ಕೊನೆಗೂ ತಮ್ಮ ಮದ್ವೆ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಬಿಗ್ ಬಾಸ್ ಜೋಡಿ..ಹೇಳಿದ್ದೇನು ಗೊತ್ತಾ?

Entertainment

ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಎಂಟರಲ್ಲಿ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡುಗ ಮತ್ತು ಬೈಕರ್ ಅರವಿಂದ್ ಅವರ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಇವರು ಬಿಗ್ ಮನೆಯಿಂದ ಹೊರಬಂದ ಮೇಲೆ ಪಕ್ಕಾ ಮದ್ವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಇನ್ನು ಬಿಗ್ ಬಾಸ್ ಮುಗಿಸಿ ಹೊರಬಂದ ಅರವಿಂದ್ ಮತ್ತು ದಿವ್ಯಾ ಅವರಿಗೆ ಯಾವಾಗ ನಿಮ್ಮಿಬ್ಬರ ಮದ್ವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶ್ನೆಗಳನ್ನ ಕೇಳಿದ್ದರು. ಆದರೆ ಇದುವರೆಗೂ ಇಬ್ಬರು ಕೂಡ ತಮ್ಮ ಮದ್ವೆ ಬಗ್ಗೆ ಇದುವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಮದ್ವೆ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ಈ ಬಿಗ್ ಬಾಸ್ ಜೋಡಿ..

ಹೌದು, ಇತ್ತೀಚೆಗಷ್ಟೇ ನಡೆದ ಖಾಸಗಿವಾಹಿನಿಯೊಂದರ ಕಿರುತೆರೆ ಕಲಾವಿದರ ಅವಾರ್ಡ್ ಶೋ ಕಾರ್ಯಕ್ರಮದಲ್ಲಿ ಅರವಿಂದ್ ಮತ್ತು ದಿವ್ಯಾ ಉರುಡುಗ ಭಾಗವಹಿಸಿದ್ದುರು. ಜೊತೆಗೆ ಇಬ್ಬರು ಸೇರಿ ನೃತ್ಯ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನ ಮನರಂಜಿಸಿದರು. ಇನ್ನು ಇದೆ ವೇಳೆ ಸೋಷಿಯಲ್ ಮಿಡಿಯಾಗಳಲ್ಲಿ ತಮ್ಮ ಮದ್ವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಉತ್ತರ ನೀಡಿದ್ದಾರೆ. ಇನ್ನು ಅರವಿಂದ್ ಅವರೇ ಹೇಳಿರುವ ಹಾಗೆ, ಅವರು ಬಿಗ್ ಮನೆಯಿಂದ ಹೊರಬಂದ ಬಳಿಕ ಅವರಿಗೆ ಮದ್ವೆಯ ಸಾಕಷ್ಟು ಪ್ರಪೋಸಲ್ ಗಳು ಬಂದಿವೆ. ಇನ್ನು ಮದ್ವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಅರವಿಂದ್ ಮತ್ತು ದಿವ್ಯಾ ಇಬ್ಬರು ನಾಚಿಕೊಂಡಿದ್ದಾರೆ.

ಜೀವನದಲ್ಲಿ ಇನ್ನು ಸಾಧನೆ ಮಾಡೋಕೆ ತುಂಬಾನೇ ಇದೆ. ಎಲ್ಲವು ಒಳ್ಳೆರೀತಿಯಿಂದಲೇ ಇದೆ. ಹೀಗೆ ಮದುವೆಯಾ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರ ನೀಡಿದ ಅರವಿಂದ್ ಮತ್ತು ದಿವ್ಯಾ ಉರುಡುಗ ಅತೀ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ ಎಂದು ನಗುತ್ತಾ ತಮ್ಮ ಮದುವೆ ಬಾಗೆ ಮಾತನಾಡಿದ್ದಾರೆ. ಇದರರ್ಥ ಮತ್ತೊಂದು ಬಿಗ್ ಬಾಸ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆಯೇ ಎಂಬುದನ್ನ ಕಾದು ನೋಡಬೇಕಾಗಿದೆ..ಇನ್ನು ಇವರಿಬ್ರು ಯಾವಾಗ ಮದ್ವೆಯಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕೂಡ ಇದೆ..ಸ್ನೇಹಿತರೇ, ಚಂದನ್ ಶೆಟ್ಟಿ ನಿವೇದಿತಾ ರಂತೆ ಈ ಜೋಡಿ ಕೂಡ ಮದ್ವೆಯಾಗುತ್ತಾರಾ?ಇಲ್ಲವಾ?ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..