ನಿಯಂತ್ರಣ ಮಾಡಲು ಆಗುತ್ತಿಲ್ಲ. ಇದರ ನಡುವೆ ಹಲವು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜೆನ್ ನ ಕೊರತೆ ಹೆಚ್ಚಾಗಿದೆ. ಇನ್ನು ಸಿನಿಮಾ ಸೆಲೆಬ್ರೆಟಿಗಳು, ಕ್ರಿಕೇಟಿಗರು ಸೇರಿದಂತೆ ಹಲವಾರು ಸಂಸ್ಥೆಗಳು ಆಕ್ಸಿಜೆನ್ ಕೊರತೆ ನೀಗಿಸಲು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಹೌದು, ನೆನ್ನೆ ಮೊನ್ನೆಯಷ್ಟೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸ್ಥಾಪನೆ ಮಾಡಿರುವ ಟ್ರಸ್ಟ್ ಗೆ ಒಂದು ಕೋಟಿ ದೇಣಿಗೆ ನೀಡಿದ್ದು ಆಕ್ಸಿಜೆನ್ ನಿಂದಾಗಿ ಸಂಕಷ್ಟದಲ್ಲಿರುವ ಸೋಂಕಿತರ ಜೀವ ಉಳಿಸಲು ನೆರವಾಗಿದ್ದಾರೆ. ಇನ್ನು ಈಗ ಮತ್ತೆ ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ದಂಪತಿ ನೂರು ಆಕ್ಸಿಜೆನ್ ಸಾಂದ್ರಕ ನೀಡಿದ್ದು ಸರ್ಕಾರದೊಂದಿಗೆ ಕೈ ಜೋಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ದೇಶದ ಜನರು ಸಂಕಷ್ಟದಲ್ಲಿದ್ದಾಗ ನಟ ಅಕ್ಷಯ್ ಕುಮಾರ್ ಅವರು ದಾನ ನೀಡುವುದರಲ್ಲಿ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.

ಇನ್ನು ಅಕ್ಷಯ್ ಕುಮಾರ್ ದಂಪತಿ ನೂರು ಆಕ್ಸಿಜೆನ್ ಸಾಂದ್ರಕಗಳನ್ನ ನೀಡುವುದಷ್ಟೇ ಅಲ್ಲದೆ, ಆಸ್ಫತ್ರೆಗಳಲ್ಲಿ ಬೆಡ್ ಗಳಾಗಲಿ, ಆಕ್ಸಿಜೆನ್ ಆಗಲಿ ಮತ್ಯಾವುದೇ ವೈದ್ಯಕೀಯ ಉಪಕರಣಗಳಾಗಲಿ ದಾನ ಮಾಡಿ ಎಂದು ತಮ್ಮ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಮನವಿ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರು ಮಾತ್ರವಲ್ಲದೆ, ನಟ ಸೋನು ಸೂದ್ ಹಾಗೂ ಸಲ್ಮಾನ್ ಖಾನ್ ಅವರು ಸೇರಿದಂತೆ ಹಲವಾರು ನಟರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.