ಜಗತ್ತಿನಲ್ಲಿಯೇ ಅತೀ ಹೆಚ್ಚು ಬೆಲೆಬಾಳುವ ಈ ಹೂ ಅರಳುವುದನ್ನ ನೋಡುವವರೇ ಅದೃಷ್ಟವಂತರು..

Adhyatma
Advertisements

ಈ ಭೂಮಿಯ ಮೇಲೆ ಹಲವು ಬಗೆಯ ಹೂಗಳಿವೆ. ಕೆಲವೊಂದುನ್ನ ಹೆಂಗಳೆಯರು ಮುಟ್ಟುಕೊಂಡರೆ, ಇನ್ನು ಕೆಲವು ದೇವರ ಪೂಜೆಗೆ ಮಾತ್ರ ಶ್ರೇಷ್ಠ. ಆದರೆ ಇಲ್ಲೊಂದು ವಿಶಿಷ್ಟವಾದ ವಿಭಿನ್ನವಾದಾ ಹೂ ಇದೆ. ಅದು ರಾತ್ರಿ ಸಮಯದಲ್ಲಿ ಮಾತ್ರ ಅರಳುತ್ತೆ. ಇನ್ನು ಈ ವಿಶೇಷವಾದ ಹೂ ಅರಳುವುದನ್ನ ನೋಡಬೇಕೆಂದರೆ ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಿದ್ದೆಗೆಟ್ಟು ಕಾಯಬೇಕು.

[widget id=”custom_html-4″]

Advertisements

ಹೌದು, ರಾತ್ರಿ ಸಮಯದಲ್ಲಿ ಅರಳಿ ಬೆಳಗಾಗುವ ಹೊತ್ತಿಗೆ ಮೂದುಡಿ ಹೋಗುತ್ತದೆ ವಿಸ್ಮಯ ಮೂಡಿಸುವ ಈ ಹೂ. ಇಡೀ ವರ್ಷದಲ್ಲಿ ಒಮ್ಮೆ ಮಾತ್ರ ಅರಳುತ್ತದೆ. ಇನ್ನು ಕಂಡ ಎಲೆಯಾಗಿ, ಎಲೆಯೂ ಹೂವಾಗಿ ಸುಮಾರು ೧೧ಗಂಟೆಗೆ ಅರಳಿ ಬೆಳಗಾಗುವ ಸಮಯಕ್ಕೆ ಮುದುಡಿ ಹೋಗುವ ಈ ಹೂವೇ ಬ್ರಹ್ಮಕಮಲ.

[widget id=”custom_html-4″]

ಹೆಚ್ಚಾಗಿ ಮನೆಯ ಕೈತೋಟದಲ್ಲಿ ಬೆಳೆಸುವ ಈ ಬ್ರಹ್ಮಕಮಲವನ್ನ ಪೂಜ್ಯನೀಯ ಸ್ಥಾನದಲ್ಲಿ ನೋಡಲಾಗುತ್ತೆ. ಹಾಗಾಗಿಯೇ ಮುಡಿಯುವುದಕ್ಕಿಂತ ಹೆಚ್ಚಾಗಿ ಪೂಜೆಗಾಗಿ ಈ ಹೂವನ್ನ ಉಪಯೋಗ ಮಾಡುತ್ತಾರೆ. ಇನ್ನು ಬ್ರಹ್ಮ ಕಮಲ ಅರಳುವುದನ್ನ ನೋಡುವವರೇ ಅದೃಷ್ಟವಂತರು ಎಂದು ಹೇಳಲಾಗಿದೆ. ಇನ್ನು ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಅವರು ಸಿರಿವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಜೊತೆಗೆ ಈ ಹೂ ಅರಳುವುದನ್ನೇ ಕಾದು ನೋಡಿ ತಮ್ಮ ಮನಸ್ಸಿನಲ್ಲಿರಿರುವುದನ್ನ ಬೇಡಿಕೊಂಡರೆ ಈಡೇರುತ್ತದೆ ಎಂಬ ;ನಂಬಿಕೆಯು ಕೂಡ ಇದೆ. ಹಾಗಾಗಿಯೇ ರಾತ್ರಿಯ ಸಮಯದಲ್ಲಿ ಬ್ರಹ್ಮಕಮಲ ಅರಳಿ ಹೂ ಆದಾಗ ಪೂಜೆಯನ್ನ ಮಾಡುತ್ತಾರೆ.

ಇನ್ನು ಹಿಂದೂಗಳ ಪ್ರಕಾರ ಸೃಷ್ಟಿಕರ್ತ ಚತುರ್ಮುಖ ಬ್ರಹ್ಮದೇವರ ಕೈನಲ್ಲಿ ಈ ಹೂ ಇರುವುದರಿಂದ ಇದಕ್ಕೆ ಬ್ರಹ್ಮಕಮಲ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದ್ದು, ಹಿಮಾಲಯ, ಉತ್ತರಖಾಂಡದ ಎತ್ತರದ ಪ್ರದೇಶಗಳಲ್ಲಿ ಈ ಹೂ ಹೆಚ್ಚಾಗಿ ಬೆಳೆಯುತ್ತದೆ ಎಂದು ಹೇಳಲಾಗಿದೆ.