ಯಾವ ಸಿಇಓಗಿಂತಲೂ ಕಡಿಮೆ ಇಲ್ಲ ಕೊಹ್ಲಿ ಅನುಷ್ಕಾಶರ್ಮಾ ಬಾಡಿಗಾರ್ಡ್ ಸಂಬಳ! ಈತನ ವರ್ಷದ ಸಂಬಳ ಕೇಳಿ ಶಾಕ್ ಆದ ಬಾಲಿವುಡ್ ಮಂದಿ..

Cinema Sports

ಈಗಂತೂ ಸೆಲೆಬ್ರೆಟಿಗಳಾದವರು ತಮ್ಮ ರಕ್ಷಣೆಗೋಸ್ಕರ ಬಾಡಿಗಾರ್ಡ್ ಗಳನ್ನ ನೇಮಕ ಮಾಡಿಕೊಳ್ಳುತ್ತಾರೆ. ಬಾಡಿಗಾರ್ಡ್ ಗಳಿಲ್ಲದೆ ಇವರು ಒಂದು ಹೆಜ್ಜೆ ಕೂಡ ಮನೆಯಿಂದ ಆಚೆ ಇಡುವುದಿಲ್ಲ. ಅವರು ಎಲ್ಲಿಗೆ ಹೋಗಲಿ ಬಾಡಿಗಾರ್ಡ್ ಗಳು ಜೊತೆಯಲ್ಲೇ ಇರಲೇಬೇಕು. ತಮ್ಮ ಜೀವನದ ಒಂದು ಭಾಗವೇ ಆಗಿರುವಷ್ಟರ ಮಟ್ಟಿಗೆ ಬಾಡಿಗಾರ್ಡ್ ಗಳನ್ನ ಅವಲಂಬಿಸಿರುತ್ತಾರೆ ಸೆಲೆಬ್ರೆಟಿಗಳೆನಿಸಿಕೊಂಡವರು. ಇನ್ನು ಆಗಾಗ ಬಾಲಿವುಡ್ ನಟ ನಟಿಯರ ಬಾಡಿಗಾರ್ಡ್ ಗಳು ತೆಗೆದುಕೊಳ್ಳುವ ಸಂಬಳದ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇನ್ನು ಈಗ ಭಾರತದ ಟಾಪ್ ಸೆಲೆಬ್ರೆಟಿ ಜೋಡಿ ಎನಿಸಿಕೊಂಡಿರುವ ನಟಿ ಅನುಷ್ಕಾ ಶರ್ಮಾ ಮತ್ತು ಕಿಕೆಟರ್ ವಿರಾಟ್ ಕೊಹ್ಲಿಯ ಬಾಡಿಗಾರ್ಡ್ ಬಗ್ಗೆ ಸುದ್ದಿಯಾಗುತ್ತಿದ್ದು, ಅವರು ಒಂದು ವರ್ಷಕ್ಕೆ ತೆಗೆದುಕೊಳ್ಳುತ್ತಿರುವ ಸಂಬಳ ಕೇಳಿ ನಮ್ಮಂತಹ ಸಾಮಾನ್ಯರು ಸೇರಿದಂತೆ ದೊಡ್ಡ ದೊಡ್ಡ ಉದ್ಯೋದಲ್ಲಿರುವವರು ಕೂಡ ಶಾಕ್ ಆಗಿದ್ದಾರೆ..

ನಟಿ ಅನುಷ್ಕಾ ಶರ್ಮಾ ಅವರು ತಾವು ವಿರಾಟ್ ಕೊಹ್ಲಿಯನ್ನ ಮದ್ವೆ ಆಗುವುದಕ್ಕಿಂತ ಮುಂಚೆಯಿಂದಲೂ ಪ್ರಕಾಶ್ ಸಿಂಗ್ ಎಂಬುವವರನ್ನ ಬಾಡಿಗಾರ್ಡ್ ಆಗಿ ನೇಮಕ ಮಾಡಿಕೊಂಡಿದ್ದಾರೆ. ಇವರಿಗೆ ಸೋನು ಅಂತಲೂ ಕರೆಯುತ್ತಾರೆ. ಇನ್ನು ಈಗ ಬಾಡಿಗಾರ್ಡ್ ಸೋನು ತೆಗೆದುಕೊಳ್ಳುತ್ತಿರುವ ಸಂಬಳದ ಬಗ್ಗೆ ಕೇಳಿ ಅಚ್ಚರಿಯಾಗಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅನುಷ್ಕಾ ತಮ್ಮ ಮುದ್ದಿನ ಮಗಳ ಆರನೇ ತಿಂಗಳ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದು, ಕುಟುಂಬವೆಲ್ಲಾ ಇಂಗ್ಲೆಂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು ಕುಟುಂಬಕ್ಕಿಂತಲೂ ಹೆಚ್ಚಿನಿಸಿರುವ ಬಾಡಿಗಾರ್ಡ್ ಪ್ರಕಾಶ್ ಸಿಂಗ್ ಅವರು ಹಲವಾರು ವರ್ಷಗಳಿಂದ ಅನುಷ್ಕಾ ಅವರಿಗೆ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಅವರು ತಮ್ಮದೇ ಆದ ಭದ್ರತೆಯನ್ನು ಹೊಂದಿದ್ದರು ಕೂಡ ಪಬ್ಲಿಕ್ ಶೋಗಳಿಗೆ ಹೋದಾಗ ಪ್ರಕಾಶ್ ಸಿಂಗ್ ಅವರು ವಿರಾಟ್ ಕೊಹ್ಲಿ ಜೊತೆಯೇ ಅಂಗರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇನ್ನು ದಂಪತಿಗಳಿಬ್ಬರಿಗೂ ಅಂಗರಕ್ಷಕರಾಗಿರುವ ಪ್ರಕಾಶ್ ಸಿಂಗ್ ಅವರು ಒಂದು ವರ್ಷಕೆ ಪಡೆಯುವ ಸಂಬಳ ಯಾವ ಸಿಇಓ ಗಿಂತಲೂ ಕಡಿಮೆಯಿಲ್ಲ ಎಂದು ಹೇಳಲಾಗಿದೆ. ಹೌದು, ಜುಮ್ ಡಾಟ್ ಕಾಮ್ ವರದಿಯ ಪ್ರಕಾರ ಪ್ರಕಾಶ್ ಸಿಂಗ್ ಅವರು ತಿಂಗಳಿಗೆ ಹತ್ತು ಲಕ್ಷದಂತೆ ಒಂದು ವರ್ಷಕ್ಕೆ ಬರೋಬ್ಬರಿ 1.2ಕೋಟಿ ಹಣ ಸಂಬಳವಾಗಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಕೇವಲ ಸಂಬಳ ಮಾತ್ರವಲ್ಲದೆ ತಮ್ಮ ಕುಟುಂಬದವರಂತೆ ಪ್ರಕಾಶ್ ಸಿಂಗ್ ಅವರನ್ನ ವಿರಾಟ್ ಅನುಷ್ಕಾ ಅವರು ನೋಡಿಕೊಳ್ಳುತ್ತಿದ್ದಾರೆ.