ವೇಗವಾಗಿ ಕಾರಿನಲ್ಲಿ ಬಂದ ಯುವತಿಯರಿಂದ ಪುಂಡಾಟಿಕೆ.ನಿಮ್ಮ ಕೈಲಿ ಸಾಧ್ಯವಾದ್ರೆ ನಮ್ಮನ್ನು ಹಿಡೀರಿ ಎಂದು ಕಾರಿನಲ್ಲಿ ಪರಾರಿ

News

ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಹಲವಾರು ಕಡೆ ಸೀಲ್ ಡೌನ್ ಕೂಡ ಮಾಡಲಾಗಿದೆ. ಇನ್ನು ಲಾಕ್ ಡೌನ್ ಇರೋ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಿಗಾಗಿ ಇಲ್ಲವೇ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಮಾತ್ರ ಹೊರಬರಬಹುದಾಗಿದೆ. ಬೇಕಾಬಿಟ್ಟ ವಾಹನಗಳಲ್ಲಿ ಓಡಾಡಿದಲ್ಲಿ ವಾಹನಗಳನ್ನ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಕೂಡ ಹಲವು ಏರಿಯಾಗಳಲ್ಲಿ ಸೀಲ್ ಡೌನ್ ಮಾಡಲಾಗಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಇದರ ನಡುವೆಯೂ ಯುವತಿಯರಿಬ್ಬರು ಮತ್ತಿನಲ್ಲಿ ಕಾರನ್ನ ವೇಗವಾಗಿ ಚಾಲನೆ ಮಾಡಿದ್ದಲ್ಲದೆ ಪೋಲೀಸರ ಮೇಲೆ ವಾಗ್ವಾದ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇನ್ನು ಈ ಘಟನೆ ನಡೆದಿರೋದು ಬೆಂಗಳೂರಿನ ಲೀಲಾ ಪ್ಯಾಲೇಸ್ ಬಳಿ. ಇನ್ನು ಇದೆ ಭಾಗದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದು ಮತ್ತಿನಲ್ಲಿದ್ದ ಯುವತಿಯರು ಕಾರನ್ನ ವೇಗವಾಗಿ ಓಡಿಸಿಕೊಂಡು ಬಂದಿದ್ದಾರೆ. ಇನ್ನುಪೊಲೀಸ್ ಅಧಿಕಾರಿ ಅವರು ಆ ಕಾರನ್ನ ನಿಲ್ಲಿಸಲು ಹೋದಾಗ, ಅವರ ಮೇಲೆಯೇ ಕಾರನ್ನ ಹತ್ತಿಸಲು ಪ್ರಯತ್ನಿಸಿ, ಯುವತಿಯರು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಇನ್ನು ಯುವತಿಯರ ಪುಂಡಾಟ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆ ಯುವತಿಯರ ಕಾರನ್ನ ಒಂದು ಕಿಮೀ ಚೇಸ್ ಮಾಡಿಕೊಂಡು ಹೋಗಿ ತಡೆದು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಇನ್ನು ಮತ್ತಿನಲ್ಲಿದ್ದ ಆ ಯುವತಿಯರು ನಮ್ಮ ಬಳಿ ಪಾಸ್ ಇದೆ, ನಮಗೆ ಮೇಲಧಿಕಾರಿಗಳು ಗೊತ್ತಿದ್ದಾರೆ ಎಂದು ತಮ್ಮ ಪುಂಡಾಟಿಕೆ ಮೆರೆದಿದ್ದಾರೆ.

ಇನ್ನು ಇದೆ ವೇಳೆ ಆ ಸ್ಥಳದಲ್ಲೇ ಇದ್ದ ಯುವಕರು ಆ ಯುವತಿಯರನ್ನ ಪ್ರಶ್ನಿಸಿದಾಗ ಅವರ ಜೊತೆಗೂ ಜಗಳಕ್ಕೆ ಇಳಿದಿದ್ದಾರೆ. ಬಳಿಕ ಆ ಯುವತಿಯರು ನಿಮ್ಮ ಕೈಲಾದರೆ ನಮ್ಮನ್ನ ಹಿಡಿಯಿರು ಎಂದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇನ್ನು ಪೊಲೀಸರ ತಂಡವೊಂದು ಯುವತಿಯರು ಬಂದಿದ್ದ ಕಾರಿನ ನಂಬರ್ ನ್ನ ಪತ್ತೆಹಚ್ಚಿದ್ದು, ಅದರ ಮೂಲಕ ಅವರನ್ನ ಪತ್ತೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ,