1ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾದ ದೈತ್ಯ ಅಮೆಜಾನ್ ಕಂಪನಿ..

News

ಇಡೀ ಜಗತ್ತಿನಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಸಾವಿರಾರು ಜನರನ್ನ ಹೆಮ್ಮಾರಿಯಂತೆ ಬಲಿ ತೆಗೆದುಕೊಳ್ಳುತ್ತಿದೆ. ಇನ್ನು ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಹಲವಾರು ದೇಶಗಳು ಲಾಕ್ ಡೌನ್ ಮಾಡಿದ್ದು, ಮನೆಯಿಂದ ಆಚೆ ಹೊರಬರದಂತೆ ತನ್ನ ಪ್ರಜೆಗಳಿಗೆ ಆದೇಶ ನೀಡಲಾಗಿದೆ.

ಇನ್ನು ಸದ್ಯದ ಮಟ್ಟಿಗೆ ಈಡಿ ಪ್ರಪಂಚದ ತುಂಬಾ ಭಯಭೀತದ ವಾತಾವರಣ ನಿರ್ಮಾಣವಾಗಿದ್ದು, ಜನರು ದಿನನಿತ್ಯದ ವಸ್ತುಗಳಿಗಾಗಿ ಈಗ ಹೆಚ್ಚಾಗಿ ಆನ್ಲೈನ್ ಕಂಪೆನಿಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಈ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡಿರುವ ದೈತ್ಯ ಇ ಕಾಮರ್ಸ್ ಕಂಪನಿ ಅಮೆಜಾನ್ ಬರೋಬ್ಬರಿ ಒಂದು ಲಕ್ಷ ಕ್ಕಿಂತ ಹೆಚ್ಚಾಗಿ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ.

ಕರೋನಾ ಸೋಂಕಿನ ಕಾಟದಿಂದಾಗಿ ಅಮೇರಿಕಾದಲ್ಲಿ ಜನರು ಮನೆಯಿಂದ ಆಚೆ ಬರುತ್ತಿಲ್ಲ. ಈ ಕಾರಣದಿಂದಾಗಿಯೇ ಅಮೇರಿಕಾದಲ್ಲಿ ಆರ್ಡರ್ ಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚು ಕೆಲಸಗಾರರಿಲ್ಲದ ಕಾರಣದಿಂದಾಗಿ ಗ್ರಾಹಕರ ಕೈಗೆ ಆರ್ಡರ್ ಗಳು ಸೇರುತ್ತಿಲ್ಲವಾದ ಕಾರಣ ಒಂದು ಲಕ್ಷ ಉದ್ಯೋಗಿಗಳನ್ನ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದೇವೆ ಎಂದು ಅಮೆಜಾನ್ ಹೇಳಿದೆ.

ಇನ್ನು ಕೊರೋನಾ ಸೋಂಕಿನ ಕಾರಣದಿಂದಾಗಿ ಜನರು ಮನೆಯಿಂದ ಆಚೆ ಬರುತ್ತಿಲ್ಲವಾದ ಕಾರಣ ನಿರೀಕ್ಷೆಗೆ ಮೀರಿದ ಆರ್ಡರ್ ಗಳು ಹೆಚ್ಚಾಗಿವೆ. ಹಾಗಾಗಿ ಹೆಚ್ಚಿನ ಉದೋಗಿಗಳನ್ನ ನೇಮಿಕಾತಿ ಮಾಡಿಕೊಳ್ಳುತ್ತಿದ್ದು, ಗಂಟೆಗೆ ೧೫ ಡಾಲರ್ ಗಳವರೆಗೆ ವೇತನ ಅಮೆಜಾನ್ ಕಂಪನಿ ಹೇಳಿದೆ.