ಒಂದು ಕಾಲದ ಖ್ಯಾತ ನಟಿ ಬೇಬಿಶ್ಯಾಮಿಲಿಗೆ ಇಂದು ಚಿತ್ರರಂಗದಲ್ಲಿ ನೆಲೆಸಿಗದಿರಲು ಕಾರಣವೇನು ಗೊತ್ತಾ?ಅಸಲಿಗೆ ಆಗಿದ್ದೆ ಬೇರೆ.!

Cinema

ಸಿನಿಮಾರಂಗ ಅಂದರೆ ಹಾಗೇನೆ ಯಾವಾಗ ಯಾರಿಗೆ ಯಾವ ರೀತಿ ಫಲ ಸಿಗುತ್ತದೆಯೋ, ಯಾರಿಗೆ ಯಾವಾಗ ಹೇಗೆ ವಿಫಲವಾಗುತ್ತದೆಯೋ ಎಂಬುದನ್ನು ಹೇಳಲಿಕ್ಕೆ ಆಗದು. ಮನುಷ್ಯ ಕಷ್ಟಪಟ್ಟು ದುಡಿದರೆ ಅವನು ಅಂದುಕೊಂಡಂತೆ ಯಶಸ್ಸು ಅವನ ಹಿಂದೆಯೇ ಬರುತ್ತದೆ ಎಂಬುದು ವಾಡಿಕೆ ಕೆಲವೊಂದು ಸಲ ಇದು ನಿಜ ಅನ್ಸುತ್ತೆ. ಆದರೆ ಇದು ಎಲ್ಲರಿಗೂ ಅನ್ವಯ ಆಗುವುದಿಲ್ಲ. ಕಷ್ಟಪಟ್ಟು ದುಡಿದು ನಡೆದು ಬಂದ ದಾರಿಯನ್ನು ಕೆಲವರು ಎತ್ತರಕ್ಕೆ ಹೋದ ತಕ್ಷಣ ಮರೆತುಬಿಡುತ್ತಾರೆ. ಅ’ಹಂಕಾರದಿಂದ ವರ್ತಿಸಲು ಮುಂದಾಗುತ್ತಾರೆ. ಹತ್ತಿದ ಏಣಿಯನ್ನು ಕೆಲವರು ಒದ್ದು ಬಿಡುತ್ತಾರೆ. ಹೌದು ಅಂತಹವರು ಒಂದಲ್ಲ ಒಂದು ದಿನ ಕೆಳಗೆ ಬಿದ್ದೆ ಬೀಳ್ತಾರೆ ಅವರು ಮಾಡಿದಂತಹ ಕೆಲವು ತಪ್ಪನ್ನು ನಿಜ ಜೀವನದ ಉದ್ದಕ್ಕೂ ಪರಿತಪಿಸುತ್ತಾ, ಏಕೆ ಹೀಗೆ ಆಯ್ತು ನನ್ನ ಜೀವನ ಎಂದು ಪ್ರಶ್ನೆ ಮಾಡಿಕೊಳ್ಳುತ್ತಾರೆ.

ಬಾಲನಟಿ ಶ್ಯಾಮಿಲಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದಾನೊಂದು ಕಾಲದ ಟಾಪ್ ಬಾಲ ನಟಿಯಾಗಿ ಮಿಂಚಿ ಅದೆಷ್ಟೋ ಕನ್ನಡ ತೆಲುಗು ತಮಿಳು ಹೀಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸಿ ಅವರದೇ ಆದ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು. ನಂತರ ಸಾಕಷ್ಟು ಜನರು ಈ ಬಾಲಕಿಯ ನಟನೆಯನ್ನು ನೋಡಿ ಮನೆಮಗಳಂತೆ ಪ್ರೀತಿ ಮಾಡುತ್ತಿದ್ದರು. ಇವರಿಗೆ ಸಣ್ಣ ವಯಸ್ಸಿನಲ್ಲಿ ತುಂಬಾ ದೊಡ್ಡದಾದ ಪ್ರೀತಿ-ವಾತ್ಸಲ್ಯ ಅಭಿಮಾನಿಗಳಿಂದ ದೊರೆಯುತ್ತದೆ. ಒಂದಾನೊಂದು ಕಾಲದಲ್ಲಿ ನಟಿ ಶಾಮಿಲಿ ಅವರು ಹೆಚ್ಚು ಟ್ಯಾಕ್ಸ್ ಅನ್ನು ಕಟ್ಟುತ್ತಿದ್ದರು ಎಂದರೆ ನೀವು ನಂಬಲೇಬೇಕು. ಅಷ್ಟು ದುಡ್ಡನ್ನ ಈ ನಟಿ ಸಣ್ಣ ವಯಸ್ಸಿನಲ್ಲಿಯೇ ಸಂಭಾವನೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಅಂದು ಅಷ್ಟು ಸುಪ್ರಸಿದ್ಧ ಬಾಲನಟಿಯಾಗಿ ಮಿಂಚಿದ ಬೇಬಿ ಶ್ಯಾಮಿಲಿ ಇದೀಗ ಬೆಳೆದು ತುಂಬಾನೇ ದೊಡ್ಡವರಾಗಿದ್ದಾರೆ.

ಬೇಬಿ ಶ್ಯಾಮಿಲಿ ಅವರಿಗೆ ಇದೀಗ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ದೊರಕುತ್ತಿಲ್ಲ, ಈ ಮೂಲ ಕೆದಕಿ ನೋಡಿದಾಗ ಸಿನಿಮಾರಂಗದಲ್ಲಿ ಕೇಳಿಬಂದ ಮಾತುಗಳು, ಇವರಿಗೆ ಸಿನಿಮಾದಲ್ಲಿ ಅವಕಾಶ ಅಭಿನಯ ಮಾಡಲಿಕ್ಕೆ ಹೆಚ್ಚು ದೊರಕಿತ್ತು. ಸಿದ್ಧಾರ್ಥ್ ಜೊತೆ ಮೊದಲ ಸಿನಿಮಾದಲ್ಲಿ ಅಭಿನಯಿಸಿ ತುಂಬಾನೇ ಸೈ ಎನಿಸಿಕೊಂಡರು. ಆದರೆ ಬೇಬಿ ಶ್ಯಾಮಿಲಿ ಅಭಿನಯದ ಈ ಸಿನಿಮಾ ಅಷ್ಟು ಯಶಸ್ವಿಯಾಗಲಿಲ್ಲ. ಜೊತೆಗೆ ಈಕೆಗೆ ತುಂಬಾ ಗ’ರ್ವವಿದೆ ಅಹಂಕಾರ ತುಂಬಿ ತುಳುಕುತ್ತಿದೆ ಎಂದು ಕೇಳಿ ಬಂದಿತು. ಮೊದಲ ಸಿನಿಮಾದಲ್ಲೇ ನಟ ಹಾಗೂ ನಿರ್ದೇಶಕರ ಜೊತೆ ಗ’ಲಾಟೆ ಕೊಡ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೀಗ ಬೇಬಿ ಶ್ಯಾಮಿಲಿ ಅವರಿಗೆ ಯಾವ ಸಿನಿಮಾ ಅವಕಾಶ ಇಲ್ಲದೆ, ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ಸಿನಿಮಾರಂಗದಲ್ಲಿ ನೆಲೆಯೂರಲು ಆಗುತ್ತಿಲ್ಲ ಎಂಬುದು ಎಲ್ಲರಿಗು ಗೊತ್ತಿರೋ ವಿಷಯವೇ..ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..