ಕೆಜಿಎಫ್ 2 ಚಿತ್ರದಿಂದ ಅನಂತ್ ನಾಗ್ ಹೊರಬಂದ್ರಾ?ಚಿತ್ರತಂಡ ಹೇಳಿದ್ದೇನು ಗೊತ್ತಾ.?

Advertisements

ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ಕೆಜಿಎಫ್ ಚಾಪ್ಟರ್ ೧ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಈಗ ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕೆಜಿಎಫ್ ಭಾಗ2ರ ಬಿಡುಗಡೆಗಾಗಿ ಕಾಯುತ್ತಿದೆ.

Advertisements

ಇಂತಹ ಸಮಯದಲ್ಲೇ KGF ಚಾಪ್ಟರ್ 2 ಚಿತ್ರದಿಂದ ಹೊರಬಂದಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ ಚಾಪ್ಟರ್ 1 ರಲ್ಲಿ ಹಿರಿಯ ನಟ ಅನಂತ್ ನಾಗ್ ರವರು ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರ ಮನಸೆಳೆದಿದ್ದರು.

ಕೆಜಿಎಫ್ ಚಿತ್ರದ ಭಾಗ ಒಂದರಲ್ಲಿ ರಾಕಿ ಭಾಯ್ ಹುಟ್ಟಿದ್ದು ಹೇಗೆ ಡಾನ್ ಆಗಿದ್ದೆಗೆ ಎಂಬುದರ ಬಗ್ಗೆ ಮತ್ತೊಬ್ಬ ನಟಿ ಮಾಳವಿಕಾರವರಿಗೆ ಹೇಳುವ ದೃಶ್ಯಗಳು ಪ್ರೇಕ್ಷಕರನ್ನ ಸೀಟಿನಲ್ಲಿ ಹಿಡಿದಿಡುವಂತೆ ಮಾಡಿತ್ತು. ಅನಂತ್ ನಾಗ್ ಅವರು ರಾಕಿ ಭಾಯ್ ವೃತ್ತಾಂತವನ್ನ ಹೇಳುವ ರೀತಿಗೆ, ಅವರ ಧ್ವನಿಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಈಗ ಕೆಜಿಎಫ್ ಭಾಗ ಎರಡರಲ್ಲಿ ಅನಂತ್ ನಾಗ್ ಇಲ್ಲ ಎಂದರೆ ಹೇಗೆ ಎಂಬುದು ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ಆದರೆ ನಟ ಅನಂತ್ ನಾಗ್ ರವರು ಚಿತ್ರದಿಂದ ಹೊರಬಂದಿಲ್ಲ ಎಂದು ಕೆಜಿಎಫ್ ಭಾಗ ಎರಡರ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. ಅನಂತ್ ನಾಗ್ ರವರು ಅಭಿನಯಿಸಲಿರುವ ಕೆಲವೊಂದು ಸೀನ್ ಗಳು ಬಾಕಿ ಇದ್ದು, ಚಿತ್ರದ ಭಾಗವಾಗಿಯೇ ಮುಂದುವರಿಯಲಿದ್ದಾರೆ ಎಂದು ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ.