ಪುನೀತ್ ನೆನಪಿಗಾಗಿ ದೊಡ್ಡ ನಿರ್ಧಾರ ಮಾಡಿದ ಶಿವಣ್ಣ.! ಪ್ರತಿವರ್ಷ ಅಪ್ಪು ನಿಧನದ ದಿನಕ್ಕೆ.?

Cinema

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ದೊಡ್ಡ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರ ಅಲ್ಲದೆ, ಅವರದ್ದೇ ಆದ ಸಾಮಾಜಿಕ ಕೆಲಸಗಳಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು. ಹೌದು ಇವರು ಅಕ್ಟೋಬರ್ 29ರಂದು ಯಾರಿಗೂ ಕೂಡ ಸಣ್ಣ ಸುಳಿವು ಕೊಡದೇ, ಹಠಾತ್ ಹೃ’ದಯಾಘಾ’ತಕ್ಕೆ ಒಳಗಾಗಿ ಸಾ’ವನ್ನಪ್ಪಿದರು. ಹೌದು ಅಪ್ಪು ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ, ಇಡೀ ಕರ್ನಾಟಕಕ್ಕೆ ಶಾಕ್ ಆದಂತೆ ಆಯಿತು. ಕನ್ನಡ ಕಲಾವಿದರಿಗೆ ಈ ಕಹಿ ಸುದ್ದಿಯನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಯಾರೂ ಕೂಡ ಅಪ್ಪು ಅಗಲಿದ್ದಾರೆ ಎನ್ನುವ ವಿಷಯವನ್ನು ಆರಂಭದಲ್ಲಿ ನಂಬಲೇ ಇಲ್ಲ. ಬಳಿಕ ಈ ವಿಷಯ ಕಹಿ ಆದ್ರೂ ನಿಜ ಎಂದು ತಿಳಿದು ತುಂಬಾನೇ ಕಣ್ಣೀರು ಹಾಕಿದರು. ಹೌದು ಅಪ್ಪು ಸಾವಿಗೆ ಕೋಟಿ ಕೋಟಿ ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದು, ಈಗಲೂ ಕೂಡ ಇವರ ಅಗಲಿಕೆ ನಮಗೆ ಹೆಚ್ಚು ನೋವು ನೀಡುತ್ತಿದೆ.

ಯಾಕೆ ಆ ದೇವರು ಇಷ್ಟು ಕ್ರೂ’ರಿ ಆದ ಎಂದೆನಿಸುತ್ತದೆ. ಹೌದು ನಟ ಪುನೀತ್ ಅವರು ಎಲ್ಲರಿಂದ ಅಗಲಿ 13 ದಿನಗಳು ಕಳೆದಿವೆ. ಮೊನ್ನೆಯಷ್ಟೇ ಇಡೀ ರಾಜ್ ಕುಮಾರ್ ಕುಟುಂಬ ಪುನೀತ್ ಅವರ ಪುಣ್ಯತಿ’ಥಿ ಕಾರ್ಯವನ್ನು ಮಾಡಿದ್ದು, ನಿನ್ನೆ ಪುನೀತ್ ಅವರ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಕೂಡ ಹಮ್ಮಿಕೊಂಡಿತ್ತು. ಹೌದು ನಿನ್ನೆಯ ಪುನೀತ್ ಅವರ ಈ ಅನ್ನಸಂತರ್ಪಣೆ ಕಾರ್ಯದಲ್ಲಿ ಸಾಕಷ್ಟು ಜನರು ಬಂದು ಊಟ ಮಾಡಿ ಹೋದರು. ಶಿವಣ್ಣ ಅವ್ರು ನೋವಿನಲ್ಲೇ ಪುನೀತ್ ರ ಅಭಿಮಾನಿಗಳಿಗೆ ಊಟ ಬಡಿಸಿದರು. ಸುಮಾರು 40 ಸಾವಿರಕ್ಕಿಂತ ಹೆಚ್ಚು ಅಧಿಕ ಮಂದಿ ಬಂದು ಪುನೀತ್ ಅನ್ನಸಂತರ್ಪಣೆ ಸ್ವೀಕರಿಸಿದರು. ಹೌದು ಸುಮಾರು ನಿನ್ನೆ ಅನ್ನ ಸಂತರ್ಪಣಕ್ಕೆ ವೆಜ್ ನಾನ್ ವೆಜ್ ಊಟ ಜೊತೆಗೆ ಅಲ್ಲಿಯ ಎಲ್ಲಾ ಅರೇಂಜ್ ಮೆಂಟ್ಸ್ ಗೆ ಸುಮಾರು 3 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಇನ್ನೊಂದು ವಿಷಯ ಕೇಳಿಬಂದಿದೆ.

ಹೌದು ಅನ್ನಸಂತರ್ಪಣೆ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪುನೀತ್ ಅವರ ಅಣ್ಣ ಶಿವಣ್ಣ, ತಮ್ಮನನ್ನ ನೆನೆದು ಭಾ’ವುಕರಾದರು. ಬಳಿಕ ಇಂತಹ ತಮ್ಮನನ್ನು ಪಡೆಯಲು ನಾನು ನಿಜಕ್ಕೂ ಪುಣ್ಯ ಮಾಡಿದ್ದೆ ಎಂದು ನೋವಿನಲ್ಲಿಯೇ ಪುನೀತ್ ಅವರ ಬಗ್ಗೆ ಮಾತನಾಡಿದರು. ಇದರ ಜೊತೆ ಶಿವಣ್ಣ ಅವರು ದೊಡ್ಡ ಮಹತ್ವದ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಪುನೀತ್ ಅವರ ನೆನಪಿಗಾಗಿ ಪ್ರತಿವರ್ಷ ಅವರ ನಿಧನ ದಿನಾಂಕದ ದಿನ, ಎಲ್ಲರಿಗೂ ಊಟ ಹಾಕಿಸುವುದಾಗಿ ಹೇಳಿದ್ದಾರಂತೆ. ಹಾಗೆ ಪುನೀತ್ ಅವರ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಇನ್ನು ಮುಂದೆ ಅಪ್ಪು ಹಿರಿಯ ಮಗಳು ದೃತಿ ನೋಡಿಕೊಳ್ಳುವುದಾಗಿ ಕೂಡ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಅಪ್ಪು ಅವರ ಯಾವ ಕೆಲಸ ನಿಮಗೆ ಹೆಚ್ಚು ಖುಷಿ ನೀಡಿತು, ಯಾವ ಕೆಲಸ ನಿಮಗೆ ಹೆಚ್ಚು ಇಷ್ಟವಾಯಿತು ಎಂದು ಕೂಡ ಕಮೆಂಟ್ ಮಾಡಿ ಧನ್ಯವಾದಗಳು…