ಆಕ್ಸಿಜೆನ್ ಖರೀದಿಗಾಗಿ ಭಾರತಕ್ಕೆ 1 ಬಿಟ್ ಕಾಯಿನ್ ದೇಣಿಗೆಯಾಗಿ ನೀಡಿದ ಬ್ರೆಟ್ ಲೀ ! 1 ಬಿಟ್ ಕಾಯಿನ್ ಬೆಲೆ ಎಷ್ಟು ಗೊತ್ತಾ ?

Advertisements

ಸ್ನೇಹಿತರೇ, ಬೆಂಗಳೂರು ಸೇರಿದಂತೆ ಇಡೀ ದೇಶದಾದ್ಯಂತ ಕೊ’ರೋನಾ ಸೋಂಕು ತಾಂಡವಾಡುತ್ತಿದೆ. ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ಹೆಚ್ಚಾಗಿದೆ. ಇದರ ನಡುವೆಯೇ ಮೊನ್ನೆಯಷ್ಟೇ ಭಾರತ ಸಂಕಷ್ಟದ ಪರಿಸ್ಥಿತಿಯಲ್ಲಿರುವುದನ್ನ ನೋಡಿದ ಆಸ್ಟ್ರೇಲಿಯಾ ಕ್ರಿಕೆಟರ್ ಪ್ಯಾಟ್​ ಕಮ್ಮಿನ್ಸ್ ಅವರು 50 ಸಾವಿರ ಡಾಲರ್ ಹಣ ಪಿಎಂ ಕೇರ್ ಗೆ ದೇಣಿಗೆಯಾಗಿ ನೀಡುವ ಮೂಲಕ ಇತರೆ ಕ್ರಿಕೆಟ್ ಆಟಗಾರರು ಭಾರತಕ್ಕೆ ದೇಣಿಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈಗ ಪ್ಯಾಟ್​ ಕಮ್ಮಿನ್ಸ್ ಅವರಿಂದ ಪ್ರೇರಣೆ ಪಡೆದ ಅದೇ ದೇಶದವರಾದ ಮಾಜಿ ಬೌಲರ್ ಆಗಿರುವ ಬ್ರೆಟ್ ಲೀ ಆಕ್ಸಿಜೆನ್ ಗಾಗಿ ಒಂದು ಬಿಟ್ ಕಾಯಿನ್ ದಾನ ಮಾಡುವ ಮೂಲಕ ಭಾರತಕ್ಕೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

[widget id=”custom_html-4″]

ಇನ್ನು ಇದರ ಬಗ್ಗೆ ತಮ್ಮ ಜಾಲತಾಣ ಖಾತೆಯಲ್ಲಿ ಟ್ವೀಟ್ ಮಾಡಿರುವ ಬ್ರೆಟ್ ಲೀ ಭಾರತ ದೇಶ ಯಾವಾಗಲು ನನಗೆ ಎರಡನೇ ಮನೆಯಿದ್ದಂತೆ. ಭಾರತೀಯರು ನನ್ನ ನನಗೆ ತೋರಿಸಿದ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಭಾರತೀಯರ ಪ್ರೀತಿಗೆ ನನ್ನ ಹೃದಯದಲ್ಲಿ ವಿಶೇಷವಾದ ಜಾಗವಿದೆ. ಇನ್ನು ಈಗ ಕೊರೋನಾ ಸೋಂಕಿನಿಂದಾಗಿ ಭಾರತೀಯ ಜನರು ಸಂಕಷ್ಟದಲ್ಲಿದ್ದು ನನಗೆ ತುಂಬಾ ನೋವಾಗುತ್ತಿದೆ. ಇನ್ನು ಸ್ವಲ್ಪವಾದರೂ ನನ್ನಿಂದ ಭಾರತೀಯರಿಗೆ ಸಹಾಯವಾಗಬೇಕು ಎಂದು ಆಕ್ಸಿಜೆನ್ ಖರೀದಿಗಾಗಿ ಒಂದು ಬಿಟ್ ಕಾಯಿನ್ ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

[widget id=”custom_html-4″]

Advertisements

ಇನ್ನು ಬ್ರೆಟ್ ಲೀ ಅವರು 1 ಬಿಟ್ ಕಾಯಿನ್ ಅಂದರೆ 40 ಲಕ್ಷ ರೂಪಾಯಿಯನ್ನ ದೇಣಿಗೆಯಾಗಿ ನೀಡಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜೀವ ಒತ್ತೆಯಿಟ್ಟು ದುಡಿಯುತ್ತಿರುವ ಕೊ’ರೋನಾ ವಾರಿಯರ್ಸ್ ಗೆ ಧನ್ಯವಾದ ಹೇಳುತ್ತೇನೆ. ಇನ್ನು ಜನರೂ ಸಹ ಅನಾವಶ್ಯಕವಾಗಿ ಆಚೆ ಬರಬೇಡಿ. ಹೊರಗಡೆ ಬಂದಾಗ ತಪ್ಪದೆ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಪಾಲಿಸಿ. ಆಗಾಗ್ಗೆ ನಿಮ್ಮ ಕೈಗಳನ್ನ ತೊಳೆದುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಖ್ಯಾತ ಕ್ರಿಕೆಟಿಗ ಬ್ರೆಟ್ ಲೀ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.