ಬೆಳಗಿನ ಜಾವ ಮೈ ಜುಮ್ಮೆನಿಸಿವ ಕೆಟ್ಟ ಕನಸು ಬಿದ್ದರೆ ಏನು ಮಾಡಬೇಕು ಗೊತ್ತಾ.?

Kannada News

ಕೆಲವು ಶಾಸ್ತ್ರಗಳ ಪ್ರಕಾರ ಬೆಳಗಿನ ಜಾವ ಬಿದ್ದ ಕನಸು ನನಸಾಗುತ್ತದೆವೆ ಎಂದು ಹೇಳಲಾಗಿದೆ. ಬೆಳಗಿನ ಜಾವ 3 ರಿಂದ 6 ಗಂಟೆ ಸಮಯದ ನಡುವೆ ಕಂಡ ಕನಸುಗಳು ನನಸಾಗುತ್ತವೆ. ಕಂಡ ಪ್ರತಿಯೊಂದು ಕನಸುಗಳು ನನಸಾಗದೆ ಇದ್ದರೂ ಕೂಡ ಕೆಲವೊಂದು ಮುಖ್ಯ ಘಟನೆಗಳು ಜೀವನದಲ್ಲಿ ನಡೆಯುವುದಿದ್ದರೆ ಅದು ಬೆಳಗಿನ ಜಾವ ಕನಸಿನಲ್ಲಿ ಬರುತ್ತದೆ ಎಂಬುದು ನಂಬಿಕೆ. ತುಂಬಾ ಜನರು ಇದನ್ನು ನಂಬುತ್ತಾರೆ. ನಂಬುವುದು ಮಾತ್ರವಲ್ಲ ಬಹಳ ಜನರ ಜೀವನದಲ್ಲಿ ಇದು ನಿಜವಾಗಿದೆ ಮತ್ತು ಅವರ ಅನುಭವಕ್ಕೆ ಬಂದು ನಂಬಿಕೆಯಾಗಿ ಉಳಿದುಕೊಂಡಿದೆ.

ಸಂಶೋಧನೆ ಒಂದರ ಪ್ರಕಾರ ಕೆಲ ವಿಷಯಗಳು ನಿಜಜೀವನದಲ್ಲಿ ಭಯ ತರಿಸುವುದಕ್ಕಿಂತ ಕನಸಿನಲ್ಲಿ ಬಂದರೆ ಹೆಚ್ಚು ಬಯ ಉಂಟುಮಾಡುತ್ತವೆ. ಉದಾಹರಣೆಗೆ ಕೆಲವರಿಗೆ ದೆವ್ವ, ಭೂತ, ಕ್ರೂ’ರ ಪ್ರಾಣಿಗಳು, ನೀರು, ಎತ್ತರದ ಸ್ಥಳ ಮೊದಲಾದವನ್ನು ಕಂಡರೆ ಯಾವ ಭಯವೂ ಇರುವುದಿಲ್ಲ. ಆದರೆ ಇವುಗಳು ಕನಸಿನಲ್ಲಿ ಬಂದರೆ ಭಯ ಉಂಟುಮಾಡುತ್ತವೆ. ಎಚ್ಚರವಾದ ಬಳಿಕ ಒಂದು ರೀತಿಯ ಭಯದ ಭ್ರಮೆ ಹಾಗೆಯೇ ಉಳಿದಿರುತ್ತದೆ. ಯಾಕೆಂದರೆ ಕನಸು ಒಳ ಮನಸಿಗೆ ಸಂಬಂಧಿಸಿದ ವಿಷಯವಾಗಿದೆ. ಸೂಪ್ತ ಪ್ರಜ್ಞೆ ಎಂದು ಕರೆಯಲಾಗುತ್ತದೆ. ಸೂಪ್ತ ಮನಸಿನ ನೆನಪುಗಳು ರಾತ್ರಿಯ ವೇಳೆ ನಾವು ಮಲಗಿರುವಾಗ ಡಿಲೀಟ್ ಆಗುತ್ತವೆ. ಅವು ಕನಸಿನ ರೂಪದಲ್ಲಿ ಹೊರಬರುತ್ತವೆ.

ನಮ್ಮ ಮನಸ್ಸಿನ ಶಕ್ತಿ ಎಷ್ಟಿರುತ್ತದೆ ಎಂದರೆ ಕನಸಿನಲ್ಲಿ ಕಂಡದ್ದು ಕೆಲವೊಮ್ಮೆ ನಿಜವಾಗುತ್ತದೆ. ಅದರಲ್ಲೂ ಬೆಳಗಿನ ಜಾವ ಕೆ’ಟ್ಟ ಕನಸು ಬಿದ್ದರೆ ಅದು ನಮ್ಮ ಮನಸಿನ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಅದು ಬಹುತೇಕ ನನಸಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಷ್ಟೋ ಜನರಿಗೆ ತಾವು ಬೆಳಗಿನ ಜಾವ ಕಂಡ ಕೆ’ಟ್ಟ ಕನಸು ನನಸಾಗಿದೆ. ಉದಾಹರಣೆಗೆ ಯಾರದ್ದೋ ಸಾ’ವು, ಆರೋಗ್ಯದ ಸಮಸ್ಯೆ, ಯಾರದ್ದೋ ಜತೆ ಜ’ಗಳ, ರಸ್ತೆಯ ಅ’ಪಘಾತ ಹೀಗೆ ಕೆಟ್ಟ ಘಟನೆಗಳು ಕನಸಿನಲ್ಲಿ ಬಂದ ಬಳಿಕ ನಿಜವಾಗುತ್ತವೆ.

ಹಾಗಾದರೆ ಇದಕ್ಕೆ ಏನು ಪರಿಹಾರ ಎಂದು ಯೋಚಿಸಿದರೆ ನಮ್ಮ ಹಿರಿಯರೇ ಇದಕ್ಕೆ ಒಂದು ಉಪಾಯ ಕಂಡುಕೊಂಡಿದ್ದಾರೆ. ಇದು ವೈಜ್ಞಾನಿಕವಾಗಿಯೂ ನಿಜವಾಗಿದೆ. ಅದೇನೆಂದರೆ ನೀವು ಬೆಳಗಿನ ಜಾವ ಕೆಟ್ಟ ಭ’ಯಾನಕ ಕನಸು ಕಂಡರೆ ಅದನ್ನು ಆ ದಿವವೇ ಯಾರಾದರೂ ಒಬ್ಬರ ಜೊತೆ ಹೇಳಿಕೊಳ್ಳಬೇಕು. ಜನರ ಜೊತೆ ಹೇಳಿಕೊಂಡು ಬಹಿರಂಗ ಪಡಿಸಿ ಮನಸನ್ನು ಹಗುರ ಮಾಡಿಕೊಳ್ಳಬೇಕು. ಮತ್ತು ಅದನ್ನು ಮತ್ತೆ ಪದೇ ಪದೇ ನೆನಪಿಸಿಕೊಳ್ಳಬಾರದು.

ನೀವು ತುಂಬಾ ಸೂಕ್ಷ್ಮ ಮನಸಿನವರಾಗಿದ್ದರೆ ಕಂಡ ಕನಸು ನಿಜವಾಗದಿರಲಿ ಎಂದು ದೇವರನ್ನು ಬೇಡಿಕೊಂಡು ಕರ್ಪೂರದ ಆರತಿ ಮಾಡಿ. ಬೆಳಗಿನ ಜಾವ ಬಿದ್ದ ಕನಸಿನಿಂದ ನೀವು ಬೆಚ್ಚಿದ್ದರೆ ಬೆಂಕಿಯ ದೃಷ್ಟಿ ತೆಗೆದುಕೊಳ್ಳಿ. ದೇವಾಲಯಕ್ಕೆ ಹೋಗಿ ಬನ್ನಿ. ಇಲ್ಲ ನಾವು ಇದೆಲ್ಲ ನಂಬುವುದಿಲ್ಲ , ಇಂತಹ ಕನಸು ಬಿದ್ದರೂ ಹೆದರುವುದಿಲ್ಲ ಅಂದರೆ ಅಂತ ಮನೋಭಾವವು ಕೂಡ ತುಂಬಾ ಒಳ್ಳೆಯದು.