ನನ್ನವರನ್ನ ಕೊನೆಗೂ ನಾನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ಎಂದು ಕಣ್ಣೀರಿಟ್ಟ ನಟ ಅನಿರುದ್ಧ್ ಹೇಳಿದ್ದೇನು ಗೊತ್ತಾ ?

Kannada News Uncategorized
Advertisements

ಸ್ನೇಹಿತರೇ, ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊ’ರೋನಾ ಸೋಂಕು ಹೆಚ್ಚಾಗುತ್ತಲೇ ಇದೆ. ಯಾವ ಮಟ್ಟಿಗೆ ಎಂದರೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಉಸಿರಾಡಲು ಕೃತಕ ಆಮ್ಲ’ಜನಕ ಸಿಗುತ್ತಿಲ್ಲ. ಸರಿಯಾದ ಸಮಯಕ್ಕೆ ಸೋಂಕಿತರಿಗೆ ಆಕ್ಸಿಜೆನ್ ಸಿಗದೆಯೇ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ, ಸೆಲೆಬ್ರೆಟಿಗಳು ಕೂಡ ಆಸ್ಪತ್ರೆಯ ಬೆಡ್ ಹಾಗೂ ಆಕ್ಸಿಜೆನ್ ಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಇನ್ನು ಮೊನ್ನೆಯಷ್ಟೇ ಸಿಲ್ಲಿ ಲಿಲ್ಲಿ ಧಾರವಾಹಿ ಖ್ಯಾತಿಯ ನಟಿ ತನ್ನ ಅಕ್ಕ ಸೋಂಕಿನಿಂದ ಮೃ’ಪತಟ್ಟಿದ್ದು, ಕೊ’ರೋನಾ ಇಲ್ಲ ಅಂದವರಿಗೆ ಕ’ಪಾಳಕ್ಕೆ ಹೊ’ಡೆಯಿರಿ ಎಂದು ಆ’ಕ್ರೋಶ ವ್ಯಕ್ತಪಡಿಸಿ ತಮ್ಮ ನೋವನ್ನ ಹೊರಹಾಕಿದ್ದರು.

[widget id=”custom_html-4″]

Advertisements

ಇನ್ನು ಈ ದಿನ ಗಟ್ಟಿಮೇಳ ಧಾರಾವಾಹಿಯ ನಟ ಪವನ್ ಕೂಡ ತನ್ನ ತಂದೆ ಮತ್ತು ಭಾವನನ್ನ ಕಳೆದುಕೊಂಡಿದ್ದು, ಬೆಡ್, ಆಕ್ಸಿಜೆನ್ ಗಳಿಗಾಗಿ ಪರದಾಡಿದ ನೋವಿನ ಬಗ್ಗೆ ವಿಡಿಯೋ ಮಾಡಿ ಸರ್ಕಾರದ ಅ’ವ್ಯವಸ್ಥೆಯ ಬಗ್ಗೆ ತಮ್ಮ ಆ’ಕ್ರೋಶ ಹೊರಹಾಕಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿದೆ. ಈಗ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟ ಅನಿರುದ್ಧ್ ಕೂಡ ಕೊ’ರೋನಾದಿಂದಾಗಿ ತಮ್ಮ ಆಪ್ತರೊಬ್ಬರನ್ನ ಕಳೆದುಕೊಂಡಿದ್ದು, ಬೆಡ್, ವೆಂಟಿಲೇಟರ್ ಹಾಗೂ ಔಷಧಿಗಳಿಗಾಗಿ ಹೇಗೆಲ್ಲಾ ಪರದಾಡಬೇಕಾಯಿತು ಎಂಬುದರ ಬಗ್ಗೆ ತಾವು ಅನುಭವಿಸಿದ ನೋ’ವಿನ ಬಗ್ಗೆ ಹೇಳಿಕೊಂಡಿದ್ದಾರೆ.

[widget id=”custom_html-4″]

ಸೋಂಕಿನ ಕಾರಣದಿಂದ ನಮ್ಮ ಆಪ್ತರೊಬ್ಬರನ್ನ ಕಳೆದುಕೊಂಡಿರುವೆ. ಆಪ್ತನನ್ನ ಆಸ್ಫತ್ರೆಗೆ ಸೇರಿಸುವ ಮುಂಚೆ ಆಸ್ಪತ್ರೆಯ ಬೆಡ್ ಗಾಗಿ ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಕಡೆ ಎಲ್ಲಿಯೂ ಬೆಡ್ ಸಿಗುತ್ತಿಲ್ಲ. ಸಂಬಂಧಪಟ್ಟ ಆಸ್ಪತ್ರೆಗಳಿಗೆ ಫೋನ್ ಮಾಡಿದ್ರೆ ಬೆಡ್ ಖಾಲಿ ಇಲ್ಲ ಅಂತ ಹೇಳುತ್ತಿದ್ದಾರೆ. ಇಷ್ಟೆಲ್ಲಾ ಪರದಾಡಿದ ಮೇಲೆ ಒಂದು ಆಸ್ಪತ್ರೆಯಲ್ಲ ಬೆಡ್ ಸಿಕ್ಕಿತು. ಆದರೆ ಬೆಡ್ ಸಿಕ್ಕರೂ ಕೂಡ ಐಸಿಯು ಸಿಗುತ್ತಿಲ್ಲ. ಐಸಿಯು ಸಿಕ್ಕರೂ ಕೂಡ ಆಕ್ಸಿಜೆನ್ ಸಿಗುತ್ತಿಲ್ಲ. ಇದೆಲ್ಲಾ ಸಿಕ್ಕರೂ ಸೋಂಕಿತ ರೋಗಿಗೆ ಬೇಕಾದ ರೆ’ಮಿಡಿಸಿವರ್ ಔಷಧಿ ಸಿಗುತ್ತಿಲ್ಲ. ಇನ್ನು ಬ್ಲಾಕ್ ನಲ್ಲಿ ಸಿಗುತ್ತೆ. ಅದೂ ಕೂಡ ಅಷ್ಟು ಸುಲಭವಲ್ಲ. ಅದಕ್ಕೂ ಪರದಾಡಬೇಕಾಯಿತು. ಇನ್ನು ಇಷ್ಟೆಲ್ಲಾ ಪರದಾಡಿದ್ರು ಕೊನೆಗೆ ತಮ್ಮ ಆಪ್ತನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

[widget id=”custom_html-4″]

ಮೊನ್ನೆ ಮಧ್ಯಾನ್ಹ ನಮ್ಮ ಆಪ್ತ ಹೋ’ಗಿಬಿಟ್ಟ. ಇನ್ನು ಮಾರನೇ ದಿನ ಸಂಸ್ಕಾರ ಮಾಡಲಾಯ್ತು. ಅದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಇನ್ನು ಅಂತಿಮ ಸಂ’ಸ್ಕಾರ ಮಾಡಲೆಂದು ಮೊದಲಿಗೆ ಬನಶಂಕರಿ ಬಳಿ ಹೋದೆವು. ಅಲ್ಲಿ ನೋಡಿದ್ರೆ ಅದಾಗಲೇ ಸಂಸ್ಕಾರಕ್ಕಾಗಿ ನಲವತ್ತಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳು ಸಾಲು ಸಾಲಾಗಿ ನಿಂತಿದ್ದವು. ಬಳಿಕ ಕೆಂಗೇರಿಗೆ ಹೋದಾಗ ನಮ್ಮ ಆಪ್ತನ ಸಂಸ್ಕಾರಕ್ಕಾಗಿ ನಮಗೆ ಅಲಿ ಹದಿನೇಳನೇ ನಂಬರ್ ಸಿಕ್ಕಿತು. ಇನ್ನ್ನು ಕೊನೆಗೆ ಅಲ್ಲಿಯೂ ಕೂಡ ಸಾಕಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಅನಿರುದ್ದ್ ಅವರು ಹೇಳಿದ್ದಾರೆ. ನೋಡಿ ಹೊರಗಡೆ ಇಂತಹ ಕೆ’ಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ನಿಮ್ಮಲ್ಲಯ್ಯ ಕೇಳಿಕೊಳ್ಳುತ್ತಿದ್ದೇನೆ. ಅನಾವಶ್ಯಕವಾಗಿ ಹೊರಗಡೆ ಯಾರೂ ಹೋಗಬೇಡಿ. ತಪ್ಪದೆ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ನಿಮಗೂ ನಿಮ್ಮನ್ನ ನಂಬಿರುವ ಕುಟುಂಬ ಇದೆ ಎಂದು ನಟ ಅನಿರುದ್ದ್ ಅವರು ಮನವಿ ಮಾಡಿಕೊಂಡಿದ್ದಾರೆ.