ಇನ್ನೇನು ವರನಿಗೆ ಹಾರ ಹಾಕಬೇಕು ಅನ್ನೋಷ್ಟರಲ್ಲಿ ಸುದ್ದಿಯೊಂದ ಕೇಳಿ ಕುಣಿದುಕೊಂಡೆ ಹೊರಗಡೆ ಓಡಿದ ವಧು ! ಅಲ್ಲಿ ನಡೆದಿದ್ದನ್ನ ಕೇಳಿದ್ರೆ ಅಚ್ಚರಿ ಪಡುತ್ತೀರಾ..

Kannada News Uncategorized

ಕೆಲ ಮದುವೆಗಳಲ್ಲಿ ಇದ್ದಕಿದ್ದಂತೆ ನಡೆಯೋ ವಿಚಿತ್ರ ಘಟನೆಗಳು ಜನರನ್ನ ಕಕ್ಕಾಬಿಕ್ಕಿಯಂತೆ ಮಾಡಿಬಿಡುತ್ತವೆ. ಇಲ್ಲಿನ ಮದುವೆಯೊಂದರಲ್ಲಿ ನಡೆದ ಈ ಘಟನೆಯೇ ಅದಕ್ಕೆ ಸಾಕ್ಷಿ. ಇನ್ನೇನು ವಧು ವರನಿಗೆ ಹಾರವನ್ನ ಹಾಕಬೇಕು ಅನ್ನುವಷ್ಟರಲ್ಲಿ, ಮಧುಮಗಳು ಇದ್ದಕಿದ್ದಂತೆ ಕಲ್ಯಾಣ ಮಂಟಪದಿಂದ ಓಡಿಹೋಗುತ್ತಾಳೆ. ಹೀಗೆ ವಧು ಕಲ್ಯಾಣಮಂಟಪದಿಂದ ಓಡಿಹೋದದ್ದನ್ನ ನೋಡಿದ ಮದುವೆಗೆ ಬಂದಿದ್ದವರು ಅಕ್ಷರಶಃ ಕಕ್ಕಾಬಿಕ್ಕಿ. ಹೌದು, ತಾನು ಮದುವೆಯಾಗುವ ದಿನವೇ ಇಂತಹ ಒಂದು ಸುದ್ದಿ ಬರುತ್ತಿದೆ ಎಂದು ಆ ಮಧುಮಗಳು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ.

ಹೌದು, ವರನಿಗೆ ವಧು ಹಾರ ಹಾಕುವ ಸಮಯದವರೆಗೂ ಆಕೆಯ ತಲೆಯಲ್ಲಿ ಅದೇ ಸುದ್ದಿಯೇ ಇತ್ತು. ಇನ್ನೇನು ವಧು ವರನಿಗೆ ಹಾರ ಹಾಕಬೇಕು ಅನ್ನುವಷ್ಟರಲ್ಲಿ ಆ ಸುದ್ದಿಯನ್ನ ಯಾರು ಹೇಳಿದ್ರೋ ಗೊತ್ತಿಲ್ಲ, ತಾನು ಮದುವೆಯಾಗುತ್ತಿದ್ದೇನು ಎನ್ನುವುದನ್ನ ಕೂಡ ಮರೆತು ಕುಳಿಯುತ್ತಲೇ ಕಲ್ಯಾಣಮಂಟಪದಿಂದ ಹೊರಟುಹೋಗುತ್ತಾಳೆ. ಇನ್ನು ಮದುವೆಗೆ ಬಂದಿದ್ದವರು ಇಲ್ಲೇನು ನಡೆಯುತ್ತಿದೆ ಎಂದು ಅಕ್ಷರಶಃ ಶಾಕ್ ಆಗಿದ್ದರು. ಇನ್ನು ಈ ಘಟನೆ ನಡೆದಿರೋದು ಉತ್ತರಪ್ರದೇಶದಲ್ಲಿ. ಇನ್ನು ಹೀಗೆ ವರನಿಗೆ ಮಾಲೆ ಹಾಕುವುದನ್ನ ಬಿಟ್ಟು ಹೊರತು ಹೋದ ವಧು ೨೮ವರ್ಷ ವಯಸ್ಸಿನ ಪೂನಂ ಶರ್ಮಾ ಎಂದು. ಆಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ ?

ಪೂನಂ ಶರ್ಮಾ ಹೀಗೆ ಮಾಡಿದಕ್ಕೆ ಕಾರಣವೂ ಇದೆ. ಈಕೆ ಅಲ್ಲಿನ ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಅದರಲ್ಲಿ ಗೆದ್ದಿದ್ದಳು. ಇನ್ನು ಪೂನಂ ಶರ್ಮಾ ಅವರ ಮದುವೆಯ ದಿನದಂದೇ ಪಂಚಾಯತ್ ಚುನಾವಣೆಯ ಎಣಿಕೆ ಕೂಡ ನಿಗದಿಯಾಗಿತ್ತು. ಇನ್ನು ಪೂನಂ ಶರ್ಮಾ ವರನಿಗೆ ಹಾರ ಹಾಕುವ ವೇಳೆ, ತಾನು ಚುನಾವಣೆಯಲ್ಲಿ ಗೆದ್ದಿರುವ ಸುದ್ದಿ ತಿಳಿದು ಪ್ರಮಾಣ ಪಾತ್ರ ಸ್ವೀಕರಿಸುವ ಸಲುವಾಗಿ ಮದುವೆಯ ಮಧ್ಯೆಯೇ ಹೊರಟು ಹೋದಳು. ತಾನಿದ್ದ ಕಲ್ಯಾಣಮಂಟಪದಿಂದ ೨೦ಕಿಮಿ ಅಂತರ ದೂರವಿದ್ದ ಮತ ಎಣಿಕಾ ಕೇಂದ್ರಕ್ಕೆ ಹೋಗಿ ಪ್ರಮಾಣ ಪಾತ್ರ ಸ್ವೀಕರಿಸಿದ್ದಾಳೆ ನವ ವಧು. ಇನ್ನು ಈ ವಿಚಾರ ವರ ಸೇರಿದಂತೆ ಕುಟುಂಬದವರಿಗೆ ಮಾತ್ರ ಗೊತ್ತಿತ್ತೇ ಹೊರತು ಮದುವೆಗೆ ಬಂದ ಅತಿಥಿಗಳಿಗೆ ಗೊತ್ತಿರಲಿಲ್ಲ. ಇನ್ನು ವಧು ತಾನು ಚುನಾವಣೆಯಲ್ಲಿ ಗೆದ್ದ ಪ್ರಮಾಣ ಪತ್ರ ತೆಗೆದುಕೊಂಡು ಬಂದಿರುವುದನ್ನ ನೋಡಿ ಮದುವೆಗೆ ಬಂದಿದ್ದ ಅತಿಥಿಗಳು ಅಚ್ಚರಿಗೊಂಡಿದ್ದಂತೂ ನಿಜ.