ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಬಾಬ್ ಕಟ್ ಸೆಂಗಮಾಲಂಗೆ ಫಿದಾ ಆದ ನೆಟ್ಟಿಗರು !

News
Advertisements

ಇತ್ತೀಚಿಗೆ ಸಾಮಾಜಿಕ ಜಾಲತಾಣಗಲ್ಲಿ ತಾವೇನು ಕಡಿಮೆಯೆಂಬಂತೆ ಪ್ರಾಣಿಗಳು ಕೂಡ ಫೇಮಸ್ ಆಗುತ್ತಿವೆ. ಜೊತೆಗೆ ಅವುಗಳದ್ದೇ ಆದ ಅಭಿಮಾನಿ ಬಳಗವನ್ನ ಕೂಡ ಹೊಂದಿವೆ. ಈಗ ಇದಕ್ಕೆ ನಿದರ್ಶನವೆಂಬಂತೆ ತಮಿಳುನಾಡಿನ ಆನೆಯೊಂದು ತನ್ನ ವಿಭಿನ್ನ ಹೇರ್ ಸ್ಟೈಲ್ ನಿಂದಲೇ ಹವಾ ಕ್ರಿಯೇಟ್ ಮಾಡಿದೆ. ಇದು ತನ್ನ ಬಾಬ್ ಕಟ್ ಹೇರ್ ಸ್ಟೈಲ್ ನಿಂದಲೇ ತುಂಬಾ ಫೇಮಸ್ ಆಗಿದೆ.

Advertisements

ಅರೆರೆ ಇದೇನಪ್ಪಾ ಬಾಬ್ ಕಟ್ ಎಂದರೆ ಅದು ಹುಡುಗಿಯರ ಹೇರ್ ಸ್ಟೈಲ್ ಅಲ್ಲವೇ..ಬಾಬ್ ಕಟ್ ಗೂ ಆನೆಗೂ ಏನ್ ಸಂಬಂಧ ಅಂತ ನೀವು ಯೋಚಿಸುತ್ತಿರಬಹುದು. ಅದರಲ್ಲೂ ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿರುವ ಆನೆಯನ್ನ ನೀವು ಇದುವರೆಗೂ ನೋಡಿರಲಿಲ್ಲವೇನೋ..ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಆನೆ ತಮಿಳುನಾಡಿನ ಮನ್ನಾರ್ ಗುಡಿಯ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿದ್ದು ಸೆಂಗಮಾಲಂ ಹೆಸರಿನ ಈ ಆನೆ ತನ್ನ ಬಾಬ್ ಕಟ್ ಹೇರ್ ಸ್ಟೈಲ್ ನಿಂದಲೇ ಇದರ ಫೋಟೋಗಳ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ನೋಡಲು ತುಂಬಾ ಮುದ್ದಾಗಿ ಕಾಣುವ ಈ ಆನೆಯನ್ನ ಅದರ ಅಭಿಮಾನಿಗಳು ಬಾಬ್ ಕಟ್ ಸೆಂಗಮಲಾಂ ಎಂದು ಕರೆಯುತ್ತಾರೆ. ಇನ್ನು ಈ ಆನೆಯನ್ನ ವಿಶೇಷವಾಗಿ ಆರೈಕೆ ಮಾಡುತ್ತಿದ್ದು ಬೇಸಿಗೆಕಾಲದಲ್ಲಿ ಮೂರು ಸಾರಿ ಹಾಗೂ ಮಳೆಗಾಲ ಮತ್ತು ಚಳಿಗಾಲದಲ್ಲಿ ದಿನಕ್ಕೊಂದು ಬಾರಿ ಈ ಹೆಣ್ಣಾನೆಯ ಕೂದಲು ತೊಳೆದು ಸ್ನಾನ ಮಾಡಿಸಲಾಗುತ್ತದೆ. ಇನ್ನು ಈ ಸೆಂಗಮಾಲಂ ಆನೆಯ ಆರೈಕೆಯನ್ನ ರಾಜಗೋಪಾಲ್ ಎಂಬ ಮಾವುತನೇ ನೋಡಿಕೊಳ್ಳುತ್ತಿದ್ದು ಆನೆಗೆ ಸೆಕೆಯಾಗದಂತೆ ತಡೆಯುವ ಸಲುವಾಗಿ ೪೫ ಸಾವಿರ ರೂಪಾಯಿಯ ಶವರ್ ಸ್ನಾನದ ವ್ಯವಸ್ಥೆಯನ್ನ ಕೂಡ ಮಾಡಿಸಿದ್ದು ಆ ಆನೆಯ ಬಾಬ್ ಕಟ್ ಹೇರ್ ಸ್ಟೈಲ್ ಕೂಡ ಮಾಡಿರುವುದೇ ಇದೆ ಮಾವುತನೇ.