ವಿಡಿಯೋ ಮಾಡಿ ವೈರಲ್ ಆಗಿದ್ದ ರೈತ ಮಹಿಳೆಯ ಸಹಾಯಕ್ಕೆ ನಿಂತ ನಟ ಅನಿರುದ್ದ್

News

ಕಿರುತೆರೆಯಲ್ಲಿ ಮೂಡಿಬರುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡಿಗರ ಮನಗೆದ್ದವರು ನಟ ಅನಿರುದ್ದ್. ಕಿರುತೆರೆ ಇತಿಹಾಸದಲ್ಲೇ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದ ಈ ಧಾರವಾಹಿ ಮೂಲಕ ಅನಿರುದ್ಧ ಕರ್ನಾಟಕದ ಮನೆ ಮಾತಾಗಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ಸೀರಿಯಲ್ ನ ಹವಾ ಹೆಚ್ಚಾಗಿದ್ದು, ನಟ ಅನಿರುದ್ದ್ ರವರ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿದೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗಲು ಆಕ್ಟಿವ್ ಆಗಿರುವ ಅನಿರುದ್ದ್ ರವರು ತಮ್ಮ ವೈಯುಕ್ತಿಕ ಜೀವನದ ವಿಚಾರಗಳು ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯುಳ್ಳ ವಿಚಾರಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಖರೀದಿ ಆಗದೆ ಉಳಿದಿರುವ ಈರುಳ್ಳಿಯ ಕುರಿತು ರೈತ ಮಹಿಳೆಯೊಬ್ಬರು ವಿಡಿಯೋ ಮಾಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈಗ ನಟ ಅನಿರುದ್ದ್ ರವರು ಕೂಡ ರೈತ ಮಹಿಳೆಯ ಸಹಾಯಕ್ಕೆ ಬಂದಿದ್ದು, ಸಂಸದರು, ಸಚಿವರು ಹಾಗೂ ಶಾಸಕರಿಗೆ ಕರೆ ಮಾಡಿ ರೈತ ಮಹಿಳೆಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಇದರ ಬಗ್ಗೆ ಪೋಸ್ಟ ಮಾಡಿಕೊಂಡಿರುವ ಅನಿರುದ್ದ್ ರವರು ರೈತ ಮಹಿಳೆಯ ಹೃದಯ ವಿದ್ರಾವಕ ವಿಡಿಯೋ ನೋಡಿದೆ. ನೀವೆಲ್ಲರೂ ಕೂಡ ಆ ವಿಡಿಯೋ ನೋಡಿ ನಿಮ್ಮದೇ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ನಾನು ಕೂಡ ನನ್ನದೇ ರೀತಿಯಲ್ಲಿ, ಕೃಷಿ ಸಚಿವರಾಗಿರುವ ಬಿಸಿ. ಪಾಟೀಲ್, ಸಂಸದರಾಗಿರುವ ತೇಜಸ್ವಿ ಸೂರ್ಯ ಹಾಗೂ ನಾರಾಯಣಗೌಡರಿಗೆ ಕಾಲ್ ಮಾಡಿದ್ದು, ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ರೈತ ಮಹಿಳೆಯ ವಿಡಿಯೋ ವಿಚಾರವಾಗಿ ಸರಕಾರ ಸ್ಪಂದಿಸಿರುವ ರೀತಿ, ಕಾರ್ಯದರ್ಶಿಗಳು, ಜನಪ್ರತಿನಿಧಿಗಳು ಸ್ಪಂದಿಸಿದ ರೀತಿ ನನಗೆ ಸಂತಸವುನ್ನುಂಟು ಮಾಡಿದೆ. ಈರುಳ್ಳಿಗೆ ತಕ್ಕ ಬೆಲೆಯನ್ನ ಕೊಟ್ಟು ಕೊಳ್ಳಲು ಸರ್ಕಾರ ಮುಂದಾಗಿರುವುದು ಸಂತಸ ತಂದಿದೆ. ನಮ್ಮ ಜನ ಹೃದಯ ಶ್ರೀಮಂತಿಕೆ ಉಳ್ಳವರು ಎಂದು ತೋರಿಸಿಕೊಟ್ಟಿದ್ದಾರೆ ಎಂದು ನಟ ಅನಿರುದ್ದ್ ಬರೆದುಕೊಂಡಿದ್ದಾರೆ.