6ವಾರದಲ್ಲಿ ಬೆಳ್ಳಗೆ ಮಾಡ್ತೇವೆ ಅಂದ ಫೇರ್&ಲೌಲಿ ಬಗ್ಗೆ,7ವಾರದಲ್ಲಿ ನಿಮ್ಮನ್ನು ಎತ್ತರ ಮಾಡ್ತೇವೆ ಅಂದ ಕಾಂಪ್ಲೈನ್ ಬಗ್ಗೆ ಸುಮ್ಮನಿದ್ದವ್ರು ರಾಮ್ ದೇವ್ ಅವರ ಕೊರೊನಿಲ್ ಔಷಧಿಯನ್ನು ಅಪಹಾಸ್ಯ ಮಾಡಿದ್ದೇಕೆ ?

News
Advertisements

ನಾನೇನು ಬಾಬಾ ರಾಮ್ ದೇವ್ ಅವರ ತುಂಬಾ ಹತ್ತಿರದ ಸಂಬಂಧಿಕನೋ ಅಥ್ವಾ ಅವರ ದೊಡ್ಡ ಸಮರ್ಥಕನೂ ಅಲ್ಲ. ಹಾಗಂತ ಅವರನ್ನು ವಿರೋಧಿಸಲು ಯಾವ ಕಾರಣವೂ ಇಲ್ಲ..ಕಾಡಿನಲ್ಲಿ ಅಲೆದಾಡಿ ಸೈಕಲಲ್ಲಿ ಔಷಧಿಯ ಬೇರುಗಳನ್ನು ಸಾಗಿಸಿ ಪತಂಜಲಿಯಂತಹ ಆಯುರ್ವೇದದ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಇದು ಅವರ ಕಠಿಣ ಪರಿಶ್ರಮದ ಪ್ರತಿಫಲ. ಅದಲ್ಲದೆ ತನ್ನ ಯವ್ವನದಲ್ಲಿ ಮದುವೆ, ಮಕ್ಕಳು, ಕುಟುಂಬ ಅಂತ ಎಲ್ಲಾ ಬಿಟ್ಟು ಕೇಸರಿತೊಟ್ಟು ಆಯುರ್ವೇದದ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದು ಇವತ್ತಿನ ಸಂಘರ್ಷಭರಿತ ಉದ್ಯಮ ಜಗತ್ತಿನಲ್ಲಿ ಯುವಕರಿಗೆ ಒಂದು ಸ್ಫೂರ್ತಿ.

Advertisements

ತನ್ನ ಯೋಗದಿಂದ ದೇಶ ವಿದೇಶಗಳಲ್ಲಿ ಯೋಗಕ್ಕೆ ಅದರದ್ದೇ ಆದ ಉನ್ನತವಾದ ಸ್ಥಾನಮಾನ, ಗೌರವ ಸಿಗುವಂತೆ ಮಾಡಿದರು. ಒಬ್ಬನೇ ವ್ಯಕ್ತಿ ಶೂನ್ಯದಿಂದ ಆರಂಭಿಸಿ ಇಂದು ಕೋಟಿಗಟ್ಟಲೆ ವ್ಯಾಪಾರ ಮಾಡ್ತಾ ಇದ್ದಾರೆ. ಅಲ್ಲದೆ ಎಷ್ಟೋ ಭಾರತೀಯರಿಗೆ ಕೆಲಸವನ್ನೂ ನೀಡುತ್ತಿದ್ದಾರೆ. ಎಷ್ಟೋ ಮನೆಯ ಬೆಳಕು ಇವರಾಗಿದ್ದಾರೆ. ಆದ್ರೆ ಇತ್ತಿಚೆಗೆ ಬಾಬಾ ರಾಮ್ ದೇವ್ ಅವರು ಕೊರೊನೋ ಮಹಾಮಾರಿಗೆ ಸತತ ಪ್ರಯತ್ನದ ನಂತ್ರ ಕೊರೊನೀಲ್ ಎನ್ನುವ ಆಯುರ್ವೇದ ಔಷಧಿಯನ್ನು ಅನ್ವೇಷಣೆ ಮಾಡಿದರು. ಇದರಲ್ಲಿ 6 ದಿನದಲ್ಲಿ 70 ಶೇಕಡ 9 ದಿನದಲ್ಲಿ ಕೊರೊನೋ ಪೂರ್ತಿಯಾಗಿ ಗುಣಮುಖ ಆಗುವುದು ಎಂದು ಅವರು ಪ್ರಮಾಣಿಕರಿಸಿದರು. ಆದರೆ ಕೆಲವು ವಿಚಾರವಾದಿಗಳು, ಇದನ್ನು ಅಪಹಾಸ್ಯ ಮಾಡಲು ಹೊರಟರು, ವಿರೋಧಿಸಿದರು.

ಎಲ್ಲಿತನಕ ಅಂದ್ರೆ ರಾಜಸ್ತಾನದಲ್ಲಿ ಯಾರೋ ಬಾಬಾ ರಾಮ್ ದೇವ್ ಮೇಲೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ. 6 ವಾರಗಳಲ್ಲಿ ಬೆಳ್ಳಗೆ ಮಾಡುತ್ತೇವೆ ಅಂದ ಫೇರ್&ಲೌಲಿ ಬಗ್ಗೆ ಸುಮ್ಮನಿದ್ದವ್ರು, 7 ವಾರದಲ್ಲಿ ನಿಮ್ಮನ್ನು ಎತ್ತರ ಮಾಡ್ತೇವೆ ಅಂದ ಕಾಂಪ್ಲೈನ್ ಬಗ್ಗೆ ಸುಮ್ಮನಿದ್ದ ಕೆಲವರು ಬಾಬ ರಾಮ್ ದೇವ್ ಅವರ ಕೊರೊನಿಲ್ ಔಷಧಿಯನ್ನು ಅಪಹಾಸ್ಯ ಮಾಡಲು ಕಾರಣ ಏನು? ಅದನ್ನು ವಿರೋಧಿಸಲು ಹೊರಟದ್ದು ಯಾಕೆ? ಅವರೇನು ವಿಷ ತಯಾರು ಮಾಡಿದ್ರಾ ? ಇಲ್ಲಾ ಬಾಂ’ಬ್ ತಯಾರು ಮಾಡಿದ್ರಾ? 500 ರೂಪಾಯಿಗೆ ಕೊರೊನೋ ಔಷದಿ ಸಾಮಾನ್ಯ ಜನರಿಗೆ ಸಿಗುವಂತೆ ಮಾಡಲು ಹೊರಟದ್ದು ರಾಮ್ ದೇವ್ ಅವರದ್ದು ತಪ್ಪಾ? ಅದೂ BPL ಕಾರ್ಡ್ ಇರುವ ಬಡವರಿಗೆ ಔಷಧಿಯನ್ನು ಉಚಿತವಾಗಿ ಮನೆಗೆ ತಂದು ಕೊಡ್ತೇವೆ ಅಂತ ಬೇರೆ ಹೇಳಿದ್ದಾರೆ..

ಸ್ವತಃ ಬಾಬಾ ರಾಮ್ ದೇವ್ ಅವರದ್ದು MBBS ಆಗದೆ ಇರಬಹುದು ಆದರೆ ಅವರ ಪತಂಜಲಿಯ 500ಜನ ಸಂಶೋಧಕ ವೈದ್ಯರು ನುರಿತ ವೈದ್ಯರಾಗಿದ್ದು, MBBS ಆದವರೇ ಹೆಚ್ಚು. ಇನ್ನೊಬ್ಬರ ಸಾಮರ್ಥ್ಯವನ್ನು ಅಪಹಾಸ್ಯ ಮಾಡುವ ಮೊದಲು ನಮ್ಮ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬೇಕು..ವಿಶ್ವದ ದೊಡ್ಡದೊಡ್ಡ ಫಾರ್ಮಸಿ ಕಂಪನಿಗಳು ಕೊರೊನೋಕ್ಕೆ ಔಷಧಿ ಕಂಡುಹಿಡಿಯಲು ಪರದಾಡುತ್ತಿರುವ ಈ ಸಂಧರ್ಭದಲ್ಲಿ ಆಯುರ್ವೇದದಲ್ಲಿ ಕೊರೊನೋನಿಲ್ ಔಷಧಿ ಆವಿಷ್ಕಾರ ಮಾಡಿ 500ರೂಪಾಯಿಗೆ ಜನರಿಗೆ ಲಭ್ಯ ಆಗುವಂತೆ ಪ್ರಯತ್ನಪಟ್ಟ ಕೇಸರಿ ಸಂತ ಅಪ್ಪಟ್ಟ ಭಾರತೀಯ ಬಾಬಾ ರಾಮ್ ದೇವ್ ಅಭಿನಂದನಾರ್ಹರು… ಯಾವತ್ತೂ ಇನ್ನೊಬ್ಬರ ಪ್ರಯತ್ನವನ್ನು ಬೆಂಬಲಿಸುವವರಾಗಿ…

ಕೃಪೆ : ಸಚಿನ್ ಜೈನ್ ಹಳೆಯೂರ್