ಈ ಯೋಜನೆಯ ಅಡಿಯಲ್ಲಿ ದಿನಕ್ಕೆ 7ರೂ ಉಳಿಸಿದ್ರೆ ಪ್ರತಿ ತಿಂಗಳಿಗೆ ಸಿಗಲಿದೆ 5 ಸಾವಿರ ಪಿಂಚಣಿ

Kannada News
Advertisements

ಸರ್ಕಾರಗಳು ಆಗಾಗ ಜನರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿರುತ್ತದೆ. ಆದರೆ ಸರಿಯಾದ ಮಾಹಿತಿಯಿಲ್ಲದೆ ಬಹುತೇಕ ಜನರಿಗೆ ಮಹತ್ವದ ಈ ಯೋಜನೆಗಳ ಬಗ್ಗೆ ತಿಳಿಯುವುದೇ ಇಲ್ಲ. ಹಾಗೆಯೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆ.

Advertisements

ಪ್ರಧಾನಿ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯಿಂದ ನಿಮಗೆ ಹಲವಾರು ಪ್ರಯೋಜನೆಗಳಿದ್ದು ವಯಸ್ಸಾದ ಕಾಲದಲ್ಲಿ ನೀವು ಯಾರ ಮೇಲೆಯೂ ಅವಲಂಬಿತರಾಗದಂತೆ ಸುಖವಾಗಿ ಜೀವನ ನಡೆಸಬಹುದಾಗಿದೆ. ಏನಿದು ಅಟಲ್ ಪಿಂಚಿಣಿ ಯೋಜನೆ ತಿಳಿಯೋಣ ಬನ್ನಿ..

ಈ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ದಿನಕ್ಕೆ ನೀವು 7 ರೂಪಾಯಿಗಳನ್ನ ಉಳಿಸುವ ಮುಖಾಂತರ 60 ವರ್ಷ ವಯಸ್ಸಾದ ಬಳಿಕ ನೀವು ಪ್ರತೀ ತಿಂಗಳಿಗೆ 5 ಸಾವಿರ ರೂಪಾಯಿಗಳನ್ನ ಪಿಂಚಣಿ ರೂಪದಲ್ಲಿ ಪಡೆಯಬಹುದು. ಅಂದರೆ ಒಂದು ವರ್ಷಕ್ಕೆ 60 ಸಾವಿರ ರೂಪಾಯಿಗಳನ್ನ ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ. ಇನ್ನು ಅಟಲ್ ಪಿಂಚಣಿ ಯೋಜನೆಗೆ ಸಂಬಂಧಪಟ್ಟ ಹಾಗೆ ಜುಲೈ ಒಂದರಿಂದ ಹೊಸ ನಿಯಮವೊಂದು ಜಾರಿಗೆಯಾಗಿದ್ದು ಅದರಂತೆ ಪಿಂಚಣಿ ಯೋಜನೆಯ ಪ್ರಮಾಣವನ್ನ ಒಂದು ವರ್ಷದಲ್ಲಿ ಯಾವಾಗ ಬೇಕಾದ್ರು ಬದಲಾಯಿಸಬಹುದಾಗಿದೆ. ಇದಕ್ಕೂ ಮೊದಲು ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಇದನ್ನ ಬದಲಾಯಿಸುವ ಅವಕಾಶ ಇತ್ತು.

ಆದರೆ ಅಟಲ್ ಪಿಂಚಣಿ ಖಾತೆದಾರರು ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಯೋಜನೆಯನ್ನ ಬದಲಯಿಸುವ ಅವಕಾಶ ಇದೆ. ಇನ್ನು ಈ ಯೋಜನೆ ೨೦೧೫ರಲ್ಲೇ ಪ್ರಾರಂಭ ಮಾಡಲಾಗಿದ್ದು ಇಲ್ಲಿಯವರೆಗೆ ೨ ಕೋಟಿಗಿಂತ ಹೆಚ್ಚು ಷೇರು ದಾರರು ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಇನ್ನು ಅಟಲ್ ಪಿಂಚಣಿ ಕಾಹ್ತೆದಾರರು ೬೦ ವರ್ಷದ ಬಳಿಕ ಪ್ರತೀ ತಿಂಗಳು 1 ಸಾವಿರದಿಂದ 5 ಸಾವಿರದವರೆಗೆ ಪಿಂಚಣಿ ಪಡೆಯಬಹುದಾಗಿದೆ. ಇನ್ನು ೧೮ ರಿಂದ ೪೦ ವರ್ಷದ ವಯಸ್ಸಿನವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.