ತನ್ನ ಕುಟುಂಬದವರನ್ನ ಕಳೆದುಕೊಂಡು ಕಣ್ಣೀರಿಡುತ್ತಿರುವ ಅರ್ಜುನ್ ಜನ್ಯಾ..ಆಗಿದ್ದೇನು ಗೊತ್ತಾ ?

Cinema

ಸ್ನೇಹಿತರೇ, ಬೆಂಗಳೂರು ಸೇರಿದಂತೆ ಇಡೀ ಭಾರತದಲ್ಲಿ ಕೊ’ರೋನಾ ರ’ಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಸಾ’ವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಮೊದಲ ಸಲ ನಮ್ಮ ದೇಶಕ್ಕೆ ಬಂದ ಈ ಮಹಾಮಾ’ರಿಯಿಂದ ಅಷ್ಟಾಗಿ ತೊಂದರೆ ಆಗದಿದ್ದರೂ ಇದರ ಎರಡನೇ ಅಲೇ ಅಂತೂ ದೇಶದ ಹಲವಾರು ನಗರಗಳನ್ನ ಸ್ಮ’ಶಾನದಂತೆ ಮಾಡಿಬಿಟ್ಟಿದೆ. ಇನ್ನು ಆ’ಘಾತಕಾರಿ ವಿಷಯವೇನೆಂದರೆ ಈ ಎರಡನೇ ಅಲೆಯಿಂದ ಹೆಚ್ಚಾಗಿ ಯುವಕರು ಕೂಡ ಬ’ಲಿಯಾಗುತ್ತಿರುವುದು. ಇನ್ನು ಈಗ ಸಾಮಾನ್ಯ ಜನರ ಜೊತೆಗೆ ಸೆಲೆಬ್ರೆಟಿಗಳೆನಿಸಿಕೊಂಡವರು ಕೂಡ ಈ ಮಹಾಮಾ’ರಿಗೆ ತುತ್ತಾಗುತ್ತಿದ್ದಾರೆ.

ಹೌದು, ನಿಮಗೆಲ್ಲಾ ಗೊತ್ತಿರುವ ಹಾಗೆ ನಟಿ ಮಾಲಾಶ್ರೀ ಅವರ ಗಂಡ ನಿರ್ಮಾಪಕ ಕೋಟಿ ರಾಮು ಅವರು ಕಳೆದ ವಾರವಷ್ಟೇ ಈ ಸೋಂಕಿನಿಂದಾಗಿ ಪ್ರಾ’ಣ ಕಳೆದುಕೊಂಡಿದ್ದಾರೆ. ಬಳಿಕ ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಸಹ ಈ ಸೋಂ’ಕಿಗೆ ಬ’ಲಿಯಾಗಿದ್ದರು. ಈಗ ಮತ್ತೊಬ್ಬ ಸ್ಯಾಂಡಲ್ವುಡ್ ಸೆಲೆಬ್ರೆಟಿ ಆಗಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಅಣ್ಣ ಕೂಡ ಈ ಮಹಾಮಾ’ರಿಗೆ ಬ’ಲಿಯಾಗಿದ್ದಾರೆ.

ಹೌದು, ಇದರ ಬಗ್ಗೆ ಸ್ವತಃ ಅರ್ಜುನ್ ಜನ್ಯಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು. ಕೋವಿಡ್ ನಿಂದಾಗಿ ನಾನು ನಮ್ಮಣ್ಣ ಕಿರಣ್ ಅವರನ್ನ ಕಳೆದುಕೊಂಡಿದ್ದೇನೆ. ಕಿರಣ್, ನೀನಿಲ್ಲದ ಆ ನೋವನ್ನ ನಾನು ಹೇಗೆ ವ್ಯಕ್ತಪಡಿಸೋದು ಅನ್ನೋದು ಗೊತ್ತಾಗುತ್ತಿಲ್ಲ. ನನ್ನ ಕೊನೆಯ ಉಸಿರು ಇರೋವರೆಗೂ ನೀನು ನನ್ನ ಉಸಿರನಲ್ಲಿ ಇರುತ್ತೀಯಾ ಎಂದು ಭಾವುಕರಾಗಿ ಬರೆದುಕೊಂಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ವಯಸ್ಸಿಗೆ ತನ್ನ ತಂದೆಯನ್ನ ಕಳೆದುಕೊಂಡಿದ್ದ ಅರ್ಜುನ್ ಜನ್ಯಾ ಅಣ್ಣನಲ್ಲೆ ತಂದೆಯನ್ನ ಕಾಣುತ್ತಿದ್ದವರು. ಈಗ ಅಣ್ಣ ಕೂಡ ಜನ್ಯಾ ಅವರನ್ನ ಬಿಟ್ಟು ಹೋಗಿದ್ದಾರೆ. ತನ್ನ ಅಣ್ಣ ಅಗಲಿರುವ ನೋವನ್ನ ಭರಿಸುವ ಶಕ್ತಿಯನ್ನ ಆ ದೇವರು ಅರ್ಜುನ್ ಜನ್ಯಾ ಅವರಿಗೆ ನೀಡಲಿ..