ಲಾಕ್ ಡೌನ್ ವೇಳೆ ಡ್ಯಾನ್ಸ್ ಮಾಡಿ 1 ಕೋಟಿ ಗೆದ್ದ ಕೂಲಿ ಕಾರ್ಮಿಕನ ಮಗ !

Entertainment
Advertisements

ಎಲೆ ಮರೆಕಾಯಿಯಂತಿದ್ದ ಬಹುತೇಕ ಪ್ರತಿಭೆಗಳಿಗೆ ವೇದಿಕೆಯಾಗಿರುವ ಸೋಷಿಯಲ್ ಮೀಡಿಗಳಿಂದ ಬಹುತೇಕರು ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ. ಇನ್ನು ಇದೇ ಸಾಮಾಜಿಕ ಜಾಲತಾಣಗಳಿಂದ ತನ್ನ ಪ್ರತಿಭೆಯಿಂದ ಬಾಬಾ ಜಾಕ್ಸನ್ ಎಂಬ ಹೆಸರಿನಿಂದ ಫೇಮಸ್ ಆಗಿರುವ ಸಾಮಾನ್ಯ ಕಾರ್ಮಿಕನೊಬ್ಬನ ಮಗನಾಗಿರುವ 18 ವರ್ಷದ ಯುವಕ ಲಾಕ್ ಡೌನ್ ವೇಳೆ ಕೋಟ್ಯಾಧಿಪತಿಯಾಗಿದ್ದಾನೆ.

ಇನ್ನು ಈ ಹಿಂದೆ ಇದ್ದ ಟಿಕ್ ಟಾಕ್ ಸೇರಿದಂತೆ ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಡಾನ್ಸ್ ವಿಡಿಯೊಗಳನ್ನ ಪೋಸ್ಟ್ ಮಾಡಿ ಬಾಬಾ ಜಾಕ್ಸನ್ ಎಂದೇ ಫೇಮಸ್ ಆಗಿದ್ದ ರಾಜಸ್ಥಾನದ ಯುವರಾಜ್ ಖ್ಯಾತ ಇ-ಕಾಮರ್ಸ್ ಕಂಪನಿ ಲಾಕ್ ಡೌನ್ ವೇಳೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬರೋಬ್ಬರಿ ಒಂದು ಕೋಟಿ ಬಹುಮಾನ ಗೆದ್ದು ದೊಡ್ಡ ಸಂಚಲವನ್ನೇ ಹುಟ್ಟುಹಾಕಿದ್ದಾನೆ. ಜೊತೆಗೆ ‘ಇಂಡಿಯಾಸ್ ಎಂಟರ್ಟೈನ್ಮೆಂಟ್ ನಂಬರ್ 1’ ಎಂಬ ಟೈಟಲ್ ಕೂಡ ಪಡೆದುಕೊಂಡಿದ್ದಾನೆ.

ಇನ್ನು ಖ್ಯಾತ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಸ್ಟೇಯ್ ಹೋಂ ಅನ್ನೋ ಸ್ಪರ್ಧೆಯನ್ನ ಲಾಕ್ ಡೌನ್ ವೇಳೆ ಆಯೋಜಿಸಿದ್ದು ಪ್ರತೀವಾರ 10 ಲಕ್ಷದ ಬಹುಮಾನದ ಜೊತೆಗೆ ಈ ಸ್ಪರ್ಧೆಯ ಮೆಗಾ ವಿನ್ನರ್ ಗೆ ಒಂದು ಕೋಟಿಯ ಬಹುಮಾನದ ಘೋಷಣೆ ಮಾಡಿತ್ತು. ಇನ್ನು ಈ ಸ್ಪರ್ಧೆಯ ಪ್ರಕಾರ ಮನೆಯಲ್ಲೇ ಇದ್ದು ಯಾರು ತುಂಬಾ ಚೆನ್ನಾಗಿ ಎಂಟರ್ಟೈನ್ಮೆಂಟ್ ಕೊಡುತ್ತಾರೋ ಅವರಿಗೆ ಒಂದು ಕೋಟಿ ಬಹುಮಾನ ಗೆಲ್ಲುವ ಅವಕಾಶ ಇತ್ತು. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ, ಮೈಕಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡಿ ಬಾಬಾ ಜಾಕ್ಸನ್ ಎಂದೇ ಫೇಮಸ್ ಆಗಿದ್ದ ರಾಜಸ್ಥಾನದ ಯುವರಾಜ್ ಒಂದು ಕೋಟಿ ಬಹುಮಾನದ ಹಣವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ವಿಜೇತರನ್ನ ಬಾಲಿವುಡ್ ನಟ ವರುಣ್ ಧವನ್ ಘೋಷಣೆ ಮಾಡಿದ್ದು ಆ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಇದರ ಬಗೆ ಮಾತಂದಿರುವ ಬಾಬಾ ಜಾಕ್ಸನ್ ಯುವರಾಜ್ ಇದು ನಿಜಾನಾ ಅಂತ ನನಗೆ ನಂಬೋದಕ್ಕೆ ಆಗ್ತಿಲ್ಲಾ..ಲಾಕ್ ಡೌನ್ ವೇಳೆ ಸಿಕ್ಕ ನನ್ನ ಜೀವನದ ಬಹುದೊಡ್ಡ ಅವಕಾಶ ಇದು. ನನಗೆ ಸಪೋರ್ಟ್ ಮಾಡಿ ವೋಟ್ ಮಾಡಿ ನಾನು ಗೆಲ್ಲಲು ಕಾರಣರಾದ ಎಲ್ಲೆರಿಗೂ ನನ್ನ ಧನ್ಯವಾದಗಳು ಎಂದು ಯುವರಾಜ್ ಹೇಳಿದ್ದಾರೆ.