ಬಿಗ್ ಬಾಸ್ ಮನೆಯಿಂದ ಔಟ್ ಆದ ರಘುಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಇನ್ನು ಬೇಕಾಗಿತ್ತು ಎಂದ ವೀಕ್ಷಕರು..

Entertainment

ಬಿಗ್ ಬಾಸ್ ಸೀಸನ್ 8ರ ರಿಯಾಲಿಟಿ ಷೋನಲ್ಲಿ ಕಿರುತೆರೆ ಸೆಲೆಬ್ರೆಟಿಗಳು ಮಾತ್ರವಲ್ಲದೆ, ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆದವರು ಕೂಡ ಇದ್ದದ್ದು ವಿಶೇಷ. ಇನ್ನು ಈಗ ಲಾಕ್ ಡೌನ್ ದಿಂದಾಗಿ ಬಂದ್ ಆಗಿದ್ದ ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಶುರುವಾಗಿ ಎರಡು ವಾರಗಳಾಗಿದ್ದು ಇದರ ಎಲಿಮನೆಷನ್ ಪ್ರಕ್ರಿಯೆಗಳು ಕೂಡ ಮುಕ್ತಾಯಗೊಂಡಿದ್ದು ಮತ್ತೊಬ್ಬ ಸ್ಪರ್ಧಿ ಬಿಗ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಹೌದು,ರಘು ಗೌಡ ಮತ್ತು ಶಮಂತ್ ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿದ್ದ ಸ್ಪರ್ಧಿಗಳು. ರಘು ಗೌಡ ಭಾನುವಾರದಂದು ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಡೆದ ಎಲಿಮನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿ ರಘು ಗೌಡ ಅವರು ಎಲಿಮನೇಟ್ ಆಗಿ ಹೊರಬಂದಿರುವ ಸ್ಪರ್ಧಿಯಾಗಿದ್ದಾರೆ. ಹಾಗಾದ್ರೆ ಸಾಮಾಜಿಕ ಜಾಲತಾಣ ಮೂಲಕ ಫೇಮಸ್ ಆಗಿದ್ದ ರಘು ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ ?

ಸಾಮಾಜಿಕ ಜಾಲತಾಣ ಮೂಲಕ ಫೇಮಸ್ ಆಗಿ ಅದರ ಮೂಲಕ ಬಿಗ್ ಬಾಸ್ ಗೆ ಅವಕಾಶಗಳಿಸಿಕೊಂಡಿದ್ದ ರಘು ಅವರು ಸಿಕ್ಕ ಅವಕಾಶವನ್ನ ಅಷ್ಟೇನೂ ಚೆನ್ನಾಗಿ ಬಳಸಿಕೊಂಡಿಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿದೆ. ಅವರಿಂದ ಅಷ್ಟಾಗಿ ಮನರಂಜನೆ ಸಿಗಳಿಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ. ಇನ್ನು ಎರಡನೇ ಬಾರಿಗೆ ಶುರುವಾದ ಬಿಗ್ ಬಾಸ್ ನಲ್ಲಿ ಬೇರೆಯೇ ರೀತಿಯೇ ನನ್ನನ್ನ ನೋಡುತ್ತೀರಿ ಅಂತ ಹೇಳಿಕೊಂಡು ಬಂದರಾದ್ರೂ, ವೀಕ್ಷಕರ ನಿರೀಕ್ಷೆ ಮಟ್ಟಕ್ಕೆ ಅವರಿಂದ ಎಂಟರ್ಟೈನ್ ಮೆಂಟ್ ಸಿಗಲಿಲ್ಲ ಎಂಬ ವಾದವಿದೆ.

ಸಿಕ್ಕ ಬಂಗಾರದಂತಹ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಳ್ಳದ ರಘು ಅವರನ್ನ ನೆಟ್ಟಿಗರು ಕಾಲೆಳೆದಿದ್ದು ಸಹ ಉಂಟು. ಏನೇ ಆದರೂ ಸಾಮಾಜಿಕ ಜಾಲತಾಣ ಮೂಲಕ ಖ್ಯಾತರಾದ ಸ್ಪರ್ಧಿಯೊಬ್ಬ ಬಿಗ್ ಬಾಸ್ ಮನೆಯಲ್ಲಿ 13 ವಾರಗಳ ಕಾಲ ಇದ್ದದ್ದು ಕಡಿಮೆ ಸಾಧನೆ ಏನೂ ಅಲ್ಲ. ಇನ್ನು ರಘು ಅವರು ಮನೆಯಿಂದ ಹೊರಬರುವಾಗ ಬಿಗ್ ಬಾಸ್ ಮುಂದಿನ ವಾರದ ಎಲಿಮನೇಷನ್ ಗೆ ಯಾರನ್ನ ಸೇಫ್ ಮಾಡುವಿರಿ ಎಂದು ಕೇಳಿದಾಗ ರಘು ಅವರು, ತಮಮ್ ರೀತಿ ಸಾಮಾಜಿಕ ಜಾಲತಾಣದಿಂದ ಫೇಮಸ್ ಆಗಿರುವ ಶಮಂತ್ ಅವರ ಹೆಸರನ್ನ ಸೂಚಿಸಿ ಅವರನ್ನ ಸೇಫ್ ಮಾಡಿದ್ದಾರೆ. ಇನ್ನು ರಘು ಅವರ ಸಂಭಾವನೆ ವಿಚಾರಕ್ಕೆ ಬಂದರೆ, ವಾರಕ್ಕೆ 30 ಸಾವಿರದಂತೆ, ಹದಿಮೂರು ವಾರಗಳ ಕಾಲ ಬಿಗ್ ಮನೆಯಲ್ಲಿದ್ದ ರಘು ಅವರು ೩ ಲಕ್ಷ ೯೦ಸಾವಿರ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ.