ಸ್ನೇಹಿತರೇ, ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವರ್ಲ್ಡ್ ಕಾರ್ಯಕ್ರಮವನ್ನ ನೀವು ನೋಡಿರುತ್ತೀರಿ. ಇನ್ನು ಈ ರೋಚಕ ಕಾರ್ಯಕ್ರಮವನ್ನ ನಿರೂಪಣೆ ಮಾಡುವವರು ಬೇರ್ ಗ್ರಿಲ್ಸ್. ಮೂಲತಃ ಇಂಗ್ಲೆಂಡ್ ದೇಶದವರಾದ ಬೇರ್ ಗ್ರಿಲ್ಸ್ ಸ್ವತಃ ಬರಹಗರಾಗಿದ್ದು ತನ್ನ ಸಾಹಸಮಯ ವರದಿಗಾರಿಕೆಯಿಂದ ಇಡೀ ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಉದ್ಯಮಿ ಕೂಡ ಆಗಿರುವ ಬೇರ್ ಗ್ರಿಲ್ಸ್ ಕಾಡು, ಮರಭೂಮಿ, ಸಮುದ್ರ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳಲ್ಲಿ ಕಾಡು, ವನ್ಯಜೀವಿಗಳ ಬಗ್ಗೆ ಕುರಿತಂತೆ ವರದಿ ಮಾಡುವುದನ್ನ ನೋಡಿದ್ರೆ ಎಂತಹವರಿಗೂ ಎದೆ ಜೆಲ್ ಅನ್ನಿಸದೆ ಇರೋದಿಲ್ಲ.
[widget id=”custom_html-4″]

ಇನ್ನು ಬೇರ್ ಗ್ರಿಲ್ಸ್ ಅವರು ಭಯಾನಕ ಕಾಡುಗಳಲ್ಲಿ ಒಂಟಿಯಾಗಿ ಓಡಾಡುತ್ತಾ, ಕಾಡಿನಲ್ಲೆಡೆ ಎಲ್ಲಾ ಅಲೆದಾಡುತ್ತಾ ಮನುಷ್ಯನ ವಾಸನೆ ಇಲ್ಲದೆ ಇರೋ ಕಾಡಿನ ನಿರ್ಜನ ಪ್ರದೇಶಗಳ್ಲಲಿ ಓಡಾಡುತ್ತಾ ವನ್ಯಜೀವಿಗಳು, ಕ್ರಿಮಿ ಕೀಟಗಳು, ವಿವಿಧ ರೀತಿಯ ಪಕ್ಷಿಗಳು ಹೇಗೆಲ್ಲಾ ಬದುಕುತ್ತವೆ ಎಂಬುದನ್ನ ಮ್ಯಾನ್ ವರ್ಸಸ್ ವರ್ಲ್ಡ್ ಕಾರ್ಯಕ್ರಮದ ಮೂಲಕ ಸವಿಸ್ತಾರವಾಗಿ ವರದಿ ಮಾಡುತ್ತಾ ಇಡೀ ಜಗತ್ತೇ ನೋಡುವಂತೆ ತಿಳಿಸುತ್ತಾರೆ. ತುಂಬಾ ರೋಮಾಂಚಕವಾಗಿರುವ ಈ ಕಾರ್ಯಕ್ರಮ ಜಗತ್ತಿನಾದ್ಯಂತವೂ ಪ್ರಸಿದ್ಧವಾಗಿದ್ದು ಬೇರ್ ಗ್ರಿಲ್ಸ್ ವರದಿ ಮಾಡುವ ರೀತಿಗೆ ವೀಕ್ಷಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇಷ್ಟೆಲ್ಲಾ ಸಾಹಸಮಯದಿಂದ ಭಯಾನಕ ಕಾಡುಗಳಲ್ಲಿ ವರದಿ ಮಾಡುವ ಬೇರ್ ಗ್ರಿಲ್ಸ್ ಗೆ ಸಿಗೋ ಸಂಭಾವನೆ ಎಷ್ಟು ಎನ್ನೋ ಕುತೂಹಲ ಈ ಕಾರ್ಯಕ್ರಮ ನೋಡುವ ವೀಕ್ಷಕರಲ್ಲಿ ಇದ್ದೆ ಇರುತ್ತದೆ.
[widget id=”custom_html-4″]

ಹೌದು, ಬೇರ್ ಗ್ರಿಲ್ಸ್ ನಡೆಸಿಕೊಡೋ ಮ್ಯಾನ್ ವರ್ಸಸ್ ವರ್ಲ್ಡ್ ಕಾರ್ಯಕ್ರಮದ ಒಂದು ಎಪಿಸೋಡ್ ಗೆ ಬರೋಬ್ಬರಿ 40 ಸಾವಿರ ಡಾಲರ್ ನಿಂದ 60ಸಾವಿರ ಡಾಲರ್ ಅವರೆಗೆ ಸಂಭಾವನೆ ಪಡೆಯುತ್ತಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ 29ಲಕ್ಷದಿಂದ 37 ಲಕ್ಷದವರೆಗೆ ಹಣ ಪಡೆಯುತ್ತಾರೆ. ಇವರ ಅಂದಾಜು ನೆಟ್ ವರ್ತ್ 6 ಮಿಲಿಯನ್ ಡಾಲರ್ ಅಂದರೆ 44 ಕೋಟಿಗಿಂತ ಅಧಿಕವಾಗಿದೆ. ಒಂದು ಟಿವಿ ಶೋ ನಿರೂಪಕ ಇಷ್ಟೆಲ್ಲಾ ಸಂಭಾವನೆ ಪಡೆಯುತ್ತಾರೆ ಎಂದರೆ ಅಚ್ಚರಿಯೇ ಸರಿ. ಆದ್ರೆ ಬೇರ್ ಗ್ರಿಲ್ಸ್ ಮಾಡೋ ಸಾಹಸಮಯ ವರದಿಗೆ ಈ ಸಂಭಾವನೆ ಕಡಿಮೆ ಅಂದ್ರೂ ತಪ್ಪೇನಿಲ್ಲ. ಅಂದ ಹಾಗೆ ಬೇರ್ ಗ್ರಿಲ್ಸ್ ಕಳೆದ ವರ್ಷ ನಮ್ಮ ಭಾರತದ ಬಂಡೀಪುರ ಕಾಡುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಟ ರಜನಿ ಕಾಂತ್ ಹಾಗೂ ಅಕ್ಷಯ್ ಕುಮಾರ್ ಅವರ ಜೊತೆ ತಿರುಗಾಡಿದ್ದರು.