ಈ ಸಲದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಇವರೇ ನೋಡಿ ! ಕಾಮನ್ ಮ್ಯಾನ್ ಪ್ರವೇಶ ?

Entertainment
Advertisements

ಬಿಗ್ ಬಾಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ. ಅದರಲ್ಲೂ ಸ್ಟಾರ್ ನಟ ಸುದೀಪ್ ಇದರ ನಿರೂಪಕ ಆಗಿರುವುದರಿಂದ ಈ ಕಾರ್ಯಕ್ರಮಕ್ಕೆ ವಿಶೇಷ ಮೆರಗು. ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 7 ಬಹಳಷ್ಟು ಯಶಸ್ಸು ಕಂಡಿತ್ತು. ನಂ 1 ರಿಯಾಲಿಟಿ ಶೋ ಎಂಬ ಖ್ಯಾತಿ ಗಳಿಸಿತ್ತು. ಕೋವಿಡ್ ನ ಕಾರಣದಿಂದ ಈ ವರ್ಷ ತುಂಬಾ ತಡವಾಗಿ ಬಿಗ್ ಬಾಸ್ ಶುರುವಾಗುತ್ತಿದೆ. ಇನ್ನೇನು ಈ ಮನೋರಂಜನಾ ಶೋ ಕಿರುತೆರೆಯಲ್ಲಿ ಶುರುವಾಗುತ್ತಿದ್ದು ಈಗಾಗಲೇ ಟೀಸರ್ ಕೂಡ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವುದು ಖಾತರಿಯಾಗಿದೆ.

[widget id=”custom_html-4″]

Advertisements

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಅದರಲ್ಲಿ ಕೆಲವರು ಈ ವರ್ಷ ಬಿಗ್ ಬಾಸ್ ಗೆ ಹೋಗುವುದು ಬಹುತೇಕ ಖಚಿತವಾಗಿದೆ. ಹಾಗಾದ್ರೆ ಈ ಬಾರಿ ಬಿಗ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ನೋಡೋಣ ಬನ್ನಿ..ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ಸಿ ಆಗಿದ್ದ ಸಿಲ್ಲಿ ಲಲ್ಲಿ ಖ್ಯಾತಿಯ ಕಲಾವಿದ, ಬೆಳ್ಳಿ ತೆರೆಯಲ್ಲೂ ಮಿಂಚುತ್ತಿರುವ ರವಿಶಂಕರ್ ಗೌಡ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ.

[widget id=”custom_html-4″]

ಇನ್ನು ಕಿರುತೆರೆಯ ಎಲ್ಲರ ನೆಚ್ಚಿನ ನಟಿ, ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ವೈಷ್ಣವಿ ಅವರು ಈ ಬಾರಿ ಬಿಗ್ ಬಾಸ್ ಗೆ ಹೋಗಲಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸಲ್ ನಲ್ಲಿ ಗುರೂಜಿಯೊಬ್ಬರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಹೌದು, ಖ್ಯಾತ ಗುರುಗಳಾದ ವಿನಯ್ ಗುರೂಜಿ ಬಿಗ್ ಬಾಸ್ ಗೆ ಹೋಗುತ್ತಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಡಿದೆ. ಆದರೆ ಈ ಕುರಿತು ಯಾವುದೇ ಖಚಿತತೆ ಇಲ್ಲ.

[widget id=”custom_html-4″]

ಅಗ್ನಿ ಸಾಕ್ಷಿ ಸೀರಿಯಲ್ ಮೂಲಕ ಫೇಮಸ್ ಆದ ಕಿರುತೆರೆ ನಟ ವಿಜಯ್ ಸೂರ್ಯ. ಬೆಳ್ಳಿತೆರೆ ಮೇಲೆ ಕೂಡ ನಾಯಕ ನಟನಾಗಿ ಮಿಂಚಿದವರು. ಇನ್ನು ಜೊತೆಯಲಿ ಧಾರಾವಾಹಿಯಲ್ಲೂ ಕೂಡ ನಟ ವಿಜಯ್ ಸೂರ್ಯ ನಟಿಸುತ್ತಿದ್ದಾರೆ. ಇವರು ಕೂಡ ಈ ಬಾರಿ ಬಿಗ್ ಬಾಸ್ ಗೆ ಹೋಗಲಿದ್ದಾರೆ. ಕಿರುತೆರೆಯ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಗಾಯಕ ಹನುಮಂತ ಈ ಬಾರಿ ದೊಡ್ಡ ಮನೆಗೆ ಹೋವುದು ಬಹುತೇಕ ಪಕ್ಕಾ ಆಗಿದೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಹನುಮಂತ ಬಿಗ್ ಬಾಸ್ ಗೆ ಹೋಗಬೇಕು ಎಂಬುದು ಪ್ರೇಕ್ಷಕರ ಬೇಡಿಕೆಯಾಗಿದೆ.

ಜನಪ್ರಿಯ ಕಿರುತೆರೆ ಶೋ ಮಜಾ ಟಾಕೀಸ್ ನ ಕಲಾವಿದ ನಟ ವಿಶ್ವಾಸ್ ಅಲಿಯಾಸ್ ಮುತ್ತು ಮಣಿ ಎಂದು ಕರೆಯಲ್ಪಡುವ ನಟ ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ. ಇನ್ನೂ ಅನೇಕರ ಸೆಲೆಬ್ರಿಟಿಗಳ ಹೆಸರು ಕೇಳಿಬರುತಿದ್ದು ಈ ಬಾರಿ ಸಾಮಾನ್ಯ ವ್ಯಕ್ತಿ ಭಾಗವಹಿಸುತ್ತಿಲ್ಲ. ಸುಧಾರಾಣಿ, ಗಾಯಕ ಸುನಿಲ್, ವಿನೋದ್ ರಾಜ್ , ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ, ಮುಂತಾದವರ ಹೆಸರುಗಳು ಕೂಡ ಕೇಳಿಬರುತ್ತಿವೆ.