ಜೋಡಿಯಾಗಿ ತೆಲುಗಿನಲ್ಲಿ ನಟಿಸಲಿದ್ದಾರೆ ಚಂದನ್ ಅಂಕಿತಾ.!ಅಸಲಿ ಕಾರಣ ಏನ್ ಗೊತ್ತಾ.?

Entertainment

ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರ ಅಭಿನಯದ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಹೊಂದಿದ್ದಾರೆ. ಅವರದೆ ಅದ ಅಭಿನಯದ ಮೂಲಕ ಅಭಿಮಾನಿಯ ಬಳಗ ಕೂಡ ತಮ್ಮದಾಗಿಸಿಕೊಂಡು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಈ ಮುಂಚೆ ಕಲರ್ಸ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಎಂಬ ಸೀರಿಯಲ್ ಒಂದು ಪ್ರಸಾರ ಆಗಿದ್ದು, ಬಹಳ ವರ್ಷಗಳ ಕಾಲ ಈ ಸೀರಿಯಲ್ ತುಂಬಾನೇ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸೀರಿಯಲ್ ಮೂಲಕ ಕೆಲ ಕಲಾವಿದರು ಕನ್ನಡ ಸಿನಿಮಾರಂಗದ ಅವರವರ ಮುಂದಿನ ಹಂತಕ್ಕೆ ತಲುಪಿದ್ದರು. ಸಾಕಷ್ಟು ಕಲಾವಿದರು ಬಿಗ್ ಬಾಸ್ ಗೆ ಹೋಗಿ ಹೆಚ್ಚು ಹೆಸರು ಮಾಡಿದರು.

ಹೌದು ನಟ ಚಂದನ್ ಈಗಾಗಲೇ ಈ ಮುಂಚೆಯೇ ಅತ್ತ ತೆಲುಗು ಕಿರುತೆರೆಗೆ ಹೋಗಿ ಬಂದಿದ್ದಾರೆ. ಹೌದು ಕಲರ್ಸ್ ಕನ್ನಡದ ಮತ್ತೊಂದು ಖ್ಯಾತ ಧಾರಾವಾಹಿ ನಮ್ಮನೆ ಯುವರಾಣಿ ಈ ಸೀರಿಯಲ್ನಲ್ಲಿ ಅಭಿನಯಿಸುತ್ತಿರುವ ನಟಿ ಎದೆತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ನಿರೂಪಣೆ ಕೂಡ ಮಾಡುತ್ತಿದ್ದಾರೆ. ಹೌದು ನಮ್ಮನೆ ಯುವರಾಣಿ ಒಂದು ಕೌಟುಂಬಿಕ ಧಾರವಾಹಿ ಆಗಿದ್ದು ಸಂಬಂಧಗಳ ಬೆಲೆ ಏನೆಂದು ತಿಳಿಸಿ ಕೊಡುತ್ತಿದೆ. ಈ ಸೀರಿಯಲ್ ನಲ್ಲಿ ಬರುವ ಅನಿಕೇತ್ ನನ್ನ ತುಂಬಾ ಕಾಡಿಸುವ ಮೀರಾ ಅವರ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ.

ಹೌದು ಮೀರಾ ಪಾತ್ರವನ್ನು ನಿಭಾಯಿಸುತ್ತಿರುವ ನಟಿ ಅಂಕಿತ ಅಮರ್ ಅವರು ಇದೀಗ ಮೊದಲ ಬಾರಿಗೆ ತೆಲುಗು ಕಿರುತೆರೆಗೆ ಹಾರಲಿದ್ದಾರೆ ಎಂದು ಕೇಳಿ ಬಂದಿದೆ. ಹೌದು ಅದು ವಿಶೇಷವಾಗಿ ಚಂದನ್ ಅವರ ಜೊತೆಯೇ ನಟಿಯಾಗಿ ಒಂದು ಸೀರಿಯಲ್ಗೆ ಆಯ್ಕೆಯಾಗಿದ್ದಾರೆ. ಇಷ್ಟರಲ್ಲಿಯೇ ಸೀರಿಯಲ್ ಶೂಟಿಂಗ್ ಆರಂಭವಾಗುತ್ತೆ ಎಂದು ಚಂದನ್ ಅವರು ಹೇಳಿದ್ದು ಶ್ರೀಮತಿ ಶ್ರೀನಿವಾಸ್ ಎನ್ನುವ ಹೆಸರನ್ನು ಈಗಾಗಲೇ ಸೀರಿಯಲ್ಗೆ ಇಟ್ಟಾಗಿದೆ ಎಂದು ತಿಳಿದುಬಂದಿದೆ.

ತೆಲುಗು ಧಾರವಾಹಿ ಶ್ರೀಮತಿ ಶ್ರೀನಿವಾಸ್ ಸ್ಟಾರ್ ಮಾ ಎಂಬ ಚಾನೆಲ್ನಲ್ಲಿ ಪ್ರಸಾರ ಆಗಲಿದ್ದು, ಕನ್ನಡದ ಇಬ್ಬರು ಕಲಾವಿದರಿಗೆ ಕನ್ನಡಿಗರು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕನ್ನಡ ನೆಲದ ಕೀರ್ತಿಪತಾಕೆಯನ್ನು ಎಲ್ಲಕಡೆ ಪಸರಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ನಮ್ಮ ಕನ್ನಡದ ಜನರು ಹೇಳಿಕೊಳ್ಳುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಟ ಚಂದನ ಹಾಗೂ ನಟಿ ಅಂಕಿತ್ ಅಮರ್ ಅವರಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು…