ಪ್ರತೀದಿನ 40 ಕಪ್ ಟೀ ಕುಡಿಯುತ್ತಾ, 40 ಸಿಗರೇಟ್ ಸೇದುವ ನಟಿ..ಯಾರು ಗೊತ್ತಾ?

Cinema

ಈಗಂತೂ ಟೀ ಕುಡಿಯುತ್ತಾ ಸಿಗರೇಟ್ ಸೇದುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಈ ರೀತಿ ಚಟಕ್ಕೆ ದಾಸರಾದವರು ಅನೇಕರಿದ್ದಾರೆ. ಇದಕ್ಕೆ ಕಲಾವಿದರು ಕೂಡ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದ ರವಿ ಬೆಳೆಗೆರೆಯವರು ಸುದೀಪ್ ಗೆ ಹೇಳಿದ್ದರು ನಾನು ದಿನಕ್ಕೆ ೪೦ ಕ್ಕೂ ಹೆಚ್ಚು ಸಿಗರೇಟ್ ಸೇದುತ್ತೇನೆ ಅಂತ. ಆದರೆ ನಾವೀಗ ಹೇಳಲು ಹೊರಟಿರುವುದು ಬೇರೊಬ್ಬರ ಕಲಾವಿದರ ವಿಚಾರ.

ಇನ್ನು ಕೆಲವು ಬಾಲಿವುಡ್ ಕಲಾವಿದರಂತೂ ಚಟಗಳಿಗೆ ದಾಸರಾಗಿಬಿಟ್ಟಿದ್ದಾರೆ. ನಟರು ಮಾತ್ರವಲ್ಲ, ನಟಿಯರು ಕೂಡ ಚಟಗಳಿಗೆ ದಾಸರಾಗಿಬಿಟ್ಟಿದ್ದಾರೆ. ಹೌದು, ಬಾಲಿವುಡ್ ನ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಹೆಚ್ಚಾಗಿ ಪೋಷಕರ ಪಾತ್ರದಲ್ಲಿ ಮಿಂಚುವ ಈ ಕಲಾವಿದೆಯ ಹೆಸರು ಅಂಜು ಮಹೀಂದ್ರ ಎಂದು. ಇವರ ವಯಸ್ಸು ೭೦ ವರ್ಷ. ಆದರೆ ಇಷ್ಟು ವಯಸ್ಸಾದರೂ ತಮ್ಮ ಚಟಗಳಿಂದಲೇ ಹಿಂದಿ ಫೇಮಸ್ ಆಗಿದ್ದಾರೆ ಈ ನಟಿ.

ಸ್ವತಃ ಈ ನಟಿಯೇ ತಮ್ಮ ಚಟಗಳ ಬಗ್ಗೆ ಮಾತನಾಡಿದ್ದು, ೪೦ಕ್ಕೂ ಹೆಚ್ಚು ಟೀ ಕಪ್ ಜೊತೆಗೆ, ೪೦ ಸಿಗರೇಟ್ ಗಳನ್ನ ಸೇದುತ್ತಾರಂತೆ ಇವರು. ಇವರಿಗೆ ಇಷ್ಟು ವಯಸ್ಸಾಗಿದ್ದರೂ ಇವರ ಜೀವನ ಶೈಲಿಯನ್ನ ನೋಡಿದ್ರೆ ಯಾರಿಗಾದ್ರೂ ಶಾಕ್ ಆಗ್ದೇ ಇರಲ್ಲ. ಹೌದು, ಇವರೇ ಹೇಳುವ ಪ್ರಕಾರ ಈವಾರ ಚಟಗಳಿಂದ ಇವರ ಆರೋಗ್ಯ ಚೆನ್ನಾಗಿದ್ದು, ಫಿಟ್ ಆಗಿದ್ದಾರಂತೆ.

ಒಂದು ಕಡೆ ಧೂಮಪಾನಾ ಆರೋಗ್ಯಕ್ಕೆ ಹಾನಿಕರ ಅಂತ ಹೇಳೋ ಇವರು, ಮತ್ತೊಂದು ಕಡೆ ಇದು ನನಗೆ ಶಕ್ತಿ ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಕೆಲವರು ಹೇಳೋದು ಉಂಟು ಚಟಗಳಿದ್ದರೆ ಕಾಯಿಲೆ ಇರಲ್ಲ. ಆದರೆ ಏನೂ ಚಟ ಇಲ್ಲದವರು ಬೇಗೆ ಅನಾರೊಗ್ಯಕ್ಕೆ ಒಳಗಾಗುತ್ತಾರೆ ಎಂದು ಹೇಳುವ ವಾಡಿಕೆ ಇದೆ. ಹಾಗಂತ ಚಟಗಳಿಗೆ ದಾಸರಾಗುವುದು ತಪ್ಪು. ನೆನಪಿರಲಿ ಅದು ನಮ್ಮ ಸುಂದರವಾದ ಜೀವನವನ್ನೇ ಹಾಳುಮಾಡುತ್ತದೆ.