ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಡಿಕೆಡಿ ಕಾರ್ಯಕ್ರಮಕ್ಕೆ ಪಡೆಯೋ ಒಟ್ಟು ಸಂಭಾವನೆ ಎಷ್ಟು ಗೊತ್ತಾ ?

Entertainment

ಖಾಸಗಿ ಕನ್ನಡ ವಾಹಿನಿ ಜೀ ಕನ್ನಡ ವಿಭಿನ್ನ ರಿಯಾಲಿಟಿ ಶೋಗಳನ್ನ ಪ್ರಸಾರಮಾಡುವ ಮೂಲಕ ಪ್ರತೀ ವಾರ ತನ್ನ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದೆ. ಅದರಲ್ಲಿ ತುಂಬಾ ಫೇಮಸ್ ಆಗಿರುವ, ಜನಮೆಚ್ಚಿದ ಕಾರ್ಯಕ್ರಮ ಎಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಡೆಲಿವರಿ ಬೇ ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸ್ಪರ್ಧಿಗಳು ಭಾಗವಹಿಸಿದ್ದು ಅತ್ಯದ್ಭುತವಾಗಿ ನೃತ್ಯ ಮಾಡುವ ಮೂಲಕ ವೀಕ್ಷಕರನ್ನ ಸೆಳೆಯುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ,ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ, ಹಿರಿಯ ನ್ರತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಸೇರಿದಂತೆ ನಟ ವಿಜಯ ರಾಘವೇಂದ್ರ ಅವರು ಜಡ್ಜ್ ಗಳಾಗಿದ್ದಾರೆ.

ಇನ್ನು ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿರುವ ಸ್ಪರ್ಧಿಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ಪೈಪೋಟಿಯಾಗಿ ಡ್ಯಾನ್ಸ್ ಮಾಡುತ್ತಿದ್ದು ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಇನ್ನು ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿರುವ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಸಿನಿಮಾಗಳಲ್ಲಿ ತುಂಬಾ ಬ್ಯಸಿ ಇದ್ದರೂ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಇನ್ನು ಡಿಕೆಡಿ ಮಾತ್ರವಲ್ಲದೆ ಸರೆಗಮಪ ಸಿಂಗಿಂಗ್ ನ ಪ್ರತೀ ಸೀಸನ್ ಗಳಲ್ಲೂ ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿದ್ದಾರೆ.

ಇನ್ನು ತಮ್ಮ ಮಾಂತ್ರಿಕ ಸಂಗೀತದ ಮೂಲಕ ಲಕ್ಷಾಂತರ ಅರ್ಜುನ್ ಜನ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲೂ ತೀರ್ಪಿನ ಜೊತೆಗೆ ಮನರಂಜನೆ ಕೂಡ ಕೊಡುತ್ತಾರೆ. ಇನ್ನು ನಿರೂಪಕಿ ಅನುಶ್ರೀ ಅವರಂತೂ ಅರ್ಜುನ್ ಜನ್ಯ ಅವರಿಗೆ ಪ್ರತೀ ಸಂಚಿಕೆಯಲ್ಲೂ ಕೂಡ ಕಾಟ ಕೊಡತ್ತಲೇ ಇರುತ್ತಾರೆ. ಇನ್ನು ಇಷ್ಟೆಲ್ಲಾ ಫೇಮಸ್ ಆಗಿರುವ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಒಂದು ಎಪಿಸೋಡ್ ಗೆ 1ಲಕ್ಷ ಎರಡು ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಂಭಾವನೆಗಿಂತ ಹೆಚ್ಚಾಗಿ ಸಂಗೀತ ನಿರ್ದೇಶಕರಲ್ಲಿ ನಂಬರ್ ಒನ್ ಆಗಿರುವ ಅರ್ಜುನ್ ಜನ್ಯ ಅವರು ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಾರೆ ಅದಕ್ಕಾಗಿ ಅವರು ತುಂಬಾ ಗ್ರೇಟ್ ಅಲ್ಲವೇ..