ಇಷ್ಟು ರುಚಿಯಾದ ರಸಂ ಅನ್ನು ನಾವು ಎಂದು ಮಾಡಿರಲಿಲ್ಲ ಈ ರಸಂನ ರುಚಿಗೆ ಸರಿಸಾಟಿ ಇಲ್ಲ

Kannada News
Advertisements

ನಮಸ್ಕಾರ ಸ್ನೇಹಿತರೆ, ನಾವು ಬಹಳಷ್ಟು ರೀತಿಯಲ್ಲಿ ರಸವನ್ನು ಮಾಡಿರುತ್ತೇವೆ ಆದರೆ ಈ ರಸಂನ ರುಚಿ ಮತ್ಯಾವುದೇ ರಸಂಗೆ ಸಾಟಿ ಇಲ್ಲ ಎಂದು ಎನಿಸಿತು, ಅದ್ಭುತ ಅಮೋಘ ಈ ಖಾರವಾದ ಆಂಧ್ರ ಸ್ಟೈಲ್ ಟೊಮೆಟೊ ರಸಂ, ಒಮ್ಮೆ ಮಾಡಿ ತಿಂದರೆ ಖಂಡಿತ ಪದೇಪದೇ ಮಾಡೋದಂತೂ 100% ಗ್ಯಾರೆಂಟಿ. ಹಾಗಾಗಿ ಈ ದಿನ ನಾಟಿ ಟೊಮೊಟೊ ಉಪಯೋಗಿಸಿ ಖಾರ ಖಾರವಾದ ಆಂಧ್ರ ಶೈಲಿಯ ಟೊಮೊಟೊ ರಸಂ ಯಾವ ರೀತಿ ಮಾಡಬಹುದು ಅಂತ ನೋಡೋಣ ಬನ್ನಿ..ಬಹಳ ಸ್ಪೈಸಿಯಾಗಿ ರುಚಿಯಾಗಿರುವಂತಹ ಟೊಮೊಟೊ ರಸಂನ್ನ ಮಾಡುವುದೇಗೆ ಬೇಕಾಗುವ ಪದಾರ್ಥಗಳೇನು ಅಂತ ಈಗ ನೋಡೋಣಾ..

ಮಾಡಲು ಬೇಕಾದ ಪದಾರ್ಥಗಳು : ನಾಟಿ ಟೊಮೆಟೋ ಹಣ್ಣು 4, ಹಸಿಮೆಣಸಿನಕಾಯಿ 10,  ಒಂದು ಗಡ್ಡೆ ಬೆಳ್ಳುಳ್ಳಿ,  ಬೇಯಿಸಿದ ತೊಗರಿಬೇಳೆ ಕಾಲು ಕಪ್ ನಷ್ಟು, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವಿನ ಸೊಪ್ಪು ಸ್ವಲ್ಪ, ಖಾರದ ಮೆಣಸಿನಕಾಯಿ 2,  ಜೀರಿಗೆ ಪುಡಿ 2 ಟೇಬಲ್ ಸ್ಪೂನ್ ನಷ್ಟು, ಬೆಲ್ಲ 1 ಟೇಬಲ್ ಸ್ಪೂನ್,  ಒಂದು ಚಿಕ್ಕ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, ತುಪ್ಪ1 ಟೇಬಲ್ ಸ್ಪೂನ್, ಎಣ್ಣೆ 2 ಟೇಬಲ್ ಸ್ಪೂನ್, ಧನಿಯಾ ಪುಡಿ ಒಂದು ಟೀ ಸ್ಪೂನ್, ಸಾಸಿವೆ ಸ್ವಲ್ಪ, ಅರಿಶಿನದ ಪುಡಿ ಸ್ವಲ್ಪ, ಇಂಗು, ರುಚಿಗೆ ತಕ್ಕಷ್ಟು ಉಪ್ಪು..