80ರ ದಶಕದ ಖ್ಯಾತ ಬಾಲ ನಟಿ ಇಂದಿರಾ ಈಗ ಹೇಗಿದ್ದಾರೆ ಗೊತ್ತಾ.!ಇವರ ಪತಿ ಹಾಗೂ ಕುಟುಂಬ ಹೀಗಿದೆ ನೋಡಿ..

Cinema

ಸ್ನೇಹಿತರೆ ಕನ್ನಡ ಸಿನಿಮಾರಂಗದಲ್ಲಿ ಈಗಾಗಲೇ ಸಾಕಷ್ಟು ಬಾಲಕಲಾವಿದರು ಅವರದೇ ಆದ ಸಕ್ಕತ್ ಅಭಿನಯದ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಹಾಗೆ ಅವರದೇ ಆದ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಬಾಲ ಕಲಾವಿದರಲ್ಲಿ ಸಾಕಷ್ಟು ಜನರು ಈಗಾಗಲೇ ಮಿಂಚಿ ಮರೆಯಾಗಿದ್ದಾರೆ. ಹೌದು 70ರ ದಶಕದಲ್ಲಿ ಬರುವ ಬಾಲ ಕಲಾವಿದೆ ಈ ಬೇಬಿ ಇಂದಿರಾ ಅವರ ಬಗ್ಗೆ ಈಗಾಗಲೇ ನಿಮಗೆ ಗೊತ್ತೇ ಇದೆ. ಇವರನ್ನು ಹೆಚ್ಚು ಸಿನಿಮಾಗಳಲ್ಲಿ ಸಣ್ಣಪುಟ್ಟ ಬಾಲ ಕಲಾವಿದೆ ಆಗಿ ಅಭಿನಯಿಸಿದ್ದ ಪಾತ್ರಗಳಲ್ಲಿ ನೋಡಿರುತ್ತೀರಿ. ಹೌದು ಈ ಬಾಲ ಕಲಾವಿದೆ ಒಂದಾನೊಂದು ಕಾಲದಲ್ಲಿ ತುಂಬಾ ಪ್ರಖ್ಯಾತಿ ಗಳಿಸಿದ್ದ ನಟಿಯಾಗಿದ್ದರು.

ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ತುಂಬಾ ಬೇಡಿಕೆ ಇತ್ತು. ಈ ನಟಿ ನೋಡಲು ತುಂಬಾ ಮುದ್ದಾಗಿದ್ದು ಚಿಕ್ಕ ಮಕ್ಕಳ ಪಾತ್ರ ಮಾಡುವುದಕ್ಕೆ ಹೇಳಿ ಮಾಡಿಸಿದ ಹಾಗೆ ಇವರು ಕಾಣಿಸಿದ್ದರು. ಬಾಲನಟಿ ಬೇಬಿ ಇಂದಿರಾ ಅವರು 1972 ರಲ್ಲಿ ಮೊದಲ ಬಾರಿಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್-ಭಾರತಿ ಅವರ ಸಿನಿಮಾದಲ್ಲಿ ಕಾಣಿಸಿದ್ದು ಜನ್ಮ ರಹಸ್ಯ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಮಕ್ಕಳಭಾಗ್ಯ, ರಾಮ ಲಕ್ಷ್ಮಣ, ಸಿಂಹದಮರಿ ಸೈನ್ಯ, ಪುಟಾಣಿ ಏಜೆಂಟ್ ಒನ್ ಟು ತ್ರೀ, ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದರು. ನಟಿ ಬೇಬಿ ಇಂದಿರಾ ಮೂಲತಹ ಕನ್ನಡದವರಾದರು ತೆಲುಗು, ತಮಿಳು, ಮಲಯಾಳಂ ಹೀಗೆ ಪಂಚ ಭಾಷೆ ಸಿನಿಮಾರಂಗದಲ್ಲಿಯೂ ಕೂಡ ಅಭಿನಯಿಸಿ ದಕ್ಷಿಣ ಭಾರತದ ಖ್ಯಾತ ಬಾಲನಟಿಯಾಗಿ ಗುರುತಿಸಿಕೊಂಡರು.

ಮೊಟ್ಟಮೊದಲ ಬಾರಿಗೆ ನಾಯಕಿಯಾಗಿ ಇಂದಿರಾ ಅವರು ಅರ್ಜುನ್ ಸರ್ಜಾ ಅವರ ಜೊತೆ ‘ಮಳೆ ಬಂತು ಮಳೆ’ ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯ ಮಾಡಿ ಸೈ ಎನಿಸಿಕೊಂಡರು. ಇಂದಿರಾ ಅವರು ತಮಿಳುನಾಡಿನ ಚೆನ್ನೈ ಮೂಲದ ಮಾಸ್ಟರ್ ಶ್ರೀಧರ್ ಎಂಬ ನಟನ ಜತೆ ವೈವಾಹಿಕ ಜೀವನ ಆರಂಭಿಸಿದರು. ಆದರೆ ಶ್ರೀಧರ್ ಅವರು ಅನಾ’ರೋಗ್ಯದಿಂದ 2013ರಲ್ಲಿ ಸಾ’ವನ್ನಪ್ಪಿದರು ಎನ್ನಲಾಗಿದೆ.

ಇಂದಿರಾ ಅವರಿಗೆ ಇಬ್ಬರು ಮಕ್ಕಳು ಇದ್ದು ದರ್ಶನ್ ಹಾಗೂ ರಕ್ಷಿತ್ ಎನ್ನಲಾಗಿದೆ. ಈ ಕೆಳಗಿನ ಫೋಟೋಸ್ ನೋಡಿ ಇದೀಗ ಬಾಲನಟಿಯಾಗಿ ಮಿಂಚಿದ್ದ ಇಂದಿರಾ ಅವರು ಹೇಗಿದ್ದಾರೆ, ಅವರ ಪತಿ ಯಾರು ಎಂಬುದು ತಿಳಿಯುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೇನೇ ಕಮೆಂಟ್ ಕೂಡ ಮಾಡಿ ಧನ್ಯವಾದಗಳು….