ಅಪ್ಪು ಸಮಾಧಿ ಮುಂದೆ ಗಳಗಳನೆ ಅತ್ತ ಸಿಂಗಂ ಖ್ಯಾತಿಯ ಸ್ಟಾರ್ ನಟ..ಪುನೀತ್ ಬಗ್ಗೆ ಹೇಳಿದ್ದೇನು ಗೊತ್ತಾ?

Cinema

ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನೆಲ್ಲಾ ಆಗಲಿ ಒಂದು ವಾರವೇ ಕಳೆದುಹೋಗಿದೆ. ಆದರೂ ಕೂಡ ಎಲ್ಲೋ ಹೋಗಿದ್ದಾರೆ, ಮತ್ತೆ ಬಂದೆ ಬರುತ್ತಾರೆ ಎಂಬ ನಂಬಿಕೆ ಲಕ್ಷಾಂತರ ಅಭಿಮಾನಿಗಳಲ್ಲಿ ಇರುವುದಂತೂ ಸತ್ಯ.ಇಂದಿಗೂ ಕೂಡ ಅಪ್ಪು ಫೋಟೋಗಳು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗಳಲ್ಲಿ ಓಡಾಡುತ್ತಿರುವುದೇ ಪುನೀತ್ ಸರ್ ಅವರನ್ನ ಇನ್ನು ಯಾರು ಮರೆತಿಲ್ಲ ಎಂಬುದಕ್ಕೆ ಸಾಕ್ಷಿ. ನಿಷ್ಕ್ಲ್ಮಷವಾದ ಆ ನಗುವನ್ನ ಯಾರೂ ಮರೆಯೋಕೆ ಸಾಧ್ಯ ಹೇಳಿ..ದೊಡ್ಡವರಿಂದ ಹಿಡಿದು ಚಿಕ್ಕವರವರಿಗೂ ಒಂದೇ ರೀತಿಯ ಗೌರವ ನೀಡುತ್ತಿದ್ದ ಕರುನಾಡಿನ ಅಪರೂಪದ ಕಲಾ ಮಾಣಿಕ್ಯ ಅಪ್ಪು ನಮ್ಮೊಂದಿಗಿಲ್ಲ ಎಂಬುದನ್ನ ಅಷ್ಟು ಸುಲಭವಾಗಿ ಜೇರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಮಳೆ ಬೀಳುತ್ತಿದ್ದರು ಸಹ ಅಪ್ಪು ಸ’ಮಾಧಿಯ ದರ್ಶನಕ್ಕಾಗಿ ಕಂಠೀರವ ಸ್ಟುಡಿಯೋಗೆ ಸಾಗರೋಪಾದಿಯಲ್ಲಿ ಬರುತ್ತಿರುವ ಜನಸಾಗರವರೇ ಇದಕ್ಕೆ ಸಾಕ್ಷಿ..

ಇನ್ನು ಈಗ ತೆಲುಗು ಹಾಗು ತಮಿಳು ಸಿನಿಮಾರಂಗದ ಸ್ಟಾರ್ ನಟರು, ಹಿರಿಯ ನಟರು ಅಪ್ಪು ಅವರ ಸಮಾಧಿಗೆ ಬಂದು ಅವರ ದರ್ಶನ ಪಡೆಯುತ್ತಿದ್ದು ಭಾವುಕರಾಗಿ ಕ’ಣ್ಣೀರಿಟ್ಟು ಹೋಗುತ್ತಿದ್ದಾರೆ. ಅಪ್ಪು ಅವರ ಕುಟುಂಬಕ್ಕೆ ಹಾಗೂ ಶಿವಣ್ಣ ಅವರಿಗೆ ಸಮಾಧಾನದ ಮಾತುಗಳನ್ನ ಹೇಳಿ ಹೋಗುತ್ತಿದ್ದಾರೆ. ತಮಿಳು ಖ್ಯಾತ ನಟ ಪ್ರಭು ಗಣೇಶನ್,ಶಿವ ಕಾರ್ತಿಕೇಯನ್, ತೆಲುಗಿನ ರಾಮ ಚರಣ್ ತೇಜ ಶಿವಣ್ಣ ಅವರನ್ನ ಭೇಟಿ ಮಾಡಿ ಸಮಾಧಾನದ ಮಾತುಗಳನ್ನ ಹೇಳಿ ಹೋಗಿದ್ದಾರೆ. ಇನ್ನು ಮೊನ್ನೆ ತಾನೇ ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಕೂಡ ಅಪ್ಪು ಅವರ ಸ’ಮಾಧಿಗೆ ಭೇಟಿ ಕೊಟ್ಟು ಹೋಗಿದ್ದಾರೆ. ಈಗ ಇಂದು ಮತ್ತೊಬ್ಬ ತಮಿಳು ಸ್ಟಾರ್ ನಟ ಸಿಂಗಂ ಖ್ಯಾತಿಯ ಸೂರ್ಯ ಅವರು ಅಪ್ಪು ಅವರ ಸ’ಮಾಧಿಗೆ ಭೇಟಿ ಕೊಟ್ಟು ತುಂಬಾ ಭಾವುಕರಾಗಿದ್ದಾರೆ. ಬಳಿಕ ಪುನೀತ್ ಅವರಿಗೆ ಹೀಗಾಗಿರುವುದು ಭಾರೀ ಅ’ನ್ಯಾಯ, ಇದನ್ನ ನಂಬಲು ಸಾಧ್ಯವಾಗುತ್ತಿಲ್ಲ.

ಇನ್ನು ಡಾ.ರಾಜ್ ಕುಮಾರ್ ಕುಟುಂಬದವರ ಜೊತೆ ನಮ್ಮ ಕುಟುಂಬ ತುಂಬಾ ಭಾಂದವ್ಯದ ಜೊತೆಗೆ, ಬಹಳ ಆತ್ಮೀಯತೆ ಕೂಡ ಇದೆ. ಪುನೀತ್ ಅವರಿಗೆ ೭ತಿಂಗಳಾಗಿದ್ದಾಗ ನನಗೆ ೪ ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದರು. ಇನ್ನು ಅಪ್ಪು ಯಾವಾಗ್ಲೂ ತಮ್ಮ ಹೃದಯದಿಂದ ನಗುತ್ತಿದ್ದರು. ಪುನೀತ್ ಅವರನ್ನ ನಿಜಗವಾಗಲು ತುಂಬಾ ಇಷ್ಟಪಡುವವರು ಮಾತ್ರ ಅವರ ನೆನಪುಗಳನ್ನ ಸದಾ ತಮ್ಮ ಮನಸ್ಸನಲ್ಲಿಟ್ಟುಕೊಳ್ಳಲು ಸಾಧ್ಯ. ಸಾಮಾಜಿಕವಾಗಿ ತುಂಬಾ ಸೇವೆ ಸಲ್ಲಿಸಿರುವ ಅಪ್ಪು ಅವರಿಗೆ ಈ ರೀತಿ ಆದದ್ದು ಮಾತ್ರ ಭಾರಿ ಅನ್ಯಾಯವೇ ಸರಿ ಎಂದು ಅಪ್ಪು ಫೋಟೋ ನಿಂತು ಗಳಗಳನೆ ಅತ್ತಿದ್ದಾರೆ ತಮಿಳು ನಟ ಸೂರ್ಯ. ಕೊನೆಗೆ ಅಪ್ಪು ಅವರ ಆತ್ಮಕ್ಕೆ ಆ ದೇವರು ಶಾಂತಿ ಕರುಣಿಸಲಿ, ಪತ್ನಿ, ಮಕ್ಕಳು ಹಾಗೂ ಅವರ ಕುಟುಂಬಕ್ಕೆ ಈ ದುಃ’ಖವನ್ನ ಸಹಿಸಿಕೊಳ್ಳುವಂತಹ ಶಕ್ತಿಯನ್ನ ಆ ದೇವರು ನೀಡಲಿ ಎಂದು ಸಿಂಗಂ ಖ್ಯಾತಿಯ ನಟ ಸೂರ್ಯ ಹೇಳಿದ್ದಾರೆ.