ಶಾಕಿಂಗ್ ಸುದ್ದಿ..ಮ್ಯೂಸಿಕ್ ಮಾಂತ್ರಿಕ ಅರ್ಜುನ ಜನ್ಯಾಗೆ ಹಾರ್ಟ್ ಅಟ್ಯಾಕ್.?

Advertisements

ಸ್ಟಾರ್ ನಟರಿಗೂ ಕಡಿಮೆ ಏನೂ ಅಲ್ಲವಂತೆ ಅಭಿಮಾನಿ ಬಳಗ ಪಡೆದಿರುವ, ಕರ್ನಾಟಕದ ಜೂನಿಯರ್ ಎ.ಆರ್.ರೆಹಮಾನ್, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisements

ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾರವರು ಮನೆಯಲ್ಲಿದ್ದಾಗ ಮಧ್ಯರಾತ್ರಿ ಸಮಯದಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಜನ್ಯಾರವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ಹೊರಹೊಲಯದಲ್ಲಿ ಐಷಾರಾಮಿ ವಿಲ್ಲಾದಲ್ಲಿ ಅರ್ಜುನ್ ಜನ್ಯಾ ತಮ್ಮ ಕುಟುಂಬದವರೊಂದಿಗೆ ಇದ್ದ ವೇಳೆ ಹಾರ್ಟ್ ಅಟ್ಯಾಕ್ ಆಗಿದೆ. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಯಾಂಡಲ್ವುಡ್ ನಲ್ಲಿ ತುಂಬಾ ಬ್ಯುಸಿಯಾಗಿರುವ ಅರ್ಜುನ ಜನ್ಯಾರವರಿಗೆ, ಸರಿಯಾದ ವಿಶ್ರಾಂತಿ ಇಲ್ಲದೆ, ಬಿಡುವಿಲ್ಲದ ಕೆಲಸಗಳಿಂದಲೇ ಲಘು ಹೃದಯಾಘಾತ ಆಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಎಷ್ಟೋ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ, ಹೊಸದಾಗಿ ಬರುವ ಹಾಡುಗಾರರಿಗೆ ವೇದಿಕೆ ಅವಕಾಶ ಕೊಟ್ಟು ಅವರ ಜೀವನಕ್ಕೆ ದಾರಿಯಾಗುತ್ತಿರುವ ಅರ್ಜುನ್ ಜನ್ಯಾರವರು ಬೇಗ ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ನಾವು ಪ್ರಾರ್ಥನೆ ಮಾಡಿಕೊಳ್ಳೋಣ.