ಯಶ್ ಗೆ ಖುದ್ದು ಧನ್ಯವಾದ ತಿಳಿಸಿದ ಪುನೀತ್ ಪತ್ನಿ ಅಶ್ವಿನಿ.!ಅಸಲಿ ಕಾರಣ ಇಲ್ಲಿದೆ ನೋಡಿ..

Cinema

ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದ ಇನ್ನೂ ಕೂಡ ಯಾರು ಹೊರಗಡೆ ಬಂದಿಲ್ಲ. ಪವರ್ ಎಂಬುದು ಈಗ ಜೊತೆಗೆ ಇಲ್ಲ ಎಂಬುದನ್ನ ಒಂದು ಬಾರಿ ನೆನೆಸಿಕೊಂಡರೆ ಕಣ್ಣೀರು ತನ್ನಂತಾನೆ ಜಾರುತಿದೆ. ಹೌದು ನಟ ಪುನೀತ್ ಅವರು ಇಲ್ಲವಾಗಿ ಇಪ್ಪತ್ತು ದಿನಗಳು ಕಳೆದಿವೆ. ಇದೀಗ ಪುನೀತ್ ಅವರ ಬಗ್ಗೆ ಒಂದೊಂದೇ ವಿಷಯಗಳು ಹೆಚ್ಚು ತಿಳಿಯುತ್ತಿದ್ದು ಕಣ್ಣೀರು ತರಿಸುತ್ತೇವೆ. ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ಮಾಡಿದಂತಹ ಸಮಾಜ ಸೇವೆಗಳು, ಸಹಾಯಗಳು, ಅವರ ಸರಳತನ ಎಲ್ಲರಿಗೂ ತುಂಬಾನೇ ಮಾದರಿಯಾಗಿತ್ತು. ಸದಾ ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದ ಅವರ ವ್ಯಕ್ತಿತ್ವ ಏನೆಂಬುದ ತೋರಿಸುತ್ತಿದೆ.

ಆದರೆ ಎಲ್ಲಿಯೂ ಕೂಡ ಪಬ್ಲಿಸಿಟಿ ಮಾಡದೇ ಸಹಾಯ ಮಾಡುತ್ತಿದ್ದ ಅವರ ಮನಸ್ಥಿತಿ ನಾವು ಮೆಚ್ಚಲೇಬೇಕು. ಅಷ್ಟು ಒಳ್ಳೆ ಒಂದು ಮುತ್ತು ಇದೀಗ ನಮ್ಮ ಜೊತೆಗಿಲ್ಲ ಎಂಬುದು ವಾಸ್ತವ ಅರಿತರೆ ಈ ಅಗಲಿಕೆಯ ನೋವನ್ನು ಮರೆಯುವುದಕ್ಕೆ ಎಷ್ಟು ವರ್ಷಗಳು ಬೇಕಾಗುತ್ತದೆಯೋ ಗೊತ್ತಿಲ್ಲ, ಬದಲಿಗೆ ನೋವಿನ ಜೊತೆಯೇ ಅಪ್ಪು ನೆನಪು ಸದಾ ಇರುತ್ತದೆ ಎಂದು ಹೇಳಬಹುದು. ಹೌದು ಪುನೀತ್ ಅವರಿಗೆ ಮೊನ್ನೆಯಷ್ಟೇ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಪ್ಪು ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ನಟ ನಟಿಯರು, ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಮಿಳು, ತೆಲುಗು ಸಿನಿಮಾರಂಗದವರು ಹಾಗೇನೇ ರಾಜಕೀಯದವರು ಎಲ್ಲರೂ ಕೂಡ ಉಪಸ್ಥಿತರಿದ್ದರು.

ಹೌದು ಶಿವಣ್ಣ ಹಾಗೂ ರಾಘಣ್ಣ ವೇದಿಕೆ ಮೇಲೆ ಅಪ್ಪು ನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದು ನೋಡಿದರೆ ನಿಜಕ್ಕೂ ಅವರಿಗೆ ಎಷ್ಟು ನೋ’ವಿರಬಹುದು ಎಂಬುದು ಕಾಣುತ್ತದೆ. ಅಕ್ಟೋಬರ್ 29 ನೇ ತಾರೀಕು ಖುಷಿಯಿಂದ ಅಶ್ವಿನಿ ಅವರ ಜೊತೆ ಹೊರಬಂದ ಪುನೀತ್, ಮುಂದಿನ ಅರ್ಧಗಂಟೆಯಲ್ಲಿ ಅವರೇ ಇಲ್ಲ ಎಂಬ ವಿಷಯ ತಿಳಿದು ಅಶ್ವಿನಿ ಯವರಿಗೆ ಹೇಗ್ ಆಗಿರಬಾರದು. ಅನಂತರ ಈ ವಿಷಯ ಶಿವಣ್ಣ ಅವರಿಗೆ ತಿಳಿದು ಫೋನ್ ಬಿಸಾಕಿ ನನಗೆ ತಮ್ಮ ಬೇಕೆಂದು ಬಿಕ್ಕಿ ಬಿಕ್ಕಿ ಅತ್ತಿದ್ದು, ಬಳಿಕ ಆಸ್ಪತ್ರೆಗೆ ಎಲ್ಲಾ ನೋವು ತಡೆದುಕೊಂದು, ನಾನು ಅತ್ತರೆ ರಾಘಣ್ಣ ಹಾಗೂ ಅಶ್ವಿನಿ ಮತ್ತು ಮಕ್ಕಳು ಎಲ್ಲರೂ ಅಳುತ್ತಾರೆ ಎಂದು ಸುಮ್ಮನೆ ಬಂದರು. ಆ ದೇವರು ತುಂಬಾನೇ ಕ್ರೂ’ರಿ ಎನ್ನಬಹುದು.

ಹೌದು ಇದೀಗ ಅಪ್ಪು ಪತ್ನಿ ಅಶ್ವಿನಿ ಅವರು ಖುದ್ದಾಗಿ ಯಶ್ ಗೆ ಧನ್ಯವಾದ ತಿಳಿಸಿದ್ದಾರೆಂದು ತಿಳಿದುಬಂದಿದೆ. ಹೌದು ಮೊನ್ನೆಯಷ್ಟೇ ಶಿವಣ್ಣ ಅವರು ಹೇಳಿದ ಹಾಗೆ, ಆ ಸಮಯದಲ್ಲಿ ತುಂಬಾನೇ ಧೈರ್ಯವಾಗಿ ನಿಂತಿದ್ದರು ಯಶ್, ಆ ರಾತ್ರಿ ನನ್ನ ಬಳಿ ಬಂದು ನೀವು ಸ್ವಲ್ಪ ಹೋಗಿ ಮಲಗಿ ರೆಸ್ಟ್ ಮಾಡಿ, ನಾಳೆ ಬೆಳಿಗ್ಗೆ ಮತ್ತೆ ನಿಲ್ಲಲೇಬೇಕು ಎಂದು ನನ್ನ ಅಲ್ಲಿಂದ ಕಳುಹಿಸಿಕೊಟ್ಟು, ನಾನು ಇಲ್ಲಿ ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದು ಧೈರ್ಯದ ಮಾತುಗಳನ್ನು ಹೇಳಿ ನನ್ನ ಕಳುಹಿಸಿದರು ಎಂದು ಶಿವಣ್ಣ ಅವರು ಹೇಳಿಕೊಂಡಿದ್ದರು. ಜೊತೆಗೆ ಪುನೀತ್ ಅವರ ಮಗಳು ದೃತಿಯವರನ್ನು ಅಮೆರಿಕದಿಂದ ಕರೆತರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಿನಿಮಾದಲ್ಲಿ ಕರೆತರುವಂತೆ ನಿಜಜೀವನದಲ್ಲಿ ಕರೆ ತರುವುದು ಅಷ್ಟು ಸುಲಭದ ಕೆಲಸ ಆಗಿರುವುದಿಲ್ಲ.

ಹೌದು ಯಶ್ ಅವರು ಅಂದು ರಾತ್ರಿ ಅದೇ ಕಂಠೀರವ ಸ್ಟುಡಿಯೋದ ಒಂದು ರೂಮಿನಲ್ಲಿ ಕುಳಿತುಕೊಂಡು, ದೃತಿ ಅವ್ರನ್ನ ದೆಹಲಿ ಏರ್ಪೋರ್ಟಿಗೆ ಕರೆತರುವ ಕೆಲಸ ಮಾಡಿದ್ದು ನಿಜ ಶ್ಲಾಘನೀಯ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಫೋನ್ ಕಾಲ್ ಲ್ಲಿ ಮಾತನಾಡಿದ್ದು, ಇಡೀ ರಾತ್ರಿ ದ್ರುತಿ ಅವರ ಜೊತೆ ಮಾತನಾಡುತ್ತಾ ಯಶ್ ಅವರು ಅವರಿಗೆ ಧೈರ್ಯ ತುಂಬುತ್ತಾ ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಕರೆತಂದಿದ್ದು ಇದೆ ಯಶ್ ಎಂದು ಹೇಳಲಾಗುತ್ತಿದೆ. ಈ ರೀತಿ ಕಷ್ಟದ ಪರಿಸ್ಥಿತಿಗಳಲ್ಲಿ ಆ ಕುಟುಂಬ ಏನು ಮಾಡಬೇಕು ಎಂದು ತೋಚದೆ ಇದ್ದ ಸಂದರ್ಭದಲ್ಲಿ ಯಶ್ ಅವರು ಜೊತೆಗೆ ಇದ್ದುಕೊಂಡು ಒಂದೊಳ್ಳೆ ಮನುಷ್ಯತ್ವದ ರೀತಿ ಕಷ್ಟದ ಸಮಯದಲ್ಲಿ ನಿಂತು ಕೊಂಡರು. ಹಾಗಾಗಿ ಅಶ್ವಿನಿ ಪುನೀತ್ ಅವರು ಖುದ್ದಾಗಿ ಯಶ್ ಗೆ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.