ಬಿಳಿ ತೊನ್ನು ಚೇಳು ಕಡಿದ್ರೆ ಹೀಗೆ ಹಲವಾರು ರೋಗಗಳಿಗೆ ಮನೆ ಮದ್ದು ಈ ಗಿಡ !

Health

ಬಿಳಿತೊನ್ನು ರೋಗ ಇದು ಚರ್ಮ ಸಂಬಂದಿ ಕಾಯಿಲೆಯಾಗಿದ್ದು ಚರ್ಮದ ಮೇಲೆಲ್ಲಾ ಬಿಳಿಯ ಕಲೆಗಳು ಉಂಟಾಗುತ್ತವೆ. ಹಾಗೂ ಈ ರೋಗ ವಯಸ್ಸಿನ ಭೇದವಿಲ್ಲದೆ ಎಲ್ಲೋ ವಯೋಮಾನದವರಿಗೂ ಸಹ ಭಾದಿಸುತ್ತದೆ. ಆದರೆ ಬಿಳಿತೊನ್ನು ಉಂಟಾಗಲು ಖಚಿತವಾದ ಕಾರಣ ಏನಂತ ಗೊತ್ತಿಲ್ಲವಾದರೂ ವಂಶವಾಹಿ ಕಾರಣದಿಂದ ಈ ರೋಗ ಬರುತ್ತದೆ ಎಂದು ಹೇಳಲಾಗಿದೆ.

ಹಾಗಾದ್ರೆ ಈ ಬಿಳಿತೊನ್ನು ಸೇರಿದಂತೆ ಹಲವಾರು ರೋಗಗಳಿಗೆ ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳಿಂದ ಹಾಗೂ ಕೆಲವೊಂದು ಗಿಡಮೂಲಿಕೆಗಳನ್ನ ಉಪಯೋಗಿಸುವುದರಿಂದ ಇಂತಹ ಕಾಯಿಲೆಗಳಿಂದ ದೂರವಿರಬಹುದು ಎಂದು ಹೇಳಲಾಗಿದೆ. ಬಿಳಿತೊನ್ನು ಕಾಯಿಲೆಗೆ ಮನೆಯ ಮುಂದೆ ಬೆಳೆಯಲಾಗುವ ಬಿಳಿ ಎಕ್ಕದ ಗಿಡ ರಾಮಬಾಣ ಎಂದು ಹೇಳಲಾಗಿದೆ. ಹಾಗಾದ್ರೆ ಉಪಯೋಗಿಸುವುದು ಹೇಗೆಂದು ನೋಡೋಣ ಬನ್ನಿ..

ಬಿಳಿ ತೊನ್ನು ಕಾಯಿಲೆಯಿಂದ ಸಂಕಟಪಡುತ್ತಿರುವವರು ಮೊದಲಿಗೆ ಬಿಳಿ ಎಕ್ಕದ ಗಿಡದ ಬೇರು ಮತ್ತು ಅರಿಶಿನ ಕೊಂಬನ್ನ ತೆಗೆದುಕೊಳ್ಳಿ.. ನೆನಪಿರಲು ಎರಡು ಬಲಿತಿರಬೇಕು.. ಇವೆರಡನ್ನೂ ತಣ್ಣೀರಿನಲ್ಲಿ ಅರೆದು ನಿಮ್ಮ ದೇಹದ ಯಾವ ಭಾಗದಲ್ಲಿ ತೊನ್ನು ಇದೆಯೋ ಆ ಭಾಗಕ್ಕೆ ಹಚ್ಚಿ.. ಇನ್ನು ಪ್ರಥಮವಾಗಿ ನಿಮ್ಮ ದೇಹದ ಸ್ವಲ್ಪ ಭಾಗಕ್ಕೆ ಮಾತ್ರ ಇದನ್ನ ಹಚ್ಚಿ. ನಿಮಗೆ ಗುಣ ಆಗಿದೆ ಅಂತ ಅನ್ನಿಸಿದಮೇಲೆ ಚಿಕಿತ್ಸೆಯನ್ನ ಮುಂದುವರಿಸುವುದು ಉಪಯುಕ್ತ.

ಇನ್ನು ಇದೆ ಎಕ್ಕದ ಗಿಡದ ಬೇರಿನ ತೊಗಟೆ ಹಾಗೂ ಅದಕ್ಕೆ ಸಮತೂಕವಾದ ಕರಿ ಮೆಣಸಿನ ಕಾಳನ್ನ ನುಣ್ಣಗೆ ಪುಡಿ ಮಾಡಿ ಅದರ ಜೊತೆಗೆ ಹಸಿಯಾದ ಶುಂಠಿಯ ರಸದ ಜೊತೆಗೆ ಮಿಕ್ಸ್ ಮಾಡಿ ಅದನ್ನ ಸಣ್ಣ ಗುಳಿಗೆಯನ್ನಾಗಿ ಮಾಡಿ ಅದನ್ನ ನೆರಳಿನಲ್ಲಿ ಒಣಗಿಸಿದ ಬಳಿಕ ನೀರಿನೊಂದಿಗೆ ಸೇವಿಸುವುದರಿಂದ ಕಾಲರಾ ಅಂತಹ ರೋಗಗಳಿಂದ ಕಾಪಾಡಿಕೊಳ್ಳಬಹುದು.

ಚೇಳು ಕಡಿದಲ್ಲಿ : ಒಂದು ವೇಳೆ ನಿಮಗೆ ಚೇಳು ಕಡಿದಲ್ಲಿ ಎಕ್ಕದ ಗಿಡದ ಬೇರನ್ನ ಸರಿಯಾಗಿ ಅರೆದು ಅದನ್ನ ಚೇಳು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಯಾವುದೇ ತೊಂದರೆ ಸಹ ಭಾದಿಸುವುದಿಲ್ಲ.. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಕಾಮೆಂಟ್ ಮಾಡಿ ತಿಳಿಸಿ..