ಗ್ರೇಟ್ ನ್ಯೂಸ್-ಸೋಂಕಿತರಿಗೆ ಡಾ ಕಜೆ ಕೊಟ್ಟ ಆಯುರ್ವೇದ ಔಷಧದಿಂದ ಕೊರೋನಾ ಸಂಪೂರ್ಣ ಗುಣಮುಖ !

News

ಎರಡು ತಿಂಗಳ ಹಿಂದಷ್ಟೇ ಖ್ಯಾತ ಆಯುರ್ವೇದ ತಜ್ಞರಾದ ಡಾ ಗಿರಿಧರ ಕಜೆ ಅವರು ನಾನು ಸಂಶೋಧನೆ ಮಾಡಿರುವ ಆರ್ಯುವೇದಿಕ್ ಔಷಧದಿಂದ ಕೊರೋನಾ ಸೋಂಕನ್ನ ಗುಣಪಡಿಸಬಲ್ಲೆ ಎಂದು ದಾಖಲೆಗಳ ಸಮೇತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇನ್ನು ಆಗ ಪ್ರಾಯೋಗಿಕವಾಗಿ 10 ಜನ ಕೊರೋನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ಸರ್ಕಾರ ಅನುಮತಿ ನೀಡಿತ್ತು.

ಈಗ ಆ ಹತ್ತು ಮಂದಿ ಕೊರೋನಾ ಸೋಂಕಿತರು ಡಾ ಗಿರಿಧರ ಕಜೆ ಕೊಟ್ಟ ಔಷಧದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬ ಸಿಹಿ ಸುದ್ದಿಯನ್ನ ಆರೋಗ್ಯ ಸಚಿವರಾಗಿರುವ ಬಿ ಶ್ರೀರಾಮುಲು ಅವರು ಹೇಳಿದ್ದು ಮೊದಲ ಹಂತದ ಚಿಕಿತ್ಸೆಯ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.ವಿಕ್ಟೊರಿಯಾ ಆಸ್ಪತ್ರೆಯಲ್ಲಿನ ೧೦ ಮಂದಿ ಸೋಂಕಿತರಿಗೆ ಡಾ ಕಜೆ ಕೊಟ್ಟ ಮಾತ್ರೆಗಳಿಂದ ಅವರಿಗೆ ಸಂಪೂರ್ಣವಾಗಿ ಕೊರೋನಾ ವಾಸಿಯಾಗಿದ್ದು ಆ ಔಷಧವನ್ನ ಮತ್ತಷ್ಟು ಪ್ರಯೋಗಕ್ಕೆ ಒಳಪಡಿಸುವ ಸಲುವಾಗಿ ಇನ್ನು ೧೦೦ ಮಂದಿ ಸೋಂಕಿತರಿಗೆ ಕೊಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಆಯುರ್ವೇದ ತಜ್ಞ ಡಾ ಕಜೆ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು..

ಆಯುರ್ವೇದದಲ್ಲಿ ಖ್ಯಾತ ವೈದ್ಯರಾಗಿರುವ ಡಾ ಕಜೆರವರು ೨೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಲಕ್ಷಕ್ಕಿಂತ ಹೆಚ್ಚು ರೋಗಿಗಳನ್ನ ಗುಣಪಡಿಸಿದ ಅನುಭವ ಇದೆ ಎಂದು ವೈದ್ಯರೇ ಹೇಳಿದ್ದಾರೆ. ಇನ್ನು H1N1, ಡೆಂಗ್ಯೂ ಜ್ವರ, ಚಿಕನ್ ಗುನ್ಯಾ ಸೇರಿದಂತೆ ಹಲವಾರು ಕಾಯಿಲೆಗಳನ್ನ ಆಯುರ್ವೇದದಿಂದ ಗುಣಪಡಿಸಿರುವ ಬಗ್ಗೆ ಹೇಳಿದ್ದಾರೆ. ಇನ್ನು ೧೪ ಔಷಧ ಸದ್ಯಗಳಿಂದ ಭೌಮ್ಯ ಹಾಗೂ ಸಾತ್ವ್ಯ ಮಾತ್ರೆಗಳನ್ನ ಸಂಶೋಧನೆ ಮಾಡಿರುವ ಕಜೆರವರು ಸೋಂಕಿತರ ಮೇಲೆ ಪ್ರಯೋಗ ಮಾಡಲು ಸರ್ಕಾರದಿಂದ ಅನುಮತಿಯನ್ನು ತೆಗೆದುಕೊಂಡಿದ್ದಾರೆ. ಇನ್ನು 23 ರಿಂದ 65 ವಯಸ್ಸಿನ ವರೆಗಿನ ೧೦ ಮಂದಿಗೆ ಈ ಮಾತ್ರೆಗಳನ್ನ ನೀಡಲಾಗಿದ್ದು ಸೋಂಕಿನ ಲಕ್ಷಣಗಳಾದ ಉಸಿರಾಟದ ತೊಂದರೆ ಜ್ವರ ಶೀತ ಕೆಮ್ಮು ತಲೆನೋವು ಸುಸ್ತು ಮೊದಲಾದ ಲಕ್ಷಣಗಳು ಸಂಪೂರ್ಣವಾಗಿ ಗುಣವಾಗಿದೆ ಎಂದು ಹೇಳಲಾಗಿದ್ದು, ಬಳಿಕದ ರಿಪೋರ್ಟ್ ನಲ್ಲಿ ನೆಗಟೀವ್ ಬಂದಿದೆ ಎಂದು ಹೇಳಲಾಗಿದೆ.

ಕೇವಲ ೧೦ ಮಂದಿಗೆಲ್ಲಾ ರಾಜ್ಯದಲ್ಲಿರುವ ೫೦ ಸಾವಿರ ಜನರಿಗೂ ಈ ಔಷಧವನ್ನ ನೀಡಲಿ ಯಾವುದೇ ಸೈಡ್ ಎಫೆಕ್ಟ್ಸ್ ಗಳಿಲ್ಲದೆ ಕೊರೋನಾ ಕಡಿಮೆಯಾಗುತ್ತೆ ಎಂದು ವೈದ್ಯ ಕಜೆರವರು ಹೇಳಿದ್ದಾರೆ.ಇನ್ನು ಈ ಚಿಕಿತ್ಸೆ ಯಶಸ್ವಿಯಾದಲ್ಲಿ ೫ ಸಾವಿರ ಮಂದಿಗೆ ಈ ಔಷಧವನ್ನ ಉಚಿತವಾಗಿ ನೀಡುತ್ತೇನೆ ಹಾಗೂ ಈ ಔಷಧ ಫಾರ್ಮುಲದ ಎಲ್ಲಾ ರೈಟ್ಸ್ ಗಳನ್ನ ಸರ್ಕಾರಕ್ಕೆ ಉಚಿತವಾಗಿ ನೀಡುತ್ತೇನೆ ಎಂದು ಡಾ ಕಜೆರವರು ಹೇಳಿದ್ದಾರೆ.