ಕರ್ನಾಟಕದಲ್ಲಿ ಕರುನಾಡ ಸಿಂಗಂ ಎಂದೇ ಖ್ಯಾತಗರಾಗಿದ್ದವರು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು. ಖಡಕ್ ಹಾಗೂ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ ಅಣ್ಣಾಮಲೈ ಅವರಿಗೂ ಕೂಡ ಅಭಿಮಾನಿ ಬಳಗವಿತ್ತು. ಹೋದ ವರ್ಷ ತಾನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದ ಅಣ್ಣಾಮಲೈ ಅವರು ಮುಂದೆ ಏನು ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡುವಂತೆ ಮಾಡಿದ್ದರು. ಇನ್ನು ಇದರ ಬಗ್ಗೆ ಆಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ ತಾವು ರಾಜೀನಾಮೆ ನೀಡಿದ ತರುವಾಯ ತಮಿಳುನಾಡಿಗೆ ಹೋದ ಸಿಂಗಂ ಅಣ್ಣಾಮಲೈ ಅವರು ಬಿಜೆಪಿ ಪಕ್ಷಕ್ಕೆ ಸೇರಿ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದರು.
[widget id=”custom_html-4″]

ಆದರೆ ಅಣ್ಣಾಮಲೈ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟದ್ದು ಅಭಿಮಾನಿಗಳಿಗೆ ಇಷ್ಟವಿರಲಿಲ್ಲ. ರಾಜಕೀಯ ಬಿಟ್ಟು ಬೇರೆ ಏನಾದರು ಮಾಡಿ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಮನವಿ ಮಾಡಿಕೊಂಡಿದ್ದರು.ಇನ್ನು ಅಣ್ಣಾಮಲೈಯವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಆರು ತಿಂಗಳಿನಲ್ಲೇ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಬಂತು. ತಮಿಳುನಾಡಿನ ಬಿಜೆಪಿ ಪಕ್ಷದ ಉಪಾಧ್ಯಕ್ಪ ಸ್ಥಾನ ಪಡೆದ ಅಣ್ಣಾಮಲೈರವರು ಅರವಾಕುರಿಚಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದರು. ಇನ್ನು ಅದೇ ಕ್ಷೇತ್ರದ ಡಿಎಂಕೆ ಪಕ್ಷದ ಎಲಂಗೋ ಆರ್ ವಿರುದ್ಧವಾಗಿ ಅಣ್ಣಾಮಲೈ ಸ್ಪರ್ಧೆ ನೀಡಿದ್ದರು. ಇನ್ನು ಅಣ್ಣಾಮಲೈ ಅವರು ತಮ್ಮ ಪಕ್ಷಕೆ ಮತ ನೀಡುವಂತೆ ಭರ್ಜರಿ ಪ್ರಚಾರ ಕೂಡ ಮಾಡಿದ್ದರು.
[widget id=”custom_html-4″]

ಆದರೆ ನೆನ್ನೆಯಷ್ಟೇ ಚುನಾವಣೆಯ ಫಲಿತಾಂಶ ಬಂದಿದ್ದು, ಡಿಎಂಕೆ ಸ್ಫರ್ಧಿಯ ವಿರುದ್ಧ ಸೋತಿದ್ದಾರೆ ಅಣ್ಣಾಮಲೈ. ಹೌದು, ಐಪಿಎಸ್ ಅಧಿಕಾರಿಯಾಗಿ ಜನರ ಮನಸ್ಸು ಗೆದ್ದಿದ್ದ ಅಣ್ಣಾಮಲೈ ಅವರು ರಾಜಕೀಯವಾಗಿ ಸೋತಿದ್ದಾರೆ. ಇನ್ನು ತಮಿಳನಾಡಿನ ಜನ ಮೊದಲಿಗೆ ಮಣೆ ಹಾಕುವುದು ಅಲ್ಲಿನ ಪ್ರಾದೇಶಿಕ ಪಕ್ಷಗಳಿಗೆ. ಆಂಧ್ರದಂತೆ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವವೇ ಹೆಚ್ಚು. ಆದರೆ ಅಣ್ಣಾಮಲೈರವರು ಸೊತ್ತಿದ್ದರೂ ಕೂಡ ಅವರಿಗೆ ಬಿದ್ದಿರುವ ಮತಗಳು ಅಚ್ಚರಿ ಹುಟ್ಟಿಸುತ್ತದೆ. ಹೌದು, ಅಣ್ಣಾಮಲೈರವರಿಗೆ ಶೇಕಡಾ 38.71ರಷ್ಟು ಮತಗಳು ಅಂದರೆ 67915 ವೋಟ್ ಗಳು ಬಿದ್ದಿವೆ. ಇನ್ನು ಇವರ ಎದುರಾಗಿ ಸ್ಪರ್ಧೆ ನೀಡಿ ಗೆದ್ದಿರುವ ಡಿಎಂಕೆ ಪಕ್ಷದ ಎಲಾಂಗೋ ಅವರಿಗೆ ಶೇಕಡಾ 52.72ಮತಗಳು ಬಿದ್ದಿದ್ದು ಒಟ್ಟು 92215 ವೋಟ್ ಗಳು ಬಿದ್ದಿವೆ.