ಆ 2ಗಂಟೆ ಲೇಟ್ ಆಗಿದ್ರೆ..ಅರ್ಜುನ್ ಜನ್ಯಾ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ.?

Cinema News
Advertisements

ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾರವರಿಗೆ ಲಘು ಹೃದಯಾಘಾತವಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ವೈದ್ಯರು ಸ್ಪಷ್ಟನೆ ಕೊಟ್ಟಿದ್ದಾರೆ.

Advertisements

ಅಪೋಲೋ ಆಸ್ಪತ್ರೆ ವೈದ್ಯರು ಹೇಳುವ ಪ್ರಕಾರ ಅರ್ಜುನ ಜನ್ಯಾರವರು ಗ್ಯಾಸ್ಟ್ರಿಕ್, ಎದೆ ನೋವು, ತಲೆ ನೋವು ಜೊತೆಗೆ ಬೆನ್ನು ನೋವಿನ ಕಾರಣದಿಂದಾಗಿ ಭಾನುವಾರ ಮಧ್ಯಾನ್ಹ ಆಸ್ಪತ್ರೆಗೆ ದಾಖಾಲಾಗಿದ್ದರು. ಆಗ ನಾವು ಚಿಕಿತ್ಸೆ ನೀಡಿದ್ದು ಗ್ಯಾಸ್ಟ್ರಿಕ್ ನಿಂದ ಗುಣಮುಖವಾಗಿದ್ದರು.

ಆದರೆ ಮತ್ತೆ ಮಂಗಳವಾರದಂದು ಇಸಿಜಿ ಮಾಡಿದ್ದು, ಅವರ ಆರೋಗ್ಯದಲ್ಲಿ ವ್ಯತಾಸಗಳು ಕಂಡು ಬಂದಿದ್ದವು. ಎದೆ ನೋವು, ಬೆನ್ನು ನೋವು ಜಾಸ್ತಿಯಾಗಿದ್ದು ಮತ್ತೆ ಇಸಿಜಿ ಮಾಡಲಾಗಿತ್ತು. ಬಳಿಕ ಎದೆ, ತಲೆ, ಬೆನ್ನು ನೋವು ಸ್ವಲ್ಪ ಹಾಗೆ ಇದೆ ಎಂದು ಅರ್ಜುನ ಜನ್ಯಾ ಹೇಳಿದ್ದರಂತೆ.ಆದರೆ ಹೊಟ್ಟೆನೋವು ಕಡಿಮೆಯಾಗಿದೆ ಅಂತ ಹೇಳಿದ್ದರು ಎನ್ನಲಾಗಿದೆ.

ಬಳಿಕ ಆಸ್ಪತ್ರೆ ವ್ಯದ್ಯರು ಕೆಲವೊಂದು ಪರೀಕ್ಷೆಗಳನ್ನ ಮಾಡಿದ್ದು, ೯೯ಭಾಗದಾಷ್ಟು ಹಾರ್ಟ್ ಬ್ಲಾಕ್ ಆಗಿದೆ ಎಂದು ಆಂಜಿಯೋಗ್ರಾಂ ಪರೀಕ್ಷೆ ಮಾಡಿದ ಬಳಿಕ ವೈದ್ಯರಿಗೆ ತಿಳಿದಿದೆ. ಬಳಿಕ ಕುಟುಂಬದವರಿಗೆ ತಿಳಿಸಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದ್ದು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಆಸ್ಪತ್ರೆಯ ವೈದ್ಯರು ಅರ್ಜುನ್ ಜನ್ಯಾರವರ ಆರೋಗ್ಯದ ಬಗ್ಗೆ ಹೇಳುವ ಪ್ರಕಾರ, ಒಂದು ವೇಳೆ ಎರಡು ಗಂಟೆ ತಡವಾಗಿದ್ರೆ ಬಹಳ ಕೆಟ್ಟ ಪರಿಣಾಮ ಎದುರಾಗುತ್ತಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ಈಗ ಅರ್ಜುನ್ ಜನ್ಯಾ ಗುಣಮುಖರಾಗಿದ್ದು ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.