ದಶಕಗಳ ಕಾಲ ಸ್ಯಾಂಡಲ್ವುಡ್ ನಲ್ಲಿ ೩೨೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತಮ್ಮ ವಿಭಿನ್ನ ಹಾಸ್ಯ ಅಭಿನಯದಿಂದ ಕನ್ನಡಿಗರನ್ನ ನಗೆಗಡಲಿನಲ್ಲಿ ತೇಲಿಸಿದ ಹಾಸ್ಯರಾಜ ಬುಲೆಟ್ ಪ್ರಕಾಶ್ ಈಗ ನೆನಪು ಮಾತ್ರ. ಆದರೆ ಬಹು ಅಂಗಾಂಗ ವೈಫಲ್ಯದ ಕಾರಣ ಏಪ್ರಿಲ್ 6ರಂದು ಕೊನೆಉಸಿರೆಳೆದರು.

ಇನ್ನು ಲಾಕ್ ಡೌನ್ ಇದ್ದ ಕಾರಣ ಬುಲೆಟ್ ಪ್ರಕಾಶ್ ರವರ ಅಂತಿಮ ಸಂಸ್ಕಾರಕ್ಕೆ ಹೆಚ್ಚಿನ ಜನರಿಗೆ ಅನುಮತಿ ಇರಲಿಲ್ಲ. ಆ ಕಾರಣ ಹೆಚ್ಚಿನ ಜನರಿಗೆ ಬುಲೆಟ್ ಪ್ರಕಾಶ್ ರವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಆ ಕಾರಣ ಪುತ್ರ ರಕ್ಷಕ್ ರವರಿಗೆ ಫೋನ್ ಮಡಿದ ಅನೇಕರು ಸಾಂತ್ವನ ಹೇಳಿದ್ದರು. ಇನ್ನು ಖಾಸಗಿವಾಹಿನಿಯೊಂದರಲ್ಲಿ ಮಾತನಾಡಿದ್ದ ರಕ್ಷಕ್ ತಮ್ಮ ತಂದೆಯ ಕುರಿತು ಹಾಲ್ವು ವಿಷಯಗಳನ್ನ ಹೇಳಿಕೊಂಡಿದ್ದಾರೆ.
ಹೌದು, ರಕ್ಷಕ್ ತನ್ನ ತಂದೆಯ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು ಎಂದು ಹೇಳಿಕೊಂಡಿದ್ದಾರೆ. ಅಪ್ಪ ಯಾವಾಗಲೂ ರೂಮಿನಲ್ಲೇ ಇರುತ್ತಿದ್ದರು. ಯಾವತ್ತೂ ಹಾಲ್ ಗೆ ಬಂದು ಕುಳಿತುಕೊಳ್ಳುತ್ತಿರಲಿಲ್ಲ. ಇನ್ನು ಮಾರ್ಚ್ ೧೯ರಂದು ಅಪ್ಪ ಬಹಳ ವೇದನೆ ಅನುಭವಿಸುತ್ತಿದ್ದರು. ಈ ವೇಳೆ ನಾನು ಅರ್ಜುನ್ ಗುರುಗಳಿಗೆ ವಿಡಿಯೋ ಕಾಲ್ ಮಾಡಿದೆ. ಅದೇ ವೇಳೆ ನನ್ನ ಬಳಿ ಪರ್ಸನಲ್ ಆಗಿ ಮಾತನಾಡಿದಗುರುಗಳು ೧೮ದಿನದ ಬಳಿಕ ಅಪ್ಪ ಕಾಣಿಸೋದಿಲ್ಲ. ಅವರನ್ನ ಚೆನ್ನಾಗಿ ನೋಡಿಕೋ ಎಂದು ಗುರುಗಳು ಎಚ್ಚರಿಸಿದ್ದರು ಎಂದು ರಕ್ಷಕ್ ಹೇಳಿದ್ದಾರೆ.

ಆದರೆ ಗುರುಗಳು ನಿಮ್ಮ ತಂದೆ ೧೮ದಿನಗಳ ನಂತರ ಕಾಣಿಸಿಕೊಳ್ಳೋದಿಲ್ಲ ಎಂದು ಹೇಳಿ, ಅಪ್ಪನನ್ನ ಚೆನ್ನಾಗಿ ನೋಡಿಕೋ ಎಂದಾಗ ನನಗೆ ತುಂಬಾ ನೋವಾಯ್ತು. ಜೊತೆಗೆ ಡೇಟ್ ನ್ನು ಕೂಡ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಲು ಹೇಳಿದ್ದರು. ನಾನು ಈ ವಿಷಯವನ್ನ ಮನೆಯವರೊಂದಿಗೆ ಹೇಳಿಕೊಂಡಿರಲಿಲ್ಲ. ಅವರ್ಯಾರು ನೋವು ಅನುಭವಿಸಬಾರದೆಂದು ಎಂದು ಭಾವುಕರಾಗಿ ರಕ್ಷಕ್ ಹೇಳಿಕೊಂಡಿದ್ದಾರೆ.