ಈ ಪಲ್ಯವನ್ನು ಪ್ರತಿದಿನ ತಿನ್ನುವುದರಿಂದ ಕಿಡ್ನಿಯ ಕಲ್ಲುಗಳೂ ಕರಗುತ್ತವೆ ! ಯಾವ ಪಲ್ಯ?ಮಾಡೋದು ಹೇಗೆ ಅಂತ ನೋಡಿ..

Health

ಸರಿಯಾಗಿ ನೀರು ಕುಡಿಯದೇ ಇರುವುದು, ಅಸಮತೋಲನ ಆಹಾರ ಕ್ರಮ, ಹೆಚ್ಚು ಔಷಧಿ ಮಾತ್ರೆಗಳನ್ನು ಸೇವಿಸುವುದು, ಸರಿಯಾಗಿ ಮಲ ಮೂತ್ರ ವಿಸರ್ಜನೆ ಮಾಡದಿರುವುದು ಹೀಗೆ ಕಿಡ್ನಿ ಅಥವಾ ಮೂತ್ರಪಿಂಡಗಳು ಹಾಳಾಗಲು, ಕಿಡ್ನಿಯಲ್ಲಿ ಕಲ್ಲುಗಳು ರೂಪಗೊಳ್ಳಲು ಅನೇಕ ಕಾರಣಗಳಿವೆ. ಇದಕ್ಕೆ ಅನೇಕ ಚಿಕಿಸ್ತೆ ಇದೆ ಮತ್ತು ಮನೆಮದ್ದುಗಳೂ ಇವೆ. ಆದರೆ ಈ ಒಂದು ಪಲ್ಯ ತಿನ್ನುವುದರಿಂದ ಕಿಡ್ನಿಯ ಕಲ್ಲು ಕರಗಲು ಸಹಾಯವಾಗುತ್ತದೆ ಜೊತೆಗೆ ರ’ಕ್ತವೂ ಕೂಡ ಶುದ್ಧಿಗೊಳ್ಳುತ್ತದೆ.

ಅದೇ ಬಾಳೆ ಕಾಯಿಯ ಪಲ್ಯ. ಬಾಳೆಕಾಯಿಯ ಸೇವನೆ ಮೂತ್ರಪಿಂಡದ ಆರೋಗ್ಯ ವೃದ್ಧಿಸಲು ತುಂಬಾ ಉಪಕಾರಿ. ದಿನವೂ ಸ್ವಲ್ಪವೇ ಬಾಳೆಕಾಯಿ ಪಲ್ಯ ತಿನ್ನುವುದರಿಂದ ತುಂಬಾ ಪ್ರಯೋಜನವಿದೆ. ಇದು ರಕ್ತವನ್ನು ಶುದ್ಧೀಕರಿಸುವ ಜೊತೆಗೆ ಕಿಡ್ನಿಯ ಕಲ್ಲುಗಳು ಕರಗಲು ನೆರವಾಗುತ್ತದೆ.

ಈ ಪಲ್ಯ ಮಾಡುವುದು ಹೇಗೆ? ಮೊದಲು ಬಾಳೆ ಕಾಯನ್ನು ಸಿಪ್ಪೆ ನಾರು ತೆಗೆದು ಸಣ್ಣಗೆ ಹಚ್ಚಿಕೊಳ್ಳಬೇಕು. ಹೀಗೆ ಸಣ್ಣಗೆ ಹಚ್ಚಿಕೊಂಡ ಬಾಳೆಕಾಯಿ ತುಂಡುಗಳನ್ನು ಉಪ್ಪು ಹಾಕಿ ನೀರಿನಲ್ಲಿ ಕುದಿಸಿ ಬೇಯಿಸಬೇಕು. ನಂತರ ಜೀರಿಗೆ, ಉದ್ದಿನಬೇಳೆ, ತೊಗರಿಬೇಳೆ ಉರಿದು ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಮೆಣಸಿನಕಾಯಿ , ಕರಿಬೇವು, ಹಿಂಗು, ಹರಿಷಿನ ಹಾಕಿ ಒಗ್ಗರಣೆ ತಯಾರಿಸಿ ಅದಕ್ಕೆ ಬೇಯಿಸಿಕೊಂಡ ಬಾಳೆಕಾಯಿ, ಫ್ರೆಶ್ ಆಗಿ ತಯಾರಿಸಿಕೊಂಡು ಪುಡಿ ಹಾಕಿ ಚೆನ್ನಾಗಿ ಕಲಸಿ ಕೊತ್ತಂಬರಿ ಸೊಪ್ಪು ಕಲಿಸಬೇಕು.

ಇಲ್ಲವೇ ನಿಮಗೆ ತಿಳಿದಿರುವ ಹಾಗೆ ಸರಳವಾಗಿ ಬಾಳೆ ಕಾಯಿ ಪಲ್ಯ ತಯಾರಿಸಿ ದಿನವೂ ಸೇವಿಸುತ್ತಾ ಬನ್ನಿ. ಇದರಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ದೂರಾಗುತ್ತವೆ. ಇದರ ಜೊತೆಗೆ ದಿನವೂ ಹೆಚ್ಚು ಅಂದರೆ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿಗೆ ನೀರು ಕುಡಿಯಬೇಡಿ. ನಿಮ್ಮ ಮೂತ್ರ ಪಿಂಡದಲ್ಲಿ ಸಮಸ್ಯೆ ಕಾಣಿಸಿದರೆ ಅದನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಡಯಾಗ್ನಿಸಿಸ್ ಮಾಡಿಸಲು ಮರೆಯದಿರಿ. ಮತ್ತು ಈ ಕುರಿತು ನಿಮ್ಮ ಅಕ್ಕ ಪಕ್ಕದವರಿಗೂ ತಿಳಿಸಿ ಹೇಳಿ.